ಶಿವಲಿಂಗ ಬೆಡಗಿ ವೇದಿಕಾ : ಈಗ ಎಂಟ್ರಿಕೊಟ್ಟಿದ್ದೆಲ್ಲಿಗೆ..?

‘ಅರ್ಜುನ್​ ಗೌಡ’ ಸಿನಿಮಾದ ಮೂಲಕ 2022 ರನ್ನು ಗ್ರ್ಯಾಂಡ್​ ವೆಲ್ಕಮ್​ ಮಾಡಿದ್ದ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್‌ ವರ್ಷಾರಂಭದಲ್ಲಿ ಮತ್ತೊಂದು ಸಿನಿಮಾವನ್ನು ಅನೌನ್ಸ್​ ಮಾಡಿದ್ದಾರೆ. ಪ್ರಜ್ವಲ್​​ ಮುಂದಿನ ಸಿನಿಮಾ ‘ಗಣ’ ಎಂದು ಕನ್ಫರ್ಮ್​ ಆಗಿದೆ. ಆದರೆ ಚಿತ್ರಕ್ಕೆ ನಾಯಕಿ ಯಾರು ಎಂದು ಪಕ್ಕಾ ಆಗಿರಲಿಲ್ಲ.

ಆದರೆ ಈಗ ನಾಯಕಿ ಸ್ಥಾನಕ್ಕೆ ‘ಶಿವಲಿಂಗ’ ಬೆಡಗಿ ನಟಿ ವೇದಿಕಾ ‘ಗಣ’ ಸಿನಿಮಾದ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಗಣ ಸಿನಿಮಾಗೆ ಗಣಪತಿ ದೇವಸ್ಥಾನದಲ್ಲಿ ಇತ್ತೀಚಿಗಷ್ಟೇ ಮುಹೂರ್ತ ನೆರವೇರಿತ್ತು. ಚಿತ್ರದ ಮೊದಲ ದೃಶ್ಯಕ್ಕೆ ವಿತರಕ ದೇವೇಂದ್ರ ರೆಡ್ಡಿ ಕ್ಲಾಪ್​​ ಮಾಡಿದ್ದರೆ, ಪ್ರಜ್ವಲ್ ಪತ್ನಿ ರಾಗಿಣಿ ಚಂದ್ರನ್ ಕ್ಯಾಮೆರಾ ಚಾಲನೆ ನೀಡಿದ್ದರು.

ಇದೀಗ ಆ ಸಿನಿಮಾ ತಂಡದಿಂದ ಒಂದು ಅಪ್‌ಡೇಟ್ ಸಿಕ್ಕಿದೆ. ಚಿತ್ರಕ್ಕೆ ಮತ್ತೋರ್ವ ನಟಿಯ ಎಂಟ್ರಿಯಾಗಿದೆ. ಹೌದು, ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ಗುರುತಿಸಿಕೊಂಡಿರುವ ನಟಿ ವೇದಿಕಾ ಈಗ ‘ಗಣ’ ಚಿತ್ರಕ್ಕೆ ಎಂಟ್ರಿ ನೀಡಿದ್ದಾರೆ. 2008 ರಲ್ಲಿ ತೆರೆಕಂಡ ‘ಸಂಗಮ’ ಚಿತ್ರದಲ್ಲಿ ಗಣೇಶ್‌ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದರು ವೇದಿಕಾ.

ಆ ನಂತರ 2016ರಲ್ಲಿ ತೆರೆಗೆ ಬಂದ ‘ಶಿವಲಿಂಗ’ ದಲ್ಲಿ ಶಿವರಾಜ್‌ಕುಮಾರ್‌ಗೆ ನಾಯಕಿಯಾಗಿದ್ದರು. ಸದ್ಯ ಸಾಕಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿರುವ ವೇದಿಕಾ ಮತ್ತೆ ಸ್ಯಾಂಡಲ್‌ವುಡ್‌ಗೆ ರೀ ಎಂಟ್ರಿ ಕೊಟ್ಟಿದ್ದಾರೆ. ಅವರ ಪಾತ್ರ ಹೇಗಿರಲಿದೆ ಎಂಬುದರ ಬಗ್ಗೆ ನಿರ್ದೇಶಕರು ಯಾವುದೇ ಮಾಹಿತಿ ಹಂಚಿಕೊಂಡಿಲ್ಲ.

ಅಂದಹಾಗೆ, ಈ ಸಿನಿಮಾವನ್ನು ಹರಿ ಪ್ರಸಾದ್ ಜಕ್ಕ ನಿರ್ದೇಶನ ಮಾಡುತ್ತಿದ್ದಾರೆ. ತೆಲುಗಿನ ‘ದರ್ಶಕುಡು’ ಸಿನಿಮಾಗೆ ನಿರ್ದೇಶನ ಮಾಡಿ, ‘ನೆನೊಕ್ಕಡೇನೆ’, ‘100% ಲವ್’ ಮುಂತಾದ ಸಿನಿಮಾಗಳಿಗೆ ಸುಕುಮಾರ್ ಜೊತೆಗೆ ರೈಟರ್ ಆಗಿ ಕೆಲಸ ಮಾಡಿದ ಅನುಭವ ಹೊಂದಿರುವ ಹರಿ ಪ್ರಸಾದ್ ಜಕ್ಕ, ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಆ್ಯಕ್ಷನ್​ ಕಟ್​ ಹೇಳಲಿದ್ದಾರೆ.

 ಇದೊಂದು ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಸಿನಿಮಾವಾಗಿದೆ. ಫೆಬ್ರವರಿ ಮೊದಲ ವಾರದಿಂದ ಬೆಂಗಳೂರಿನಲ್ಲಿ ಚಿತ್ರೀಕರಣ ಆರಂಭವಾಗಲಿದೆ. ನಟಿ ಅರ್ಚನಾ ಕೊಟ್ಟಿಗೆ ಕೂಡ ಈ ಚಿತ್ರದಲ್ಲಿ ಒಂದು ಪಾತ್ರ ಮಾಡುತ್ತಿದ್ದಾರೆ . ಸಂಪತ್ ಕುಮಾರ್, ರವಿ ಕಾಳೆ, ಶಿವರಾಜ್ ಕೆ.ಆರ್. ಪೇಟೆ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.


Post a Comment

Previous Post Next Post