ಹಾಸನಾಂಬೆ ಸಾರ್ವಜನಿಕ ದರ್ಶನಕ್ಕೆ ಅವಕಾಶ : ಗೊಂದಲಕ್ಕೆ ತೆರೆ ಎಳೆದ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ,


 ಹಾಸನ: ಕಡೆಗೂ ಒತ್ತಡಕ್ಕೆ‌ ಮಣಿದ ಹಾಸನ ಜಿಲ್ಲಾಡಳಿತ ಮತ್ತು ಸರ್ಕಾರ, ಹಾಸನಾಂಬೆ ಸಾರ್ವಜನಿಕ ದರ್ಶನಕ್ಕೆ ಅವಕಾಶ, ಈ ಕುರಿತು ಗೊಂದಲಕ್ಕೆ ತೆರೆ ಎಳೆದ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ,

ಪ್ರತಿವರ್ಷ ದಂತೆ ಈ ವರ್ಷವೂ ೨೮ ರಂದು ಹಾಸನಾಂಬ ದೇವಾಲಯ ಬಾಗಿಲು ತೆರಯಲಿದೆ,
ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಹಾಸನಾಂಬೆ ದರ್ಶನಕ್ಕೆ ಅವಕಾಶ ಕಲ್ಪಿಸದೇ ಇರಲು ತೀರ್ಮಾ ನಿಸಿದ್ದೆವು. ಆದರೆ‌ ರಾಜ್ಯದಲ್ಲಿ ಶಾಲೆಗಳು ಪ್ರಾರಂಭವಾಗಿವೆ, ಕೋವಿಡ್ ಸ್ವಲ್ಪ ಕಡಿಮೆ ಇರುವುದರಿಂದ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸುತ್ತೇವೆ ಎಂದ ಸಚಿವ, ಅ.೨೮, ಮತ್ತು ನ. ೬ ರಂದು ಹೊರತುಪಡಿಸಿ ಉಳಿದ ದಿನಗಳು ದರ್ಶನಕ್ಕೆ ಅವಕಾಶ ಕಲ್ಪಿಸಲು ತೀರ್ಮಾನಿಸಲಾಗಿದೆ.
ದರ್ಶನಕ್ಕೆ ಬರುವವರಿಗೆ ವ್ಯಾಕ್ಸಿನ್ ಕಡ್ಡಾಯಗೊಳಿಸಲಾಗಿದೆ. ವ್ಯಾಕ್ಸಿನ್ ಪಡೆದ ದೃಢೀಕರಣ ಪತ್ರ ಮತ್ತು ಗುರುತಿನ ಚೀಟಿ ಕಡ್ಡಾಯ ಗೊಳಿಸಲಾಗಿದೆ ಎಂದು ಸಚಿವರ ಮಾಹಿತಿ.

Post a Comment

Previous Post Next Post