ಜೆಡಿಎಸ್ ನ ಸೂರಜ್ ರೇವಣ್ಣ ಅವರನ್ನು ಮಣಿಸಲು ಬಿಜೆಪಿ ಮಾಜಿ ಶಾಸಕ ಹೆಚ್.ಎಂ ವಿಶ್ವನಾಥ್ ಅವರಿಗೆ ಎಂಎಲ್ ಸಿ ಟಿಕೆಟ್ ನೀಡಿದೆ.
ಸಕಲೇಶಪುರ ಕ್ಷೇತ್ರದ ಮಾಜಿ ಶಾಸಕ ಹೆಚ್.ಎಂ ವಿಶ್ವನಾಥ್ ಅವರು ಜೆಡಿಎಸ್ ನಿಂದ ಹೊರಬಂದು ಬಿಜೆಪಿ ಯಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದರು.
ಸಕ್ರಿಯ ರಾಜಕಾರಣಕ್ಕೆ ಬರುವ ಮುನ್ನ ಆರ್ ಎಸ್ ಎಸ್ ಸಂಘಟನೆಯಲ್ಲಿ ವಿಶ್ವನಾಥ್ ತಮ್ಮನ್ನು ಗುರುತಿಸಿಕೊಂಡಿದ್ದರು.
ಜೆಡಿಎಸ್ ಪಕ್ಷದ ರಾಜಕಾರಣಿಗಳು ನಡೆಸುವ ರಾಜಕೀಯ ತಂತ್ರಗಾರಿಕೆಯನ್ನು ಅರಿತಿರುವ ವಿಶ್ವನಾಥ್ ಅವರು ಈ ಚುನಾವಣೆಯಲ್ಲಿ ಗೆಲುವಿನ ಗೆರೆ ದಾಟಲು ಹೇಗೆ ಪ್ರಯತ್ನಿಸುತ್ತಾರೆ ಎಂಬುದನ್ನು ಕಾದುನೋಡಬೇಕಾಗಿದೆ..
Tags
ಹಾಸನ