ಬೇಲೂರು :- ರಸ್ತೆಬದಿಯ ವಿದ್ಯುತ್ ಕಂಬಕ್ಕೆ ಮಾರುತಿ ಜೆನ್ ಕಾರು ಡಿಕ್ಕಿ ಹೊಡೆದ ಪರಿಣಾಮ ಅರಕಲಗೂಡು ಮೂಲದ ಸುದೀಪ್ (22) ಮೃತಪಟ್ಟಿದ್ದು ಕಾರಿನಲ್ಲಿದ್ದ ಮತ್ತೊಬ್ಬರು ಗಾಯಗೊಂಡಿರುವ ಘಟನೆ ತಾಲೂಕಿನ ಮಲ್ಲಿಕಾರ್ಜುನಪುರದ ಬಳಿ ನೆಡೆದಿದೆ.
ಅರಕಲಗೂಡು ಪಟ್ಟಣ ಪಂಚಾಯತಿ ಮಾಜಿ ಉಪಾಧ್ಯಕ್ಷರಾದ ಬೀರಪ್ಪರವರ ಪುತ್ರ ಸುಧೀಪ್ (22) ಮೃತ ದುರ್ದೈವಿಯಾಗಿದ್ದು, ಬೇಲೂರಿನ ಬಳಿ ತಮ್ಮ ಜೋಳದ ಜಮೀನಿನಲ್ಲಿ ಕೆಲಸಮಾಡುತಿದ್ದ ಕೆಲಸಗಾರರಿಗೆ ಊಟ ತರಲು ಕಾರಿನಲ್ಲಿ ಬೇಲೂರು ತಾಲೂಕಿನ ಹಗರೆಗೆ ಬರುವಾಗ ತಾಲೂಕಿನ ಮಲ್ಲಿಕಾರ್ಜುನಪುರದ ಬಳಿ ಎದುರಿನಿಂದ ಬಂದ ಮತ್ತೊಂದು ವಾಹನಕ್ಕೆ ರಸ್ತೆ ಬಿಡಲುಹೋಗಿ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡ ಸುದೀಪ್ ಎಂಬ ಯುವಕನನ್ನು ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೋಯ್ಯುವ ಮಾರ್ಗ ಮದ್ಯೆ ಮೃತಾಪಟ್ಟಿದ್ದಾರೆ.
ಘಟನಾ ಸಂಬಂಧ ತಾಲೂಕಿನ ಹಳೇಬೀಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Tags
ಬೇಲೂರು