ತ್ರಿಪುರದಲ್ಲಿ ಸಿಎಂ ಬದಲಾವಣೆ ಆದ ಬೆನ್ನಲ್ಲೇ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆಗಳು ಜೋರಾಗಿವೆ. ಗುಜರಾತ್, ಉತ್ತರಾಖಂಡ, ತ್ರಿಪುರ ಮಾದರಿ ಕರ್ನಾಟಕದಲ್ಲೂ ಜಾರಿಗೆ ಬರುತ್ತಾ ಅನ್ನೋ ಚರ್ಚೆಗಳು ನಡೀತಿವೆ. ಈ ಬಗ್ಗೆ ಸಿಎಂ ಬೊಮ್ಮಾಯಿ ಅವರಲ್ಲೂ ಆತಂಕ ಇದೆ.
ಕರ್ನಾಟಕದಲ್ಲೂ ಆಗುತ್ತಾ ಸಿಎಂ ಬದಲಾವಣೆ?
ಇಂತಹ ಪ್ರಶ್ನೆಗಳು ಇದೀಗ ರಾಜ್ಯ ರಾಜಕೀಯಲ್ಲಿ ಚರ್ಚೆ ಆಗ್ತಿವೆ. ಯಾಕಂದ್ರೆ, ಗುಜರಾತ್, ಉತ್ತರಾಖಂಡದಲ್ಲಿ ಸಿಎಂ ಬದಲಾವಣೆ ಮಾಡಿದ್ದ ಬಿಜೆಪಿ, ಇದೀಗ ಚುನಾವಣೆಗೆ ಇನ್ನೊಂದು ವರ್ಷ ಇರೋವಾಗ್ಲೆ ತ್ರಿಪುರದಲ್ಲೂ ಸಿಎಂ ದಿಢೀರ್ ಬದಲಾಗಿದ್ದಾರೆ. ಇದು ಕರ್ನಾಟಕದ ಬಿಜೆಪಿಯಲ್ಲಿ ಚರ್ಚೆಗೆ ಗ್ರಾಸವಾಗಿದೆ. ಯಾಕಂದ್ರೆ, ರಾಜ್ಯದಲ್ಲೂ ಎಲೆಕ್ಷನ್‌ಗೆ ಇನ್ನೊಂದು ವರ್ಷ ಇದೆ.
ತ್ರಿಪುರದ ನಿರ್ಗಮಿತ ಸಿಎಂ ದೇವ್, ಕಳೆದ ಬುಧವಾರ ದೆಹಲಿಗೆ ಹೋಗಿ ಹೈಕಮಾಂಡ್ ಜೊತೆ ಚರ್ಚಿಸಿ ವಾಪಸ್ ಬಂದ ಮೂರೇ ದಿನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಇದೀಗ ಕರ್ನಾಟಕದಲ್ಲೂ ಸಿಎಂ ಬದಲಾವಣೆ ಆಗ್ತಾರಾ ಅನ್ನೋ ಅನುಮಾನ ಶುರುವಾಗಿದೆ.
ಬೊಮ್ಮಾಯಿಗೆ ಆತಂಕವೇಕೆ?
1. ತ್ರಿಪುರದಲ್ಲಿ ಚುನಾವಣೆಗೆ ಒಂದು ವರ್ಷ ಮಾತ್ರ ಬಾಕಿ
2. ರಾಜ್ಯದಲ್ಲೂ ಎಲೆಕ್ಷನ್‌ಗೆ ಇನ್ನೊಂದು ವರ್ಷ ಬಾಕಿ
3. ಸಮರ್ಥರಿಗೆ ಲೀಡರ್‌ಶಿಪ್ ನೀಡಿದ್ದೇವೆಯೇ ? ಎಂಬ ಗೊಂದಲ
4 . ಉತ್ತರಪ್ರದೇಶ , ಗುಜರಾತ್ , ತ್ರಿಪುರದಂತೆ ಇಲ್ಲಿಯೂ ಬದಲಾವಣೆ
5. ಬದಲಾವಣೆ ಬಗ್ಗೆ ಹೈಕಮಾಂಡ್ ಆಗಾಗ್ಗೆ ಸುಳಿವು ನೀಡಿದೆ
6. ಎಲ್ಲಾ ಸಚಿವರನ್ನ ಪರಿಗಣನೆಗೆ ತೆಗೆದುಕೊಂಡಿಲ್ಲ ಎಂಬ ದೂರು
7 . ಸಾಲು ಸಾಲು ಆರೋಪಗಳು , ಸಚಿವರೊಬ್ಬರ ತಲೆದಂಡ
8 . ಸಂಪುಟ ವಿಸ್ತರಣೆ , ಪುನಾರಚನೆಗೆ ಅವಕಾಶ ನೀಡಿಲ್ಲ
9. ದೆಹಲಿಗೆ ಹೋಗಿ ಬಂದ್ರೂ ಪ್ರಯೋಜನವಾಗಿಲ್ಲ
![]() |
Advertise |
ಸಿಎಂ ಬೊಮ್ಮಾಯಿ ಇದೇ ಮೇ 21 ರಂದು ದಾವೋಸ್ ಪ್ರವಾಸ ಹೋಗ್ತಿದ್ದಾರೆ . ಅದಕ್ಕೂ ಮೊದಲು ಕ್ಯಾಬಿನೆಟ್‌ಗೆ ಸರ್ಜರಿ ಆಗೋ ಸಾಧ್ಯತೆ ಇದೆ . ಖಾಲಿ ಆಗಿರೋ ಸ್ಥಾನಗಳನ್ನ ಭರ್ತಿ ಮಾಡ್ಕೊಬೇಕಾ ಅಥವಾ ಸಂಪುಟ ಪುನರ್ ರಚನೆ ಮಾಡೋಕಾ ಅನ್ನೋದು ಇನ್ನೂ ತೀರ್ಮಾ ಆಗಿಲ್ಲ . ಇನ್ನೆರಡು ದಿನಗಳಲ್ಲಿ ಸಿಎಂ ಬೊಮ್ಮಾಯಿ ಮತ್ತೆ ದೆಹಲಿಗೆ ತೆರಳಿ ಹೈಕಮಾಂಡ್ ಜೊತೆ ಚರ್ಚಿಸೋ ಸಾಧ್ಯತೆ ಇದೆ . ಹೀಗಾಗಿ , ವಿದೇಶ ಪ್ರವಾಸಕ್ಕೂ ಮುನ್ನ ಸಂಪುಟ ಪುನರ್ ರಚನೆ ಆಗೋ ಸಾಧ್ಯತೆ ಇದೆ .
ಇದೇ ವಾರದಲ್ಲಿ ಸಂಪುಟಕ್ಕೆ ಸರ್ಜರಿ ಆಗುತ್ತಾ?
ಒಂದು ವೇಳೆ, ಮೇ 21ರೊಳಗೆ ಸಂಪುಟಕ್ಕೆ ಸರ್ಜಿ ಆಗದಿದ್ರೆ, ಮೇ 10ರವರೆಗೂ ಅವಕಾಶ ಇಲ್ಲ. ಯಾಕಂದ್ರೆ, ರಾಜ್ಯದಲ್ಲಿ ಎರಡು ಪ್ರಮುಖ ಚುನಾವಣೆಗಳು ನಡೆಯಬೇಕು. ಜೂನ್ 7ರಂದು ವಿಧಾನಪರಿಷತ್ಗೆ ಚುನಾವಣೆ ನಡೆಯಲಿದೆ. ಇನ್ನು ಜೂನ್ 10ರಂದು ರಾಜ್ಯಸಭೆಗೆ ಎಲೆಕ್ಷನ್ ನಡೆಯುತ್ತದೆ. ಹೀಗಾಗಿ ಈ ಎರಡು ಚುನಾವಣೆಗಳ ಬಳಿಕ ಸಂಪುಟ ಪುನರ್ ರಚನೆ ಅಥವಾ ವಿಸ್ತರಣೆ ಆಹಬಹುದು. ಸದ್ಯ ಹೈಕಮಾಂಡ್ ನಾಯಕರು ಏನ್ ನಿರ್ಧಾರ ಕೈಗೊಳ್ಳುತ್ತಾರೆ ಅನ್ನೋದು ಕುತೂಹಲ ಕೆರಳಿಸಿದೆ.
![]() |
NDRK FIRST GRADE COLLEGE |