ಬೇಲೂರಿಗೆ ಎರಡು ಜಿಲ್ಲಾ ಗಣರಾಜ್ಯೋತ್ಸವ ಪ್ರಶಸ್ತಿ ಮುಖ್ಯ ಶಿಕ್ಷಕ ಮಾ.ನ.ಮಂಜೇಗೌಡ-ಕಿ.ಮ.ಆರೋಗ್ಯ ಸಹಾಯಕಿ ತನುಜ

ಬೇಲೂರು :ತಾಲ್ಲೂಕಿನ ಇಬ್ಬರಿಗೆ ಜಿಲ್ಲಾ ಗಣರಾಜ್ಯೋತ್ಸವ ಸಂದರ್ಭ ಜಿಲ್ಲಾಡಳಿತ ಪ್ರಶಸ್ತಿಯೊಂದಿಗೆ ಸನ್ಮಾನಿಸಲಾಗಿದೆ.

ತಾಲ್ಲೂಕಿನ ನಾಗೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ತನುಜಾ ಹಾಗೂ ಶೆಟ್ಟಿಹಳ್ಳಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಮಂಜೇಗೌಡ ಇವರುಗಳು ಹಾಸನ ಶಾಸಕ ಪ್ರೀತಮ್‌ಗೌಡ, ಜಿಲ್ಲಾಧಿಕಾರಿ ಆರ್.ಗಿರೀಶ್, ಜಿ.ಪಂ.ಸಿಇಒ ಕಾಂತರಾಜು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ, ನಗರಸಭಾಧ್ಯಕ್ಷ ಮೋಹನ್, ಅಪರ ಜಿಲ್ಲಾಧಿಕಾರಿ ಕವಿತಾರಾಜಾರಾಂ, ಎಎಸ್‌ಪಿ ನಂದಿನಿ, ಡಿಎಫ್‌ಒ ಬಸವರಾಜು ಇವರ ಸಮ್ಮುಖದಲ್ಲಿ ಸನ್ಮಾನಕ್ಕೆ ಭಾಜನರಾದವರು. 

ಇವರು ಕೋವಿಡ್-೧೯ ರ ವೇಳೆ ಅವಿರತವಾಗಿ ಸೇವಾಕಾರ್ಯದಲ್ಲಿ ತೊಡಗಿರುವುದನ್ನು ಜಿಲ್ಲಾಡಳಿತ ಗುರುತಿಸಿ ಈ ಗೌರವ ನೀಡುತ್ತಿದೆ. ಕಿ.ಮ.ಆರೋಗ್ಯ ಸಹಾಯಕಿ ತನುಜಾ ಅವರು ನಾಗೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ೧೫ ವರ್ಷದಿಂದ ಸೇವೆ ಸಲ್ಲಿಸುತ್ತಿದ್ದು ಸರ್ಕಾರದ ರಾಷ್ಟಿçÃಯ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಿಕೊಂಡು ಬಂದಿದ್ದಾರೆ. ಪದವಿ ಶಿಕ್ಷಣದೊಂದಿಗೆ ಇಲಾಖೆಯ ಪರೀಕ್ಷೆಗಳಲ್ಲೂ ಉತ್ತೀರ್ಣವಾಗಿರುವ ಇವರು ಕೋವಿಡ್ ಸಮಯದಲ್ಲಿ ದಿನದ ೧೨ ಗಂಟೆಗಳ ಕಾಲ ಕಾರ್ಯನಿರ್ವಹಿಸಿದ್ದಾರೆ.

ನಾಗೇನಹಳ್ಳಿ ಪ್ರಾ.ಆರೋಗ್ಯ ಕೇಂದ್ರದ ಹಂತದಲ್ಲಿ ಸುಮಾರು ೬೫೦ ರಿಂದ ೭೦೦ ಕೋವಿಡ್ ಸೋಂಕಿತರು ಹಾಗೂ ತಾಲ್ಲೂಕಿನಲ್ಲಿ ೩೦೦ ಸೋಂಕಿತರ ಮನೆ ಬಳಿಗೆ ತೆರಳಿ ಐಸೋಲೇಷನ್ ಮೂಲಕ ಚಿಕಿತ್ಸೆಯನ್ನು ನೀಡಿದ್ದಾರೆ. ಇವರ ಸೇವೆ ಗುರುತಿಸಿ ಹುನುಗನಹಳ್ಳಿಯಲ್ಲಿ ಸನ್ಮಾನಿಸಲಾಗಿದೆ. ಬೇಲೂರಿನ ರೋಟರಿ ಸಂಸ್ಥೆ, ಶ್ರೀವೀರಾಂಜನೇಯಸ್ವಾಮಿ ಸಮಿತಿಯಿಂದಲೂ ಗೌರವಕ್ಕೆ ಪಾತ್ರರಾಗಿದ್ದಾರೆ. ತಾಲ್ಲೂಕು ಆರೋಗ್ಯ ಇಲಾಖೆ ಆಡಳಿತದಿಂದಲೂ ಪ್ರಶಂಸೆಗೆ ಒಳಗಾಗಿದ್ದಾರೆ. ಇವರನ್ನು ಜಿಲ್ಲಾಡಳಿತ ಗಣರಾಜ್ಯೋತ್ಸವ ಸಂದರ್ಭ ಸನ್ಮಾನಿಸುತ್ತಿರುವುದು ಆರೋಗ್ಯ ಇಲಾಖೆಗೆ ಸಂಧ ಗೌರವವಾಗಿದೆ.

Advertise

ತನುಜಾ ಅವರಿಗೆ ಪ್ರಶಸ್ತಿ ಲಭಿಸಿರುವುದಕ್ಕೆ ವೈದ್ಯರು, ಆರೋಗ್ಯ ಇಲಾಖೆಯ ನೂರಾರು ನೌಕರರು, ಸ್ನೇಹಿತರು ಹರಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಪ್ರತಿಕ್ರಿಯೆ ನೀಡಿರುವ ತನುಜಾ, ನನ್ನೊಟ್ಟಿಗೆ ಇತರರೂ ಕರ್ತವ್ಯ ನಿರ್ವಹಿಸಿದ್ದಾರೆ. ಅವರೆಲ್ಲರ ಸಹಕಾರದಿಂದ ನನಗೆ ಈ ಪ್ರಶಸ್ತಿ ದೊರೆತಿದೆ. ಇನ್ನಷ್ಟು ಜವಾಬ್ದಾರಿ ಹೆಚ್ಚಿದೆ ಎಂದು ಕೃತಜ್ಞತೆ ಸಲ್ಲಿಸಿದರು. 

ತಾಲ್ಲೂಕು ವೈದ್ಯಾಧಿಕಾರಿ ಡಾ.ವಿಜಯ್ ಪ್ರತಿಕ್ರಿಯಿಸಿ, ಕಿ.ಆರೋಗ್ಯ ಸಹಾಯಕಿ ತನುಜಾ ಅವರು ಉತ್ತಮ ಕೆಲಸ ನಿರ್ವಹಣೆ ಮಾಡಿದ್ದಾರೆ. ಕೋವಿಡ್ ಸಮಯದಲ್ಲಿ ಹಗಲು, ರಾತ್ರಿ ಎನ್ನದೆ ಕರ್ತವ್ಯ ನಿರ್ವಹಿಸಿದ್ದಾರೆ. ೪ ವರ್ಷದಿಂದ ಕೆಸಗೋಡು ಪಿಹೆಚ್‌ಯು ಸೆಂಟರ್‌ನಲ್ಲಿ ಸ್ಟಾಫ್ ಇರಲಿಲ್ಲ ನಾಗೇನಹಳ್ಳಿ ಜೊತೆಯಲ್ಲಿ ಇಲ್ಲಿಯೂ ಹೆಚ್ಚುವರಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಪ್ರಶಸ್ತಿ ಬಂದಿರುವುದು ಅತೀವ ಸಂತೋಷವಾಗಿದೆ. ಇಲಾಖೆ ವೈದ್ಯರ, ನೌಕರರ, ಸಿಬ್ಬಂದಿ ಪರವಾಗಿ ಅಭಿನಂದಿಸಲಾಗುವುದು ಎಂದು ಹೇಳಿದರು.

ಶಿಕ್ಷಣ ಇಲಾಖೆ:

ಇವರೊಂದಿಗೆ ಶೆಟ್ಟಿಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಮಂಜೇಗೌಡರನ್ನೂ ಇಂದು ಜಿಲ್ಲಾಡಳಿತ ಗಣರಾಜ್ಯೋತ್ಸವದಲ್ಲಿ ಸನ್ಮಾನಿಸಿದೆ. ಶಾಲೆ ಸಮೀಪವಿರುವ ಮಾಳೆಗೆರೆಯಿಂದ ಕೋಗಿಲಮನೆಯವರಗೆ ರಸ್ತೆ ದುರಸ್ತಿ, ಕಾರ್ಗಿಲ್ ಯುದ್ಧದಲ್ಲಿ ಮಡಿದ ಸೈನಿಕ ವೆಂಕಟ್ ಅವರಿಗೆ ವಿದ್ಯಾರ್ಥಿ, ಪೋಷಕರಿಂದ ಆರ್ಥಿಕ ನೆರವು, ಮಾಸ್ಟರ್ ಟ್ರೆöÊನರ್ ನಿರ್ವಹಣೆ, ಕೋವಿಡ್ ಸರ್ವೆ, ೩೭ ಗ್ರಾ.ಪಂ.ಯಲ್ಲಿ ಅನಕ್ಷರಸ್ತರ ಕಲಿಕಾ ಕೇಂದ್ರ ಕಾರ್ಯನಿರ್ವಹಣೆ, ಶಾಲೆಯಲ್ಲಿ ಮಕ್ಕಳ ದಾಖಲಾತಿ ಹೆಚ್ಚಳ, ಶಾಲೆಯ ಕೈತೋಟದಲ್ಲಿ ಸಾಂಬಾರ್ ಸೊಪ್ಪು ಬೆಳೆದಿದ್ದು ಇವುಗಳೆಲ್ಲವನ್ನೂ ಇವರ ತಮ್ಮ ಕರ್ತವ್ಯದ ಜೊತೆಗೆ ನೆರವೇರಿಸಿದ್ದಾರೆ. ಇದೆಲ್ಲವೂ ಇವರಿಗೆ ಜಿಲ್ಲಾ ಗಣರಾಜ್ಯೋತ್ಸವ ಪ್ರಶಸ್ತಿಗೆ ಕಾರಣವಾಗಿದ್ದು ಇವರನ್ನು ಶಾಸಕ ಕೆ.ಎಸ್.ಲಿಂಗೇಶ್, ಬಿಇಒ ಲೋಕೇಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಲೋಕೇಗೌಡ ಸೇರಿದಂತೆ ಶಿಕ್ಷಕ ಸಂಘಟನೆಗಳು, ಸಂಘ ಸಂಸ್ಥೆ ಪ್ರಮುಖರು ಅಭಿನಂದಿಸಿದ್ದಾರೆ. ಪ್ರಶಸ್ತಿ ದೊರೆತಿರುವುದಕ್ಕೆ ಪ್ರತಿಕ್ರಿಯಿಸಿರುವ ಮಾ.ನ.ಮಂಜೇಗೌಡ, ವಿದ್ಯಾರ್ಥಿಗಳು ಹಾಗೂ ಪೋಷಕರ ಸಹಕಾರದಿಂದ ಶಾಲೆಯ ಅಭಿವೃದ್ಧಿಗೆ ಗಮನ ಹರಿಸಿದ್ದೇನೆ. ಇಲಾಖೆಯ ಹಲವಾರು ಕರ್ತವ್ಯಗಳನ್ನು ಪಾಲಿಸಿದ್ದೇನೆ ಎಂದು ಕೃತಜ್ಞತೆ ಸಲ್ಲಿಸಿದರು.

ಬಿಇಒ ಲೋಕೇಶ್ ಮಾತನಾಡಿ, ಮುಖ್ಯಶಿಕ್ಷಕ ಮಾ.ನ.ಮಂಜೇಗೌಡರಿಗೆ ಪ್ರಶಸ್ತಿ ದೊರೆತಿರುವುದು ನಮಗೆ ಸಂತೋಷವಾಗಿದೆ ಎಂದು ತಿಳಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಎಸ್.ಬಿ.ಪಾಲಾಕ್ಷ ಅಭಿಪ್ರಾಯ ವ್ಯಕ್ತಪಡಿಸಿ, ಮಾ.ನ.ಮಂಜೇಗೌಡರಿಗೆ ಪ್ರಶಸ್ತಿ ದೊರೆತಿರುವುದು ಸಂತೋಷವಾಗಿದೆ. ಅವರ ಜವಾಬ್ದಾರಿ ಇನ್ನಷ್ಟು ಹೆಚ್ಚಿಸಿದೆ ಎಂದು ಅಭಿನಂದಿಸಿದರು.

Post a Comment

Previous Post Next Post