ಹಿಂದು ದೇವಾಲಯದ ವಿಗ್ರಹಗಳನ್ನು ಕಿಡಿಗೇಡಿಗಳಿಂದ ವಿರೂಪ

ಅರಸೀಕೆರೆ :- ರಾಜ್ಯದ ತಿರುಪತಿ ಎಂದೇ ಪ್ರಸಿದ್ಧಿಯಾಗಿರುವ ತಾಲೂಕಿನ ಸುಕ್ಷೇತ್ರ ಮಾಲೆಕಲ್ ಅಮರಗಿರಿ ಲಕ್ಷ್ಮಿ ವೆಂಕಟರಮಣಸ್ವಾಮಿ ದೇವಾಲಯದ ಆವರಣದಲ್ಲಿ ನಿರ್ಮಾಣ ಹಂತದಲ್ಲಿದ್ದ ವಿಗ್ರಹಗಳನ್ನು ಕಿಡಿಗೇಡಿಗಳು ವಿರೂಪಗೊಳಿಸುವ ಘಟನೆ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.
    ಬೆಟ್ಟದ ತಪ್ಪಲಿನ ಗೋವಿಂದರಾಜಸ್ವಾಮಿ ದೇವಾಲಯದ ಸಮೀಪವಿರುವ ಕಲ್ಯಾಣಿಯ ಹಿಂಭಾಗ ಭಕ್ತರೊಬ್ಬರ ಸಹಕಾರದಿಂದ ಶ್ರೀನಿವಾಸ ಕಲ್ಯಾಣ ಮ್ಯೂಸಿಯಂ ನಿರ್ಮಾಣಕ್ಕೆಂದು ಹಲವು ವಿಗ್ರಹಗಳನ್ನು ಕೆತ್ತನೆ ಮಾಡಲಾಗಿತ್ತು ಇನ್ನೂ ಅನೇಕ ವಿಗ್ರಹಗಳು ನಿರ್ಮಾಣ ಅಂತ ಹಂತದಲ್ಲಿದ್ದವು.

     ಇನ್ನೇನು ಮ್ಯೂಸಿಯಂ ಕಾಮಗಾರಿ ಪೂರ್ಣಗೊಂಡು ಲೋಕಾರ್ಪಣೆಗೊಳ್ಳಬೇಕಿದ್ದ ನಾನಾ ದೇವತೆಗಳ ವಿಗ್ರಹಗಳು ಕಿಡಿಗೇಡಿಗಳ ಕಣ್ಣಿಗೆಬಿದ್ದು ವಿರೂಪಗೊಂಡಿರುವುದು ಸಹಜವಾಗಿಯೇ ಭಕ್ತಸಮೂಹದ ಆತಂಕದ ಜತೆಗೆ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ.
  ಗಣಪತಿ.ಆಂಜನೇಯ.ಷಣ್ಮುಖ ಹೀಗೆ 13ಕ್ಕೂ ಹೆಚ್ಚು ದೇವತೆಗಳ ವಿಗ್ರಹಗಳ ಕೈ,ಕಾಲು ಸೇರಿದಂತೆ ಹಲವು ಭಾಗಳನ್ನು ವಿರೂಪಗೊಳಿಸಿ ಕಿಡಿಗೇಡಿಗಳು ಪರಾರಿಯಾಗಿದ್ದಾರೆ.ಸುದ್ದಿ ತಿಳಿದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್‌ಗೌಡ,ಡಿವೈಎಸ್ಪಿ ಅಶೋಕ್,ಗ್ರಾಮಾಂತರ ಠಾಣೆಯ ವೃತ್ತದ ವಸಂತ್ ಕುಮಾರ್.ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.ಅಲ್ಲದೆ ಶ್ವಾನದಳ ಕೂಡ ಬಂದು ಹೋಗಿದ್ದು ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆ ಕಾರ್ಯದಲ್ಲಿ ಕಾರ್ಯೋನ್ಮುಖರಾಗಿದ್ದಾರೆ.

     ಈ ಸಂಬಂಧ ಸುದ್ದಿಗಾರರೊಂದಿಗೆ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಟಿ.ವಿ ಅರುಣ್ ಕುಮಾರ್ ಮಾತನಾಡಿ ದೇವರ ವಿಗ್ರಹಗಳನ್ನು ವಿರೂಪಗೊಳಿಸುವುದು ಅತ್ಯಂತ ಖಂಡನಾರ್ಹವಾಗಿದ್ದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಇಂತಹ ಕಿಡಿಗೇಡಿಗಳ ವಿರುದ್ಧ ಪೊಲೀಸರು ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಮಾಜದ ಶಾಂತಿಗೆ ಇಂಥ ಕೆಟ್ಟ ಮನಸ್ಥಿತಿಯುಳ್ಳ ದುಷ್ಟರು ಕಾರಣರಾಗುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ದೇವಾಲಯ ಹಾಗೂ ದೇವರ ವಿಗ್ರಹಗಳನ್ನು ವಿರೂಪಗೊಳಿಸುವುದು ಕ್ಷಮಿಸಲಾರದ ಅಪರಾಧ ಈ ದುಷ್ಕೃತ್ಯವನ್ನು ಯಾರೇ ಮಾಡಿದ್ದರೂ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಹಾಗೂ ಸ್ಥಳೀಯ ಅಧಿಕಾರಿಗಳಿಗೆ ಮನವಿ ಮಾಡಿದ್ದೇನೆ.

               ಕೆ.ಎಂ ಶಿವಲಿಂಗೇಗೌಡ ಶಾಸಕರು.

Post a Comment

Previous Post Next Post