ಕೊರೊನಾ ಟಫ್ ರೂಲ್ಸ್​: ಯಾವುದಕ್ಕೆಲ್ಲಾ ನಿರ್ಬಂಧ ಸಾಧ್ಯತೆ..?

 ಬೆಂಗಳೂರು: ದೇಶದಲ್ಲಿ ಕೊರೊನಾ ಆರ್ಭಟ ಹೆಚ್ಚಾಗಿದೆ. ದೆಹಲಿ, ಪಶ್ಚಿಮ ಬಂಗಾಳ ಹಾಗೂ ಮಹಾರಾಷ್ಟ್ರದಲ್ಲಿ ಕಠಿಣ ನಿಯಮ ಜಾರಿಗೆ ತರಲಾಗಿದೆ. ಅದರಂತೆ ರಾಜ್ಯದಲ್ಲೂ ಕೊರೊನಾ ಕಠಿಣ ನಿಯಮ ಜಾರಿಗೆ ತರುವ ಬಗ್ಗೆ ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ.

ಮೂಲಗಳ ಪ್ರಕಾರ ಕಠಿಣ ನಿಯಮ ಜಾರಿಗೆ ತರುವಂತೆ ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಆ ಶಿಫಾರಸುಗಳು ಯಾವ್ಯಾವುದು ಅನ್ನೋ ವಿವರ ಇಲ್ಲಿದೆ.

ಸಾಧ್ಯತೆ 1: ರಾಜ್ಯದಲ್ಲಿ ನೈಟ್​​​​ ಕರ್ಫ್ಯೂ ಹೀಗೆ ಮುಂದುವರೆಯುತ್ತದೆ

ಸಾಧ್ಯತೆ 2: ಹೋಟೆಲ್, ಪಬ್, ಬಾರ್​​ಗಳಲ್ಲಿ 50-50 ನಿಯಮ ಜಾರಿ

ಸಾಧ್ಯತೆ 3: ಬೆಂಗಳೂರಿನಲ್ಲಿ‌ ಕಠಿಣ ನಿಯಮ ಫೆಬ್ರವರಿವರೆಗೆ ಇರುತ್ತೆ

ಸಾಧ್ಯತೆ 4: ಈಗಿನ ಟಫ್ ರೂಲ್ಸ್ ಜೊತೆ ಇನ್ನಷ್ಟು ಕಠಿಣ ನಿಯಮ ಜಾರಿ

ಸಾಧ್ಯತೆ 5: ಮನರಂಜನಾ ಕಾರ್ಯಕ್ರಮಕ್ಕೂ ಬ್ರೇಕ್ ಬೀಳಬಹುದು

ಸಾಧ್ಯತೆ 6: ಹೆಚ್ಚು ಜನ ಸೇರುವ ಸ್ಪೋರ್ಟ್ಸ್‌ ಆ್ಯಕ್ಟಿವಿಟೀಸ್​​​ಗೂ ಬ್ರೇಕ್

ಸಾಧ್ಯತೆ 7: ನೈಟ್ ಕರ್ಫ್ಯೂ ಸಮಯವನ್ನು ಮತ್ತಷ್ಟು ವಿಸ್ತರಿಸಬಹುದು

ಸಾಧ್ಯತೆ 8: ಜನ ಹೆಚ್ಚಾಗಿ ಸೇರದಂತೆ ಇನ್ನಷ್ಟು ಕಠಿಣ ನಿಯಮ ಜಾರಿ

ಸಾಧ್ಯತೆ 9: ಮದುವೆ ಸಭೆ ಸಮಾರಂಭಗಳಿಗೆ ನಿಗದಿತ ಜನರಿಗೆ ಅವಕಾಶ

ಸಾಧ್ಯತೆ 10: ಶವಸಂಸ್ಕಾರಕ್ಕೆ ಈಗಿರುವ 50 ಮಂದಿ ಮಿತಿಯನ್ನ 30 ಮಂದಿಗೆ ಕಡಿತಗೊಳಿಸೋದು

ಸಾಧ್ಯತೆ 11: ರೆಸಾರ್ಟ್, ಕ್ಲಬ್​ಗಳಲ್ಲಿ ನೈಟ್ ಪಾರ್ಟಿಗಳನ್ನ ರದ್ದುಗೊಳಿಸುವುದು

ಸಾಧ್ಯತೆ 12: ಶಾಲಾ-ಕಾಲೇಜುಗಳಲ್ಲಿ ತ್ರಿಸೂತ್ರದ ಅನುಸರಣೆ

ಸಾಧ್ಯತೆ 13: ಅಂತಾರಾಷ್ಟ್ರೀಯ, ಅಂತರ್​​ ರಾಜ್ಯ ಪ್ರಯಾಣಿಕರ ಮೇಲೆ ಕಣ್ಗಾವಲು

ಸಾಧ್ಯತೆ 14: ಕೊರೊನಾ ಸೋಂಕು ಹೆಚ್ಚಾಗಿ ಪತ್ತೆಯಾಗುವ ಸ್ಥಳಗಳಲ್ಲಿ ಸೀಲ್​ಡೌನ್

ಸಾಧ್ಯತೆ 15: ಕಂಟೈನ್ಮೆಂಟ್ ಝೋನ್​ಗಳೆಂದು ಗುರುತಿಸಿ, ಸ್ಥಳೀಯವಾಗಿ ಪರೀಕ್ಷೆ ಹೆಚ್ಚಿಸೋದು

Post a Comment

Previous Post Next Post