ಬೇಲೂರು : ತಾಲ್ಲೂಕಿನ ಎನ್.ನಿಡಗೋಡು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸರಸ್ವತಿ ಪೂಜಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
![]() |
ಬೇಲೂರು ತಾಲ್ಲೂಕು ಎನ್.ನಿಡಗೋಡು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಏರ್ಪಡಿಸಿದ್ದ ಸರಸ್ವತಿ ಪೂಜಾಕಾರ್ಯಕ್ರಮದಲ್ಲಿ ಸುರಭಿರಘು ಅವರನ್ನು ಗೌರವಿಸಲಾಯಿತು |
ಈ ಸಂದರ್ಭ ಮಾತನಾಡಿದ ರಾಜ್ಯ ಬಿಜೆಪಿ ಮಹಿಳಾ ಮೋರ್ಚ ಕೋಶಾಧ್ಯಕ್ಷೆಯಾದ ಸುರಭಿರಘು, ಶಾಲೆಯಲ್ಲಿ ಉಚಿತವಾಗಿ ಗಮಕ ಹಾಗೂ ಸಂಗೀತ ಅಭ್ಯಾಸ ಮಾಡಿಸುತ್ತಿರುವುದು ಸಂತೋಷದ ವಿಷಯವೆಂದು ಗಮಕ ಶಿಕ್ಷಕಿಯರಾದ ನಳಿನಾವಾದಿರಾಜ್ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲೆಯಲ್ಲಿ ಮಕ್ಕಳಿಗೆ ಕಂಪ್ಯೂಟರ್ ತರಬೇತಿ ಅಗತ್ಯವಿದೆ ಎಂದು ತಿಳಿಸಿದರು.
ತೊಳಲು ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಸುಜಾತಾ ಮಾತನಾಡಿ, ಶಾಲೆಯ ಮಕ್ಕಳು ತಂದೆ ತಾಯಿ ನೀಡುವ ಹಣವನ್ನು ಉಳಿಸಿ ತಮ್ಮ ಶಾಲೆಯ ಅಭಿವೃದ್ಧಿಗಾಗಿ ಧನಸಹಾಯ ಮಾಡಬಹುದು ಎಂದರು. ಹಳೆಯ ವಿದ್ಯಾರ್ಥಿ ಸುರೇಶ್ ಮಾತನಾಡಿ, ಈ ಹಿಂದೆ ಎಂಟು ಮಕ್ಕಳು ಇದ್ದಂತಹ ಈ ಶಾಲೆಯಲ್ಲಿ ಈಗ ಒಂದರಿಂದ ಐದನೆ ತರಗತಿಯವರೆಗೆ ೧೬ ಮಕ್ಕಳು ಹಾಗೂ ಎಲ್‌ಕೆಜಿ ಹಾಗೂ ಯುಕೆಜಿ ಇಂದ ೧೦ ಮಕ್ಕಳು ಇರುವುದನ್ನು ನೋಡಿ ತುಂಬಾ ಸಂತೋಷವಾಯಿತು. ಇನ್ನು ಮುಂದೆ ಶಾಲೆಯ ಅಭಿವೃದ್ಧಿಗೆ ನಮ್ಮ ಕೈಲಾದ ಸಹಾಯವನ್ನು ಮಾಡುವುದಾಗಿ ತಿಳಿಸಿದರು.
ಹಳೆಯ ವಿದ್ಯಾರ್ಥಿ ನಟರಾಜ ಮಾತನಾಡಿ, ನಾನು ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿ ಈಗ ವಕೀಲನಾಗಿದ್ದೇನೆ. ಈಗಿನ ಪೋಷಕರಿಗೆ ತಮ್ಮ ಮಕ್ಕಳು ಖಾಸಗಿ ಶಾಲೆಯಲ್ಲಿ ಓದಿದರೆ ಮಾತ್ರ ಮುಂದೆ ಒಳ್ಳೆಯ ಹುದ್ದೆಯನ್ನು ಅಲಂಕರಿಸಲಿದ್ದಾರೆAಬ ತಪ್ಪಾಭಿಪ್ರಾಯವಿದೆ. ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳು ಕೂಡಾ ಒಳ್ಳೆಯದನ್ನು ಹುದ್ದೆಗಳನ್ನು ಅಲಂಕರಿಸಬಹುದು ಎಂಬುದಕ್ಕೆ ನಾನೇ ಉದಾಹರಣೆ ಎಂದರು. ಶಾಲೆಯಲ್ಲಿ ಓದುತ್ತಿರುವಾಗ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ನಡುವಿನ ಬಾಂಧವ್ಯ ಸ್ಮರಿಸಿದರು.
ಈ ಸಂದರ್ಭ ಶಾಲೆಗೆ ಕೊಡುಗೆ ನೀಡಿದ ಉಧ್ಯಮಿ ಸುರಭಿರಘು ಹಾಗೂ ವೈಡಿಡಿ ಪ್ರಥಮದರ್ಜೆ ಕಾಲೇಜು ಅಧೀಕ್ಷಕ ಕೇಶವಕಿರಣ್ ಅವರನ್ನು ಗ್ರಾಮಸ್ಥರು ಗೌರವಿಸಿದರು. ತಾ.ಪಂ.ಮಾಜಿ ಸದಸ್ಯ ಶಶಿಕುಮಾರ್, ತೊಳಲು ಗ್ರಾ.ಪಂ.ಸದಸ್ಯ ಚಂದ್ರೇಗೌಡ ಹಾಗೂ ಸಿದ್ದಪ್ಪ, ಶಾಲಾಭಿವೃದ್ಧಿ ಸಮಿತಕ್ಷ ರಮೇಶ್, ಹಳೆ ವಿದ್ಯಾರ್ಥಿಗಳಾದ ಸುರೇಶ್, ನಟರಾಜ್, ಮುಖ್ಯಶಿಕ್ಷಕಿ ತೇಜಾವತಿ, ಸಹ ಶಿಕ್ಷಕಿ ಆಶಾಕಿರಣ ಇದ್ದರು.