ಶಿರಾಡಿಘಾಟ್ ಸಂಚಾರ ನಿರ್ಬಂಧ ಕುರಿತು ಜ 20 ರ ನಂತರ ತೀರ್ಮಾನ

ಹಾಸನ: ರಸ್ತೆ ಕಾಮಗಾರಿ‌ ನಡೆಸುಲು  ಶಿರಾಡಿಘಾಟ್ ಮುಚ್ಚುವ ಕುರಿತಂತೆ ಜ 20 ರಂದು  ಜನಪ್ರತಿನಿಧಿಗಳು, ಹಾಸನ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಗಳು  ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಜಂಟಿ ಸ್ಥಳ ಪರಿಶೀಲನೆ ‌ ನಡೆಸಿ ನಂತರ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಗಿದೆ.

  



   ಆನೆ ಮಹಲ್ ನಿಂದ  ಮಾರನಹಳ್ಳಿ ವರಗೆ  ರಸ್ತೆ ಕಾಮಗಾರಿಗಾಗಿ ಶಿರಾಡಿಘಾಟ್ ನಲ್ಲಿ ವಾಹನ ಸಂಚಾರ ನಿಷೇಧ ‌ಮಾಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾಡಿರುವ   ಮನವಿಯ ಕುರಿತು ಚರ್ಚಿಸಲು ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ  ಮಹತ್ವದ ಸಭೆ ಹಾಗೂ ವಿಡಿಯೋ ಸಂವಾದದಲ್ಲಿ ಈ  ತೀರ್ಮಾನ ಕೈ ಗೊಳ್ಳಲಾಗಿದೆ.

 ಲೋಕಸಭಾ ಸದಸ್ಯರಾದ ಪ್ರಜ್ವಲ್ ರೇವಣ್ಣ ಹಾಗೂ ಶಾಸಕರಾದ  ಹೆಚ್ . ಕೆ.ಕುಮಾರಸ್ವಾಮಿ ಅವರು ಈ ವರಗಿನ ಕಾಮಗಾರಿಯಲ್ಲಿ ಆಗಿರುವ ಕುಂಠಿತ, ನಿರ್ಲಕ್ಷ್ಯ ಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.


ಹಲವು ವರ್ಷಗಳಾದರೂ‌ ಕಾಮಗಾರಿ ಕುಟುಂತ್ತಾ ಸಾಗಿದೆ. ಇದು ರಾಜ್ಯದ ಪ್ರಮುಖ ಜೀವ  ಮಾರ್ಗ. ಬಂದರಿನಿಂದ ಬರುವ ಔಷಧಿ ,ಸಾಮಗಿ ಸರಕುಗಳು ಹಾಸನ ಬೆಂಗಳೂರು ತಲುಪಲು ಇದು ಮುಖ್ಯ ರಸ್ತೆ. ಮುಂದಿನ ಎರೆಡು ತಿಂಗಳ ಅವಧಿಯಲ್ಲಿ ಹಾಸನದಿಂದ ಸಕಲೇಶಪುರದ ವರಗಿನ ಒಂದು ಬದಿಯ(ಎರೆಡು‌ ಲೈನ್ ) ರಸ್ತೆ ಕಾಮಗಾರಿ  ಪೂರ್ತಿ ಮುಕ್ತಾಯ ಗೊಳಸಿದರೆ ಮಾತ್ರ ನಂತರದ ಕಾಮಗಾರಿಗೆ ತಾತ್ಕಾಲಿಕವಾಗಿ ವಾಹನ ಸಂಚಾರಕ್ಕೆ  ಮಾರ್ಗ ಮುಚ್ಚುವ ಬಗ್ಗೆ ಪರಿಶೀಲನೆ ನಡೆಸಬಹುದಾಗಿದೆ ಎಂದು ಲೋಕ‌ಸಭಾ ಸದಸ್ಯರಾದ ಪ್ರಜ್ವಲ್ ರೇವಣ್ಣ ತಿಳಿಸಿದರು.


ಶಾಸಕರಾದ ಕುಮಾರಸ್ವಾಮಿ ಅವರು‌ ಸಹ  ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳೊಂದಿಗೆ ಮಾತನಾಡಿ‌ ಗುತ್ತಿಗೆದಾರರು ಈವರೆಗೆ ನಡೆಸಿರುವ ಕಾಮಗಾರಿ ಗಮನಿಸಿದರೆ ಉಳಿದ ಕಾಮಗಾರಿ

ಮುಗಿಸಲು ವರ್ಷಗಳೇ ಬೇಕಾಗಬಹುದು ಹಾಗಾಗಿ ಮೊದಲು ಕೆಲಸ ಮಾಡಿ ಭರವಸೆನ ಮೂಡಿಸಿದರೆ ಮಾತ್ರ ದೋಣಿಗಾಲ್ ಮಾರನ ಹಳ್ಳಿ ರಸ್ತೆ ತಾತ್ಕಾಲಿಕವಾಗಿ ಮುಚ್ಚುವ ಬಗ್ಗೆ ಪರಿಶೀಲಿಸಲಾಗುವುದು ಎಂದರು .


ಈ ವರಗಿನ  ಕಾಮಗಾರಿ ತಮಗೆ ತೃಪ್ತಿ ತಂದಿಲದಲ ಗುಣಮಟ್ಟ ಕೂಡ ಖಾತರಿ ಪಡಿಸಬೇಕಿದೆ ಎಂದು ಅವರು ಹೇಳಿದರು.


ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರಾಜನ್ ಅವರು ಸಹ ವಿಡಿಯೋ ‌ಸಂವಾದದಲ್ಲಿ‌ ಮಾತನಾಡಿ ಚಾರ್ಮುಡಿ ,ಸಂಪಾಜೆ ,ಬಿಸಿಲೆ ಘಾಟ್ ಗಳಲ್ಲಿ‌ ದೊಡ್ಡ ವಾಹನಗಳ  ಸಂಚಾರ ಸಾಧ್ಯವಿಲ್ಲದ ಕಾರಣ ಬಂದರು ನಗರಿ ಮಂಗಳೂರಿನಿಂದ  ರಾಜದಾನಿ ಬೆಂಗಳೂರಿಗೆ ಸಂಪರ್ಕ ಕಲ್ಪಿಸಲು ಶಿರಾಡಿಘಾಟ್ ಉಳಿದಿರುವ ಏಕೈಕ ‌ಮಾರ್ಗವಾಗಿದೆ .ಇದನ್ನು ಸುಧೀರ್ಘ ಕಾಲ ಮುಚ್ಚಿ ದರೆ ಜನ ಜೀವನ,ಕೈಗಾರಿಕೆ ಆರ್ಥಿಕತೆ ಮೇಲೆ ದೊಡ್ಡ ಪರಿಣಾಮ ಬೀರಲಿದೆ .‌ಕಾಮಗಾರಿ ಪ್ರಗತಿ ಕೂಡ ಆಶಾದಾಯಕವಾಗಿಲ್ಲದ ಕಾರಣ ರಸ್ತೆ ಮುಚ್ಚುವ ಬಗ್ಗೆ ಪರಿಶೀಲನೆ ‌ನಡೆಸುವುದು ಅಗತ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.


ರಾಷ್ಟ್ರೀಯ ‌ಹೆದ್ದಾರಿ ಪ್ರಾಧಿಕಾರದ ಮುಖ್ಯ ಇಂಜಿನಿಯರಿಂಗ್ ಜಾನ್ ಬಾಜ್ ಅವರು ಮಾತನಾಡಿ ಕಾಮಗಾರಿಗೆ ಹೆಚ್ಚಿನ ಕಾರ್ಮಿಕರು ಯಂತ್ರೋಪಕರಣಗಳನ್ನು ಬಳಸಿ ಆದಷ್ಟು ಶೀಘ್ರ  ಕಾಮಗಾರಿ ಮುಗಿಸಲಾಗುವುದಉಳಿದಿರು ಭಾಗವಾಗಿರುವುದರಿಂದ ಕೆಲಸ ಮಾಡಲು ಅವಕಾಶ ಇರುವ ಉಳಿದಿರುವ ಕೆಲತಿಂಗಳು ಶಿರಾಡಿಘಾಟ್ ರಸ್ತೆ ಬಂದ್ ಮಾಡಿ ಸುಗಮ ಕಾಮಗಾರಿಗೆ ಅವಕಾಶ  ಒದಗಿಸಬೇಕು ಎಂದು ಮನವಿ ಮಾಡಿದರು


ಜಿಲ್ಲಾಧಿಕಾರಿ ಆರ್ ಗಿರೀಶ್ ಅವರು ಮಾತನಾಡಿ ಈಗಾಗಲೆ ಸಾಕಷ್ಟು ಅವಕಾಶಗಳನ್ನು ನೀಡಲಾಗಿತ್ತು ಆದರೆ ನಿರೀಕ್ಷಿತ ಪ್ರಗತಿ‌ ಈವರೆಗೂ ಕಾಣಲೇ ಇಲ್ಲ.ಸಕಲೇಶಪುರ ಹಾಸನ‌ ಮಾರ್ಗ ‌ಒಂದು ಬದಿಯಾದರೂ ಮುಕ್ತಾಯ ಗೊಳಿಸಿ  ಮುಂದಿನ‌ ಉದ್ದೇಶಿತ ಕಾಮಗಾರಿಯ ವಾರವಾರು ಪ್ರಗತಿ ಯೋಜನೆ ಅದಕ್ಕೆ ಬಳಸುವ ಕೆಲಸಗಾರರು, ಯಂತ್ರೋಪಕರಣಗಳು, ಸಾಮಗ್ರಿಗಳ ದಾಸ್ತಾನು ಲಭ್ಯತೆಯ ಯೋಜನ ವರದಿ ನಿಖರವಾಗಿ ನೀಡಬೇಕು‌ ಎಂದು ಸೂಚಿಸಿದರು.


ಜ.20 ರಂದು ಲೋಕಸಭಾ ಸದಸ್ಯರು, ಶಾಸಕರು, ಸ್ಥಳೀಯ ಸಂಘ ಸಂಸ್ಥೆಗಳು ಸಾರ್ವಜನಿಕರ ಸಮ್ಮುಖದಲ್ಲಿ   ಹಾಸನ  ಮತ್ತು ಮಂಗಳೂರು ಜಿಲ್ಲಾಡಳಿತದ ಅಧಿಕಾರಿಗಳು  ಜಂಟಿ ಸ್ಥಳ ಪರಿಶೀಲನೆ ಮಾಡಿ ,ಸಭೆ  ನಡೆಸಿ ನಂತರ ಅಭಿಪ್ರಾಯ ಹಾಗೂ ವಾಸ್ತವ ಸ್ಥಿತಿಗತಿ ಪರಿಶೀಲನೆ ‌ನಡೆಸಿ ನಂತರ ನಿರ್ಧಾರ ಕೈಗೊಳ್ಳಲಾಗುವುದು ಎಂದು ಆರ್ ಗಿರೀಶ್ ಹೇಳಿದರು.


 ಕಾಮಗಾರಿ ತುಂಬಾ ವಿಳಂಬವಾಗಿದೆ. ಕೆಲಸ ಮಾಡಲು ಗುತ್ತಿಗೆದಾರರು ಈಗ ಮುಂದೆ ಬಂದಿದ್ದಾರೆ ಅದಕ್ಕೆ  ನಿರಾಕರಿಸಿದರೆ ಅವಕಾಶ ಮಾಡಿಕೊಡಲಿಲ್ಲ  ‌ಎಂಬ ಆರೋಪವೂ ಬರಬಹುದು‌ ಎರೆಡು ಜಿಲ್ಲೆಗಳ ಜನರ ಹಿತಾಸಕ್ತಿ, ರಸ್ತೆ ಕಾಮಗಾರಿ ‌ಪ್ರಗತಿಯ ಅನಿವಾರ್ಯತೆ, ಗುತ್ತಿಗೆ ದಾರರ ಸಾಮರ್ಥ್ಯ ಎಲ್ಲಾ ವನ್ನು ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಜ20 ರ ನಂತರ ಈ ಕುರಿತು ತೀರ್ಮಾನ ಮಾಡಬಹುದಾಗಿದೆ ಎಂದು‌ ಜಿಲ್ಲಾಧಿಕಾರಿ ‌ಆರ್ ಗಿರೀಶ್ ಅಭಿಪ್ರಾಯ ವ್ಯಕ್ತಪಡಿಸಿದರು.


ಇದೇ ವೇಳೆ  ರಸ್ತೆ ಹೋರಾಟ ಸಮತಿಯ ಪದಾಧಿಕಾರಿಗಳು ‌ಸಹ ಸಭೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Post a Comment

Previous Post Next Post