ಬೇಲೂರು : ಹುಟ್ಟು ಹಬ್ಬ ಎಂದರೆ, ಚಿತ್ತಾರದ ಕೇಕ್ ಇರಿಸಿ, ದೀಪ ಹತ್ತಿಸಿ ಇಲ್ಲವೇ ಆರಿಸಿ ಸಿಹಿ ಹಂಚುವುದು, ಉಳಿದಂತೆ ಗುಂಡಿನೊಂದಿಗೆ ಪಾರ್ಟಿಗಳ ಸುರಿಮಳೆ ಇವುಗಳು ಸಹಜವಾಗಿ ಕಾಣಬರುವ ಸಂಗತಿಗಳು.
ಇದಕ್ಕೆ ಅಪವಾದ ಎಂಬಂತೆ ತಾಲ್ಲೂಕಿನ ಹಗರೆ ಗ್ರಾಮದ ಕಾಂಗ್ರೆಸ್ ಯುವಮಿತ್ರರು ಒಗ್ಗೂಡಿ, ರಾಜ್ಯ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ರಕ್ಷಾರಾಮಯ್ಯ ಅವರ ಜನುಮ ದಿನವನ್ನು ಗಿಡ ನೆಡುವ ಮೂಲಕ ಆಚರಿಸಿದ್ದಾರೆ.
ಅದರಲ್ಲೂ ಯುವಕರು ಈ ಜನಪರವಾದ ಹಾಗೂ ಅರ್ಥಪೂರ್ಣವಾದ ಕೆಲಸ ಮಾಡಿದ್ದಾರೆಂದರೆ ಭೇಷ್ ಎನ್ನಲೇಬೇಕು.
ಹಗರೆ ಗ್ರಾಮದ ಹಾಸ್ಟೆಲ್ ಇರುವ ಸ್ಥಳದಲ್ಲಿ ಗಿಡ ನೆಡುವ ಮೂಲಕ ಆಚರಿಸಲಾಗಿದೆ.
https://www.facebook.com/1758752394426553/posts/2741240586177724/?app=fbl
ಪರಿಸರ ಉಳಿವಿಗೆ ಗಿಡಗಳ ನೆಡುವುದು ಆಂದೋಲನದ ರೂಪದಲ್ಲಿ ನಡೆಯುತ್ತಿರುವ ಈ ಸಂದರ್ಭ ಪಾರ್ಟಿ, ಪರಮಾನ್ಯಗಳ ದೂರಮಾಡಿ ಗಿಡ ನೆಡುವ ಮೂಲಕ ಇತರರೂ ಹುಟ್ಟುಹಬ್ಬ ಆಚರಣೆ ಹೇಗೆ ಮಾಡಿಕೊಳ್ಳಬೇಂಬುದಕ್ಕೆ ಮಾದರಿಯಾಗಿದ್ದಾರೆ.
ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ರವೀಶ್ ಬಸವಾಪುರ ಇವರ ನೇತೃತ್ವದಲ್ಲಿ ನಡೆದ ಗಿಡ ನೆಡುವ ಕಾರ್ಯಕ್ರಮದಲ್ಲಿ ಗಿಡ ನೆಟ್ಟು ಮಾತನಾಡಿದ ರವೀಶ್‌ಬಸವಾಪುರ, ರಕ್ಷಾ ರಾಮಯ್ಯ ಅವರ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಬೇಕೆಂಬ ಉದ್ದೇಶದಿಂದ ಗಿಡ ನೆಡುವ ಮೂಲಕ ಆಚರಿಸುತ್ತಿದ್ದೇವೆ. ಇದಕ್ಕೆ ಸ್ನೇಹಿತರೆಲ್ಲರೂ ಕೈಗೂಡಿಸಿದ್ದಾರೆಂದರು.
ಈ ಸಂದರ್ಭ ಹೋಬಳಿ ಅಧ್ಯಕ್ಷ ಎಸ್.ಗೌಡರು, ತಾ.ಪರಿಶಿಷ್ಟಜಾತಿ ವರ್ಗದ ಘಟಕದ ಅಧ್ಯಕ್ಷ ಸತೀಶ್, ಸಂತೋಷ್, ನಾಗರಾಜ್, ಸುನಿಲ್, ಹರ್ಷ, ತಿಲಕ್, ಗೊರೂರು ಸತೀಶ್ ಇದ್ದರು.
೨೬ ಬಿಎಲ್‌ಆರಪಿ-೨
ಬೇಲೂರು ತಾಲ್ಲೂಕು ಹಗರೆ ಗ್ರಾಮದಲ್ಲಿ ರಕ್ಷಾ ರಾಮಯ್ಯ ಅವರ ಹುಟ್ಟುಹಬ್ಬವನ್ನು ಗಿಡ ನೆಡುವ ಮೂಲಕ ಆಚರಿಸಲಾಯಿತು