ಬೇಲೂರು : ಇಲ್ಲಿನ ಪುರಸಭೆಗೆ ಸೋಮವಾರ ನಡೆಯಲಿರುವ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕಾಂಗ್ರೆಸ್ಸಿನ ಚ.ನಾ.ದಾನಿ, ಉಪಾಧ್ಯಕ್ಷರಾಗಿ ರತ್ನಮ್ಮಸತ್ಯನಾರಾಯಣ ಗಾದಿಗೇರಲಿದ್ದಾರೆ ಎಂದು ತಿಳಿದುಬಂದಿದೆ.
ಕಾಂಗ್ರೆಸ್ ಪಕ್ಷದ ಪುರಸಭೆಯ ೧೭ ಚುನಾಯಿತ ಸದಸ್ಯರು ಹಾಗೂ ಪಕ್ಷದ ಪ್ರಮುಖರು ನಡೆಸಿರುವ ಆಂತರಿಕ ಚರ್ಚೆಯ ನಂತರ ಮೊದಲ ಅವಧಿಗೆ ಅಧ್ಯಕ್ಷರಾಗಿ ಚ.ನಾ.ದಾನಿ ಉಪಾಧ್ಯಕ್ಷರಾಗಿ ಎರಡು ಬಾರಿ ಪುರಸಭಾ ಸದಸ್ಯರಾಗಿದ್ದಂತಹ ರತ್ನಮ್ಮಸತ್ಯನಾರಾಯಣ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ಗೊತ್ತಾಗಿದೆ.
ಸೋಮವಾರ ನಡೆಯಲಿರುವ ಚುನಾವಣೆಯಲ್ಲಿ ಜಾ.ದಳ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವರೊ, ಇಲ್ಲವೊ ಎಂಬುದರ ಮೇಲೆ ಈ ಇಬ್ಬರ ಆಯ್ಕೆ ಅವಿರೋಧವೋ, ಅಥವಾ ಚುನಾವಣೆಯೋ ಎಂಬುದು ತಿಳಿಯಲಿದೆ.