ಹಾಸನ : ಮಾಜಿ ಸಚಿವ ಎ.ಮಂಜು ಬಿಜೆಪಿಯಲ್ಲಿ ಶಂಕಿತ ವ್ಯಕ್ತಿಯಾಗಿದ್ದು, ಇತ್ತೀಚಿನ ಬೆಳವಣಿಗೆಗಳಿಂದ ಕೆಲವು ಸಂಶಯಗಳು ಉಂಟಾಗಿವೆ ಎಂದು ಪಕ್ಷ ನೀಡಿದ್ದ ಎಲ್ಲಾ ಜವಾಬ್ದಾರಿಗಳಿಂದ ಎ.ಮಂಜುಗೆ ಮುಕ್ತಿಗೊಳಿಸಿ ಆದೇಶ ನೀಡಿದೆ.
ಬಿಜೆಪಿ ರಾಜ್ಯ ಶಿಸ್ತುಸಮಿತಿ ಅಧ್ಯಕ್ಷ ಲಿಂಗರಾಜ್ ಪಾಟೀಲ್‌ರಿಂದ ಆದೇಶ ಹೊರಡಿಸಿ ಇತ್ತೀಚಿನ ಬೆಳವಣಿಗೆಗಳಿಂದ ಕೆಲವು ಸಂಶಯಗಳು ಉಂಟಾಗಿವೆ ಎಂದು ಶರ ಬರೆದಿದ್ದಾರೆ.
ಈ ಕಾರಣದಿಂದ ಪಕ್ಷದ ಮಂಡ್ಯ ಜಿಲ್ಲೆಯ ಪ್ರಭಾರಿ ಮತ್ತುಳಿದ ಎಲ್ಲಾ ಜವಾಬ್ದಾರಿಗಳಿಂದ ನಿಮ್ಮನ್ನು ಮುಕ್ತಿಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಎ.ಮಂಜು ಬಿಜೆಪಿ ಪಕ್ಷದಲ್ಲಿದ್ದು ಅವರ ಮಗ ಮಂಥರ್ ಗೌಡ ಕೊಡಗು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಎಂಎಲ್‌ಸಿ ಚುನಾವಣೆಗೆ ಸ್ಪರ್ಧಿಸಿದ್ದಾರೆ.
ಈ ವಿಚಾರ ಬಿಜೆಪಿ ವಲಯದಲ್ಲಿ ಚರ್ಚೆಗೆ ಕಾರಣವಾಗಿರುವ ಈ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ಎಲ್ಲಾ ಜವಾಬ್ದಾರಿಗಳಿಂದ ಮುಕ್ತಿಗೊಳಿಸಿದೆ
ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಎ ಮಂಜು ಗ್ರಾಸವಾಗಿದ್ದಾರೆ.
ಈ ಬೆಳವಣಿಗೆ ಇವರಿಗೆ ಅನುಕೂಲ ಕರವಾಗಿದ್ದು ಮುಂದೆ ಕಾಂಗ್ರೆಸ್ ಸೇರಲು ದಾರಿ ಸುಗುಮವಾಗಲಿದೆ.
Tags
ರಾಜ್ಯ