ವೈದ್ಯಕೀಯ ವಿದ್ಯಾರ್ಥಿಗಳು ನೇತ್ರದಾನ ,ದೇಹದಾನದ ಅರಿವು ಉಳ್ಳವರಾಗಿರಬೇಕು


ಹಗರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೊಸ ವರ್ಷದ ಪ್ರಯುಕ್ತ  ನೇತ್ರದಾನ , ದೇಹದಾನ  ಶಿಬಿರ ಹಾಗೂ ಅರಿವು  ಕಾರ್ಯಕ್ರಮ

ಬೇಲೂರು :  ವೈದ್ಯಕೀಯ ವಿದ್ಯಾರ್ಥಿಗಳು ದೇಹದಾನ ಹಾಗೂ ನೇತ್ರದಾನದ ಬಗ್ಗೆ ಅರಿವು ಮೂಡಿಸುವ ಮುನ್ನ ಅಂಗರಚನೆಯ  ಪ್ರಾಥಮಿಕ ಹಂತದಿಂದ ಅರ್ಥೈಸಿಕೊಂಡು ದೇಹಗಳನ್ನು ಗೌರವ್ವಿತವಾಗಿ ಕಂಡುಕೊಳ್ಳ ಬೇಕು ಎಂದು  ಅಂಗರಚನಾ ಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ.ಸಂಧ್ಯಾ ಹೇಳಿದರು.

ಅವರು ಹಗರೆ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಆಯೋಜಿಸಿದ ನೇತ್ರದಾನ ಹಾಗೂ ದೇಹದಾನ ಶಿಬಿರವನ್ನು ಉದ್ದೇಶಿಸಿ ಮಾತನಾಡಿ ಮಾನವನ ದೇಹವನ್ನು ವೈದ್ಯಕೀಯ ವಿದ್ಯಾರ್ಥಿಗಳಿಗೆ ಭೋದನೆಗಾಗಿ ಬಳಸಿಕೊಳ್ಳುತ್ತೆವೆ,ದೇಹದಾನಿಗಳು ಮುಂಚಿತವಾಗಿಯೇ ದೇಹದಾನಕ್ಕೆ ನೊಂದಣಿ ಮಾಡಿಸಿ ಕುಟುಂಬಕ್ಕೂ ಮಾಹಿತಿ ತಿಳಿಸಿರ ಬೇಕು ಎಂದರು,

ನಂತರ ಹಿಮ್ಸ್ ನ  ಸ್ನಾತಕೋತ್ತರ ವಿದ್ಯಾರ್ಥಿ ನೇತ್ರ ವಿಭಾಗದ  ಡಾ.ನರೇಂದ್ರ  ಮಾತನಾಡಿ ಯಾವುದೇ ಕಣ್ಣುಗಳು ತೊಂದರೆ ಅಥವಾ ಪಟಾಕಿಗಳಿಂದ ಆಗುವ ಅನಾಹುತಗಳು ಸಂಭವಿಸಿ ಕುರುಡುತನ ಉಂಟಾದರೆ ಅಂತಹವರಿಗೆ ನೇತ್ರದಾನಿಗಳಿಂದ  ಸ್ವೀಕರಿಸಿದ ಕಣ್ಣುಗಳನ್ನ ಶಸ್ತ್ರಚಿಕಿತ್ಸೆ ಮೂಲಕ ಮರು ದೃಷ್ಟಿ ಬರುವಂತೆ ಮಾಡಬಹುದು ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವೇಣುಗೋಪಾಲ್ ಪ್ರತಿಯೊಂದು ವರ್ಷಚಾರಣೆಯ ಆರಂಭಕ್ಕೆ ಹಿಂದಿನ ಕೆಲಸಗಳು ಸಾಕ್ಷಿಯಾಗಿ, ಮುಂದಿನ ಯೋಜನೆಗಳಿಗೆ ದಾರಿಯಾಗಬೇಕು ಇಂತಹ ದಿನಗಳಲ್ಲಿ ನೇತ್ರದಾನ ಹಾಗೂ ದೇಹದಾನದಂತಹ ಕಾರ್ಯಕ್ರಮ ಆಯೋಜಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಶ್ಲಾಘಿಸಿದರು.

ಕನ್ನಡದ ಯುವರತ್ನ ಅಪ್ಪುರವರ ನಿಧನದ ನಂತರ ಬಹಳಷ್ಟು ಜನ ನೇತ್ರದಾನಕ್ಕೆ ಒಲವು ತೋರಿರುವುದು ಸ್ವಾಗತಾರ್ಹ ಬೆಳವಣಿಗೆ. ಬಹಳಷ್ಟು ಜನರಿಗೆ ಆ ತುಡಿತವಿದ್ದರೂ ದಾರಿ ತಿಳಿಯದೇ ನೇತ್ರದಾನ ಮಾಡಲಾಗುತ್ತಿಲ್ಲ. ಇದನ್ನು ಮನಗೊಂಡು ಪ್ರಾಥಮಿಕ ಆರೋಗ್ಯ ಕೇಂದ್ರ ಹಗರೆಯಲ್ಲಿ ಈ  ಹೊಸ ವರ್ಷ ಸಂಭ್ರಮಾಚರಣೆಯನ್ನು ನೇತ್ರದಾನ ನೋಂದಣಿ  ಮತ್ತು ಮೆಡಿಕಲ್ ಕಾಲೇಜಿಗೆ ದೇಹದಾನ ನೋಂದಣಿ ಶಿಬಿರವನ್ನು ಆಯೋಜಿಸುವ ಮೂಲಕ ಹೊಸ ವರ್ಷವನ್ನು ಆಚರಿಸಲು ನಿರ್ಧರಿಸಿದ್ದು ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಹಯೋಗದೊಂದಿಗೆ ಶಿಬಿರ ಆಯೋಜಿಸಲಾಗಿದೆ  ಎಂದು ಪ್ರಾಸ್ತಾವಿಕವಾಗಿ ಮಾತನಾಡಿದರು.ಹಗರೆ  ಗ್ರಾ.ಪಂ ಅಧ್ಯಕ್ಷೆ ಪ್ರಭ ಮಹೇಶ್ ಅಧ್ಯಕ್ಷತೆವಹಿಸಿದ್ದರು,ಡಾ.ಚೇತನ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕಿರು ನಾಟಕದ ಮೂಲಕ ನೇತ್ರದಾನ ಹಾಗೂ ದೇಹದಾನದ ಬಗ್ಗೆ ಸಿಬ್ಬಂದಿಗಳಿಂದ  ಅರಿವು ಮೂಡಿಸಲಾಯಿತು, ಸಾಹಿತಿ ಧರ್ಮಪ್ರಕೃತಿ ಹಾಡಿನ ಮೂಲಕ ಜಾಗೃತಿ ಮೂಡಿಸಿದರು, ಗ್ರಾಮ ಪಂಚಾಯತಿ ಸದಸ್ಯ ಪೃಥ್ವಿ ಮೂಳೆನ ಹಳ್ಳಿ ಅವರು ನೀಡಿದ ಪರಿಕರಗಳನ್ನು ಅನಾವರಣಗೊಳಿಸಲಾಯಿತು.

ಶಿಬಿರದಲ್ಲಿ 64 ಕ್ಕೂ ಹೆಚ್ಚು ನೇತ್ರ ದಾನಿಗಳು ಮತ್ತು 4 ದೇಹದಾನಿಗಳು ನೋಂದಣಿ ಮಾಡಿಸಿದರು.

ಈ ಸಂಧರ್ಭದಲ್ಲಿ ವೈದ್ಯಾಧಿಕಾರಿ ಡಾ.ಶಾಲಿನಿ, ಡಾ.ಚೇತನ್ , ಹಗರೆ  ಗ್ರಾ.ಪಂ ಅಧ್ಯಕ್ಷೆ ಪ್ರಭ ಮಹೇಶ್,ಅಂಗರಚನಾ ಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ.ಸಂಧ್ಯಾ , ಹಿಮ್ಸ್ ನ  ಸ್ನಾತಕೋತ್ತರ ವಿದ್ಯಾರ್ಥಿ ನೇತ್ರ ವಿಭಾಗದ  ಡಾ.ನರೇಂದ್ರ, ಅಶಾ ಕಾರ್ಯಕರ್ತೆಯರು, ಆಸ್ಪತ್ರೆ ಸಿಬ್ಬಂದಿಗಳು ಇದ್ದರು.

Post a Comment

Previous Post Next Post