ಡಾ.ಅಂಬೇಡ್ಕರ್‌ಗೆ ಅವಮಾನದ ಆರೋಪ ನ್ಯಾಯಾಧೀಶರ ವಿರುದ್ಧ ಕ್ರಮಕ್ಕೆ ದಲಿತಪರ ಸಂಘಟನೆ-ಜಯಕರ್ನಾಟಕ ಆಗ್ರಹ

ಬೇಲೂರು : 

ಡಾ.ಅಂಬೇಡ್ಕರ್ ಮತ್ತು ಸಂವಿಧಾನಕ್ಕೆ ಅವಮಾನಿಸಿದ ರಾಯಾಚೂರು ಜಿಲ್ಲಾ ನ್ಯಾಯಾದೀಶರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಮತ್ತು ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ತಾಲೂಕು ಕಚೇರಿ ಮುಂದೆ ಪ್ರತಿಭಟಿಸಿ ತಹಸೀಲ್ದಾರ್ ಗ್ರೇಡ್-೨ ಅಶೋಕ್ ಕುಮಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಬೇಲೂರಿನಲ್ಲಿ ದಲಿತ ಸಂಘರ್ಷ ಸಮಿತಿಯ ವಿವಿಧ ಸಂಘಟನೆ ಪ್ರಮುಖರು, ಕಾರ್ಯಕರ್ತರು ನ್ಯಾಯಾಧೀಶರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು

ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ)ದ ಹಾಸನ ಜಿಲ್ಲಾ ಪ್ರಧಾನ ಸಂಚಾಲಕ ಬಿ.ಎಲ್.ಲಕ್ಷö್ಮಣ್ ಮಾತನಾಡಿ, ೨೦೨೨ ಜನವರಿ ೨೬ ರಂದು ರಾಯಚೂರು ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಗಣರಾಜ್ಯೋತ್ಸವ ಆಚರಣೆ ಸಂದರ್ಭ ಭಾರತದ ಸಂವಿಧಾನ ಪಿತಾಮಹ ಡಾ.ಬಿ.ಆರ್.ಅಂಬೇಡ್ಕರ್‌ರವರ ಭಾವಚಿತ್ರ ಇದ್ದರೆ ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ಹೇಳಿ ಭಾವಚಿತ್ರ ತೆಗೆಸಿದ ರಾಯಚೂರು ಜಿಲ್ಲಾ ನ್ಯಾಯದೀಶ ಮಲ್ಲಿಕಾರ್ಜುನಗೌಡ ತಮ್ಮ ವೃತ್ತಿ ಗೌರವಕ್ಕೆ ಅವಮಾನ ಮಾಡಿದಲ್ಲದೆ, ಭಾರತದ ಸಂವಿಧಾನ ಸಂವಿಧಾನ ಶಿಲ್ಪಿಗೂ ಸಾರ್ವಜನಿಕವಾಗಿ ಅವಮಾನ ಮಾಡಿದ್ದಾರೆ. ಇವರು ನ್ಯಾಯದೀಶರ ಸ್ಥಾನಕ್ಕೆ ಅರ್ಹರಲ್ಲ. ಈ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನಗೌಡರ ದೇಶ ದ್ರೋಹದ ಕೃತ್ಯವಾಗಿದ್ದು, ಇವರ ವಿರುದ್ಧ ತಕ್ಷಣವೇ ರಾಷ್ಟ್ರದ್ರೋಹ ಪ್ರಕರಣ ದಾಖಲೀಸಿ, ಮಾನ್ಯ ಉಚ್ಚ ನ್ಯಾಯಾಲಯವೂ ಸ್ವಯಂ ಪ್ರೇರಿತವಾಗಿ(ಉಚ್ಚ ನ್ಯಾಯಾಲಯದ ಸುಮೊಟೊ ಪವರ್)ನಿಂದ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು & ಅವರನ್ನು ಸೇವೆಯಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.

ಜಯ ಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ಎಸ್.ಎಂ.ರಾಜು ಮಾತನಾಡಿ, ಡಾ.ಅಂಬೇಡ್ಕರ್ ಭಾವಚಿತ್ರವಿದ್ದರೆ ಕಾರ್ಯಕ್ರಮಕ್ಕೆ ಬರೋದಿಲ್ಲ ಎಂಬ ನ್ಯಾಯಾಧೀಶರ ನಡೆ ಖಂಡನೀಯವಾಗಿದೆ. ಇಂತಹ ಜಾತಿವಾದಿ ನ್ಯಾಯಾಧೀಶರು ಜನರಿಗೆ ಹೇಗೆ ನ್ಯಾಯ ಕೊಡಲು ಸಾಧ್ಯ. ಇವರನ್ನು ತಕ್ಷಣ ಸೇವೆಯಿಂದ ವಜಾಗೊಳಿಸಿ, ಅವರು ಈವರಗೆ ನೀಡಿರುವ ತೀರ್ಪುಗಳನ್ನು ಮತ್ತೊಮ್ಮೆ ಪರಾಮರ್ಶಿಸಿ ನೊಂದ ಜನರಿಗೆ ನ್ಯಾಯ ಕೊಡಿಸಬೇಕು. ಮತ್ತು ಇವರ ವಿರುದ್ಧ ದೇಶ ದ್ರೋಹದ ಕೇಸು ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದರು.

ದಲಿತ ಮುಖಂಡ ಎನ್.ಯೋಗೇಶ್ ಮಾತನಾಡಿ, ಗಣರಾಜ್ಯೋತ್ಸವದಂದು ಡಾ.ಆಂಬೇಡ್ಕರ್‌ರವರಿಗೆ ಅವಮಾನಗೊಳಿಸಿದ ಸಂವಿಧಾನ ವಿರೋಧಿ ರಾಯಚೂರು ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನಗೌಡನನ್ನು ಸೇವೆಯಿಂದ ವಜಾಗೊಳಿಸಿ, ಸುಮೊಟೋ ಕಾಯ್ದೆಯಡಿ ಬಂಧಿಸಿ ದೇಶದಿಂದ ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.

ಪ್ರತಿಭಟಿನೆಯಲ್ಲಿ ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಎಂ.ಕೆ.ಆರ್.ಸೋಮೇಶ್, ದಸಂಸ(ಅAಬೇಡ್ಕರ್ ವಾದ)ತಾಲೂಕು ಸಂಚಾಲಕ ರವಿಕುಮಾರ್, ಹೊಸಳ್ಳಿ ರಾಜು, ದಾಸಪ್ಪ, ಸಂ.ಸAಚಾಲಕರಾದ ಧರ್ಮಯ್ಯ, ವಸಂತಕುಮಾರ್, ಮಲ್ಲೇಶ್, ಕೃಷ್ಣಯ್ಯ, ಪ್ರವೀಣ್, ಕಿರಣ್, ವೆಂಕಟೇಶ್, ಬಿ.ಎಲ್.ಲಕ್ಷö್ಮಣ್, ಚಂದ್ರಪ್ಪ, ನವೀನ್, ಲಕ್ಷಿö್ಮÃನಾರಾಯಣ್, ಉಮೇಶ್, ಜಯಕರ್ನಾಟಕ ಸಂಘಟನೆಯ ಕುಮಾರ್, ಪಾಪಣ್ಣಿ, ಮುಜಮಿಲ್, ಯೋಗರಾಜ್ ಇತರರಿದ್ದರು. 



Post a Comment

Previous Post Next Post