ಹಾಸನ : ಹೆಚ್.ಡಿ.ರೇವಣ್ಣ ಅವರು ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಹಾಸನದಲ್ಲಿನ ಇಂಜಿನಿಯರಿಂಗ್ ಕಾಲೇಜಿಗೆ ಅನುದಾನ ಬಿಡುಗಡೆ ಮಾಡಿ ಪಿಠೋಪಕರಣ ಮತ್ತು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಬೇಕಾದ ಅನುಕೂಲತೆಗಳನ್ನು ಮಾಡಿಕೊಡುವಂತೆ ಮನವಿ ಮಾಡಿದ್ದಾರೆ. ಅಲ್ಲದೆ ಉಪನ್ಯಾಸಕರ ಹುದ್ದೆ ಕೂಡ ಇಲ್ಲಿ ಖಾಲಿ ಇದ್ದು, ಅತಿಥಿ ಉಪನ್ಯಾಸಕರು ಸಂಪೂರ್ಣವಾಗಿ ಇಲ್ಲದಂತಾಗಿದೆ. ಹೀಗಾಗಿ ಸೂಕ್ತ ಪರಿಹಾರ ದೊರಕಿಸಿಕೊಡುವಂತೆ ಸಭಾಧ್ಯಕ್ಷರಲ್ಲಿ ಮನವಿ ಮಾಡಿದ್ದಾರೆ. ಸರ್ಕಾರಿ ಶಾಲಾ- ಕಾಲೇಜುಳಿಗೆ ಲಾಕ್ಡೌನ್ ನಂತರ ಮಕ್ಕಳ ಒಲವು ಹೆಚ್ಚಾಗಿದೆ ಎಂದು ಕೂಡ ಹೆಚ್.ಡಿ ರೇವಣ್ಣ ಈ ವೇಳೆ ಪ್ರಸ್ತಾಪಿಸಿದ್ದಾರೆ.
ಹಾಸನದ ಇಂಜಿನಿಯರಿಂಗ್ ಕಾಲೇಜಿಗೆ ಪಿಠೋಪಕರಣ ವ್ಯವಸ್ತೆ ಮಾಡಿ : ಹೆಚ್.ಡಿ.ರೇವಣ್ಣ
0