ಬೇಲೂರು;-ಏಳು ಕೋಟಿ ಕನ್ನಡಿಗರ ಭಾವನ್ಮಾಕ ಕನ್ನಡದ ಧ್ವಜವನ್ನು ಬೆಂಕಿ ಹಚ್ಚಿ ಅಟ್ಟಹಾಸ ಮೆರೆದ, ದ್ರೋಹಿಗಳನ್ನು ಸರ್ಕಾರ ತಕ್ಷಣವೇ ಗಡಿಪಾರು ಮಾಡುವ ಮೂಲಕ ಐತಿಹಾಸಿಕ ಕ್ರಮಕ್ಕೆ ಮುಂದಾಗಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣಶೆಟ್ಟಿ ಬಣ ತಾಲ್ಲೂಕು ಘಟಕದ ಅಧ್ಯಕ್ಷ ವಿ.ಎಸ್.ಬೋಜೇಗೌಡ ನೇತೃತ್ವದಲ್ಲಿ ಬೇಲೂರು ಪಟ್ಟಣದಲ್ಲಿ ಪಂಜಿನ ಮೆರವಣಿಗೆ ನಡೆಸಿ ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದರು.
| ಕನ್ನಡ ಧ್ವಜಕ್ಕೆ ಬೆಳಗಾವಿಯಲ್ಲಿ ಬೆಂಕಿ ಹಚ್ಚಿ ಅಟ್ಟಹಾಸ ಮೆರೆದವರನ್ನು ಶೀಘ್ರವೇ ಗಡಿಪಾರು ಮಾಡಬೇಕು ಎಂದು ಬೇಲೂರು ಕರವೇ (ಪ್ರವೀಣಶೆಟ್ಟಿ ಬಣ) ದಿಂದ ಪಂಜಿನ ಮೆರವಣಿಗೆ ನಡೆಸಿದರು. |
ಕೆಂಪೇಗೌಡ ವೃತ್ತಯಿಂದ ಹೊರಟ ಪಂಜಿನ ಮೆರವಣಿಗೆ ಬಸವೇಶ್ವರ ವೃತ್ತದ ಬಳಿ ಧಾವಿಸಿ, ಕನ್ನಡ ವಿರೋಧಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತ ಪಡಿಸಿದಲ್ಲದೆ, ಜಾಣ ಕುರುಡುತನ ಪ್ರದರ್ಶನಕ್ಕೆ ಮುಂದಾಗಿರುವ ರಾಜ್ಯದ ಸರ್ಕಾರದ ವಿರುದ್ದ ಕೂಡ ಕರವೇ ಕಾರ್ಯಕರ್ತರು ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಪಂಜಿನ ಮೆರವಣಿಗೆ ಪ್ರತಿಭಟನೆಯನ್ನು ಉದ್ಧೇಶಿಸಿ ಮಾತನಾಡಿದ, ತಾಲ್ಲೂಕು ಅಧ್ಯಕ್ಷ ವಿ.ಎಸ್.ಬೋಜೇಗೌಡ, ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚಿದ ಕನ್ನಡ ವಿರೋಧಿಗಳಿಗೆ ಕನ್ನಡ ನಾಡಿನಿಂದ ಗಡೀಪಾರು ಮಾಡಬೇಕು. ಬೆಳಗಾವಿ ಕನ್ನಡ ನಾಡಿಗೆ ಸೇರಿದ್ದು, ಕನ್ನಡ ನಾಡಿನ ಅನ್ನ, ನೀರು ಸೇವಿಸಿದ ನಾಡಿನ ಮಣ್ಣಿನ ಅಶ್ರಯ ಪಡೆದು, ಕನ್ನಡದ ಧ್ವಜವನ್ನು ಸುಟ್ಟುವರು ನಾಡು-ನುಡಿಗೆ ಮಾಡಿದ ದ್ರೋಹವಾಗಿದೆ, ಅಂತವರಿಗೆ ಸರ್ಕಾರ ಮೀನಾ-ಮೇಷ ಎಣಿಸದೆ ಉಗ್ರ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು. ಇತ್ತೀಚಿನ ದಿನದಲ್ಲಿ ಬೆಳಗಾವಿಯಲ್ಲಿ ಎಂಇಎಸ್ ಮತ್ತು ಶಿವಸೇನೆಗಳು ಕನ್ನಡ ನಾಡಿನ ಮೇಲೆ ಕಿತಾಪತಿಗೆ ಮುಂದಾಗುತ್ತಿವೆ. ಈ ಬಗ್ಗೆ ಇಲ್ಲಿನ ಪ್ರಮುಖ ಪಕ್ಷದವರು ಓಟಿನಾಶೆಯಿಂದ ಜಾಣ ಮೌನಕ್ಕೆ ತಾಳಿದ ಕಾರಣದಿಂದಲೇ ಇಂದು ಎಂಇಎಸ್ ಕೆಲ ಪುಡಾರಿಗಳು ಏಳು ಕೋಟಿ ಕನ್ನಡಿಗರ ಭಾವನ್ಮಾಕ ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚಿ ಅವಮಾನ ಮಾಡಿದ್ದಾರೆ. ಸದ್ಯ ಬೆಳಗಾವಿಯಲ್ಲಿ ರಾಜ್ಯ ಸರ್ಕಾರದ ಚಳಿಗಾಲದ ಅಧಿವೇಷನ ನಡೆಯುತ್ತಿರುವ ಸಂದರ್ಭದಲ್ಲಿ ಕನ್ನಡ ನಾಡಿಗೆ ಅವಮಾನದ ಬಗ್ಗೆ ಅಧಿವೇಶದಲ್ಲಿ ೨೨೪ ವಿಧಾನಸಭಾ ಸದಸ್ಯರು ಒಟ್ಟಾಗಿ ಕೂಡಿ ಈ ಕೃತ್ಯವನ್ನು ಖಂಡಿಸಿ, ಗಡಿಪಾರಿಗೆ ಮುಂದಾಗಬೇಕಿದೆ ಎಂದು ಹೇಳಿದರು.
ತಾಲ್ಲೂಕು ಕರವೇ ಸಾಂಸ್ಕೃತಿಕ ಘಟಕದ ಅಧ್ಯಕ್ಷ ಗಣೇಶ್ ಮಾತನಾಡಿ, ಕರ್ನಾಟಕದ ಗಡಿಭಾಗದಲ್ಲಿನ ಬೆಳಗಾವಿ ನಮಗೆ ಸೇರಬೇಕು ಎಂದು ಹಲವು ದಶಕಗಳಿಂದ ಮಹಾರಾಷ್ಟç ವಿನಾಃಕಾರಣ ಗೊಂದಲವನ್ನು ಸೃಷ್ಟಿಗೆ ಮುಂದಾಗಿರುವುದು ನಿಜಕ್ಕೂ ಶೋಚನೀಯವೇ ಸರಿ. ಮಹಾರಾಷ್ಟçದ ಸಾಂಗ್ಲಿ, ಸೋಲ್ಲಾಪುರ ಸೇರಿದಂತೆ ಇನ್ನು ಮುಂತಾದ ಪ್ರದೇಶ ಕನ್ನಡ ನಾಡಿಗೆ ಸೇರಬೇಕು. ಈ ನಿಟ್ಟಿನಲ್ಲಿ ಒಕ್ಕೂಟದ ವ್ಯವಸ್ಥೆಯಿಂದ ನಮಗೆ ಅನ್ಯಾಯವಾಗಿದೆ. ಕೂಡಲೇ ಕೇಂದ್ರ ಸರ್ಕಾರ ಮದ್ಯೆ ಪ್ರವೇಶಿಸಿ, ಕರ್ನಾಟಕ ಮತ್ತು ಮಹಾರಾಷ್ಟç ರಾಜ್ಯದ ನಾಡು,ಜಲದ ಗೊಂದಲವನ್ನು ಬಗೆಹರಿಸಲು ಮುಂದಾಗಬೇಕು ಇಲ್ಲವಾದರೆ ಕರವೇ ಮುಂದಿನ ದಿನದಲ್ಲಿ ಕೇಂದ್ರದ ದ್ವಿಮುಖತನದ ವಿರುದ್ಧ ಪ್ರತಿಭಟನೆ ನಡೆಸುವುದು ಖಚಿತವೆಂದರು.
ಪ್ರತಿಭಟನೆಯಲ್ಲಿ ಕರವೇ ತಾಲ್ಲೂಕು ಯುವ ಘಟಕದ ಅಧ್ಯಕ್ಷ ಅರಣ್‌ಸಿಂಗ್, ಕಾರ್ಯದರ್ಶಿ ಜಯಪ್ರಕಾಶ್, ನಗರಾಧ್ಯಕ್ಷ ಕಾರ್ತಿಕ್, ಕರವೇ ಮಾದ್ಯಮ ವಕ್ತಾರರಾದ ರವಿಹೊಳ್ಳ, ಆರಾಧ್ಯ, ಪದಾಧಿಕಾರಿಗಳಾದ ಮೋಹಿತ್,ಚಂದನ್, ಶಿವು, ಪ್ರಕಾಶ್, ಲೋಕೇಶ್,ದೀಪು, ಜನಾರ್ಧನ್ ಸೇರಿದಂತೆ ಇನ್ನು ಮುಂತಾದವರು ಹಾಜರಿದ್ದರು.
ಅರಣ್‌ಸಿಂಗ್. ತಾಲ್ಲೂಕು ಯುವ ಘಟಕದ ಅಧ್ಯಕ್ಷರು.
;-ಕನ್ನಡಿಗರ ಬಾವನ್ಮಾಕ ವಿಷಯದ ಮೇಲೆ ಇತ್ತೀಚಿನ ದಿನದಲ್ಲಿ ದಬ್ಬಾಳಿಕೆ ಮತ್ತು ದೌರ್ಜನ್ಯ ನಡೆಯುತ್ತಿರುವುದು ಇಲ್ಲಿನ ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ಸರ್ಕಾರ ನಾಡಿನ ಧ್ವಜ ಸೇರಿದಂತೆ ನಾಡು-ನುಡಿ-ಜಲಕ್ಕೆ ದೋಹ ಬಗೆದವರ ಮೇಲೆ ಕಠಿಣ ಕ್ರಮಕೈಗೊಳ್ಳಲು ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನ ನಿಜಕ್ಕೂ ಮಾದರಿಯಾಗುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಇತ್ತ ಕಡೆ ಗಮನ ನೀಡಬೇಕು ಎಂದರು.