ಬೆಂಗಳೂರು: ಭಾರದ್ವಾಜ್ ಸ್ಟೂಡಿಯೋಸ್ ನಿರ್ಮಿಸಿರುವ ನಿತಿನ್ ಭಾರದ್ವಾಜ್ ನಿರ್ದೇಶನದ "ಬಾಲು ಅಂತರಂಗ" ಸಾಕ್ಷ್ಯಚಿತ್ರ ಸರಣಿ ಇದೇ ರವಿವಾರ ಡಿಸೆಂಬರ್ 18ರಂದು ತೆರೆ ಕಾಣಲಿದೆ.
ಮೇರು ಗಾಯಕ ದಿವಂಗತ ಬಾಲಸುಬ್ರಹ್ಮಣ್ಯಂ ಅವರ ಬಗೆಗಿನ ಸಾಕ್ಷ್ಯಚಿತ್ರ ಸರಣಿ ಇದಾಗಿದ್ದು ಬಾಲಸುಬ್ರಹ್ಮಣ್ಯಂ ಅವರ ಜೀವನದ ಸಚಿತ್ರ ವಿವರಗಳನ್ನು ಗಾಯನ ಪ್ರೇಮಿಗಳಿಗೆ ನೀಡಲಿದೆ. ಖ್ಯಾತ ನಟ ದಿವಂಗತ ಶಿವರಾಂ ಸೇರಿದಂತೆ ಅನೇಕ ಮೇರು ನಟರು, ಗಾಯಕ-ಗಾಯಕಿಯರು ಹಾಗೂ ಸಂಗೀತ ನಿರ್ದೇಶಕರು ಶ್ರೀ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರೊಂದಿಗೆ ಕಳೆದ ನೆನಪುಗಳನ್ನು ಹಂಚಿಕೊಂಡಿದ್ದಾರೆ.
ಇದೇ ಭಾನುವಾರ ಭಾರದ್ವಾಜ್ ಸ್ಟುಡಿಯೋಸ್ ಯೂಟ್ಯೂಬ್ ಚಾನೆಲ್ ಮೂಲಕ ಸಾಕ್ಷ್ಯಚಿತ್ರ ಸರಣಿ ತೆರೆ ಕಾಣಲಿದೆ.