ಬೇಲೂರು :
ಇಲ್ಲಿನ ಪುರಸಭೆಗೆ ಜನಪ್ರತಿನಿಧಿಗಳ ಪ್ರವೇಶವಾದೊಡನೆ ಕೆಲವೊಂದು ಬದಲಾವಣೆ ಕಂಡುಬರುತ್ತಿದೆ.
ಇದಕ್ಕೆ ಪೂರಕವಾಗಿ ಹಲವು ವರ್ಷಗಳಿಂದ ಗೋದಾಮಾಗಿ ಪರಿವರ್ತನೆಗೊಂಡಿದ್ದ ಪುರಸಭೆಯ ಮುಖ್ಯಾಧಿಕಾರಿಗಳ ವಸತಿಗೃಹಕ್ಕೆ ಇದೀಗ ಮರುಜೀವ ಬಂದಂತಿದೆ. ಈ ಹಿನ್ನಲೆಯಲ್ಲಿ ವಸತಿಗೃಹದಲ್ಲಿದ್ದ ಬೇಕಾದ, ಬೇಡವಾದ ಹಾಗೂ ದಾಖಲೆಯಲ್ಲಿ ನಮೂದಾಗಿರುವ ಕೆಲವೊಂದು ವಸ್ತುಗಳನ್ನು ಹೊಳೆಬೀದಿಯ ಒಳಚರಂಡಿ ಯೋಜನಾ ಬಸ್ಮೀಕರಣ ಹೊಂಡ ಇರುವ ಸ್ಥಳದಲ್ಲಿನ ಕೊಠಡಿಯೊಂದಕ್ಕೆ ಸ್ಥಳಾಂತರ ಮಾಡಲಾಗಿದೆ.
ಬೇಲೂರಿನ ಹೊಳೆಬೀದಿಯಲ್ಲಿ ಇರುವ ಒಳಚರಂಡಿ ಬಸ್ಮೀಕರಣ ಹೊಂಡದ ಆವರಣದಲ್ಲಿನ ಕೊಠಡಿಯೊಳಕ್ಕೆ ತುಂಬಲಾಗಿರುವ ವಸ್ತುಗಳು
ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಹೊಂದಿಕೊಂಡಂತೆ, ಪಂಪ್‌ಹೌಸ್ ರಸ್ತೆಗೆ ಸಂಪರ್ಕ ನೀಡುವ ರಸ್ತೆಯ ಪಕ್ಕದಲ್ಲಿ ಆರೋಗ್ಯಾಧಿಕಾರಿಗಳು ಹಾಗೂ ಮುಖ್ಯಾಧಿಕಾರಿಗಳಿಗೆ ವಸತಿಗೃಹ ನಿರ್ಮಿಸಲಾಗಿತ್ತು. ಆದರೆ ಪುರಸಭೆಯ ಆಡಳಿತ ಇಲ್ಲದೆ ಇದ್ದಾಗ ವಸತಿಗೃಹದಲ್ಲಿ ಯಾರೂ ವಾಸ ಮಾಡಲಿಲ್ಲ. ಪರಿಣಾಮ ಪುರಸಭೆಯಲ್ಲಿನ ಹಳೆಯ ಟೈರುಗಳು, ಟ್ರೆöÊಸಿಕಲ್‌ಗಳು, ಬಕೇಟ್‌ಗಳು, ಪೈಪುಗಳು ಸೇರಿದಂತೆ ಲೋಡುಗಟ್ಟಲೆ ಇದ್ದ ಹಲವು ವಸ್ತುಗಳನ್ನು ತುಂಬಿ ಗೋದಾಮಾಗಿ ಉಪಯೋಗಿಸಲಾಯಿತು.
ಇದೀಗ ಏನು ಕಾರಣವೋ ಏನೊ, ಒಟ್ಟಾರೆ ಪುರಸಭೆಯ ಮುಖ್ಯಾಧಿಕಾರಿಗಳು ವಸತಿಗೃಹದಲ್ಲಿ ವಾಸವಿರಲು ಇಚ್ಚಿಸಿದ್ದು ಗೋದಾಮಾಗಿದ್ದ ವಸತಿಗೃಹವನ್ನು ಒಂದಿಷ್ಟು ದುರಸ್ತಿ ಮಾಡುವ ಮೂಲಕ ವಾಸಕ್ಕೆ ಉಪಯೋಗಿಸಲಾಗುತ್ತಿದೆ.
ವದಂತಿ: ಬೆಳಿಗ್ಗೆಯಿಂದಲೇ ಟ್ರಾö್ಯಕ್ಟರ್‌ನಲ್ಲಿ ಮುಖ್ಯಾಧಿಕಾರಿಗಳ ವಸತಿಗೃಹದಲ್ಲಿದ್ದ ವಸ್ತುಗಳನ್ನು ಸಾಗಾಣೆ ಮಾಡುವುದನ್ನು ಕಂಡ ಹಲವರು ಏನೋ ಅಕ್ರಮ ನಡೆಯುತ್ತಿದೆ. ಹೊಳೆಬೀದಿಯಲ್ಲಿರುವ ಗುಜರಿ ಅಂಗಡಿಯೊಂದಕ್ಕೆ ವಸ್ತುಗಳನ್ನು ಸಾಗಿಸಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು. ಗುಜರಿ ಅಂಗಡಿಯ ಮುಂದೆಯೇ ಒಳಚರಂಡಿ ಬಸ್ಮೀಕರಣ ಹೊಂಡದ ಬಳಿ ಕೊಠಡಿ ಇರುವುದರಿಂದ ಆತಂಕಕ್ಕೆ ಕಾರಣವೂ ಆಗಿತ್ತು.
ಬಲ್ಲಮೂಲಗಳ ಪ್ರಕಾರ, ಸಾಗಿಸಲ್ಪಟ್ಟ ವಸ್ತುಗಳನ್ನು ಹಾಸನದಿಂದ ಆಗಮಿಸಿದ್ದ ಅಧಿಕಾರಿಗಳು ಪರಿಶೀಲಿಸಿ ದಾಖಲೆಯಲ್ಲಿ ನಮೂದಿಸಿದ್ದಾರೆಂದು ಹೇಳಲಾಗಿದ್ದು, ಯಾವುದೇ ರೀತಿಯ ಅಕ್ರಮಕ್ಕೆ ಅವಕಾಶ ಆಗುವುದಿಲ್ಲ ಎನ್ನಲಾಗಿದೆ. ಏನೇ ಆದರೂ ಎಲ್ಲವೂ ಬಹಿರಂಗವಾಗಿಯೇ ಆಗಬೇಕಲ್ಲವೆ?.