ಜಾವಗಲ್: ಬಸ್ ಇಳಿಯುತ್ತಿದ್ದಾಗ ಮಹಿಳೆ ವ್ಯಾನಿಟಿ ಬ್ಯಾಗ್‌ನಲ್ಲಿಟ್ಟಿದ್ದ 3 ಲಕ್ಷ ಮೌಲ್ಯದ 62 ಗ್ರಾಂ ತೂಕದ ಚಿನ್ನಾಭರಣಗಳ ಕಳವು ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಜಾವಗಲ್ ಹೋಬಳಿ ಕೋಟೆ ಬೀದಿಯ ನಿವಾಸಿ ಸುಮಿತ್ರಾ ಅವರು 15 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಕಳೆದ ಮೇ 22 ರಂದು ಸಂಜೆ 4 ಗಂಟೆ ಸುಮಾರಿಗೆ ಮಗ ಪ್ರವೀಣ್‌ಕುಮಾರ್‌ನೊಂದಿಗೆ ಜಾವಗಲ್ ಗ್ರಾಮದಲ್ಲಿ ನಿಗದಿಯಾಗಿದ್ದ ಸಂಬAಧಿಕರ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಕಾರ್ಯಕ್ರಮ ಮುಗಿಸಿ ಕೋಟೆ ಬೀದಿಯ ತಮ್ಮ ಮನೆಯಲ್ಲಿ ಉಳಿದುಕೊಂಡಿದ್ದರು.
ಮೇ 24 ರ ಸಂಜೆ 4.20 ಕ್ಕೆ ಸುಮಿತ್ರಾ ಅವರು, 36 ಗ್ರಾಂ ತೂಕದ ಚಿನ್ನದ ನಕ್ಲೆಸ್, 20 ಗ್ರಾಂ ತೂಕದ ಚಿನ್ನದ ಕರಿಮಣಿ ಸರ, 6 ಗ್ರಾಂ ತೂಕದ ಒಂದು ಜೊತೆ ಓಲೆ ಜುಮುಕಿಯನ್ನು ವ್ಯಾನಿಟಿ ಬ್ಯಾಗ್‌ನಲ್ಲಿ ಹಾಕಿಕೊಂಡು ಪುತ್ರನೊಂದಿಗೆ ಬೆಂಗಳೂರಿಗೆ ಹೋಗಲು ಜಾವಗಲ್‌ನಿಂದ ಹೊರಟು ಬಾಣಾವರದಲ್ಲಿ ಬಸ್ ಇಳಿಯುತ್ತಿದ್ದಾಗ ವ್ಯಾನಿಟಿ ಬ್ಯಾಗ್‌ನಿಂದ ಮೊಬೈಲ್ ತೆಗೆದುಕೊಳ್ಳಲು ನೋಡಿದಾಗ ಬಾಕ್ಸ್ ಸಮೇತ ಒಡವೆ ಇರಲಿಲ್ಲ. ನಿನ್ನೆ ಸುಮಿತ್ರಾ ನೀಡಿದ ದೂರು ಆಧರಿಸಿ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
1.15 ಲಕ್ಷ ರೂ. ವಂಚನೆ
ಅಪರಿಚಿತ ವ್ಯಕ್ತಿ ಕರೆ ಮಾಡಿ ನಾನು ಎಸಿಬಿ ಅಧಿಕಾರಿ ನಿಮ್ಮ ಮೇಲೆ ದಾಳಿ ಮಾಡುವುದಾಗಿ ಹೆದರಿಸಿ,
1.15 ಲಕ್ಷ ರೂ. ವಂಚನೆ ಮಾಡಿದ್ದಾನೆ. ಕಳೆದ ಏಪ್ರಿಲ್ 11 ರಂದು ಚಿಕ್ಕಮಗಳೂರು ಜಿಲ್ಲೆ ಬಿಟ್ಟೇನಹಳ್ಳಿ ಗ್ರಾಮದ ಪುನೀತ್ ಬಿ.ಆರ್. ಎಂಬುವರಿಗೆ ಕರೆ ಮಾಡಿದ ವ್ಯಕ್ತಿ ಹಾಗೂ ಇತರರು, ನಾವು ಎಸಿಬಿ ಅಧಿಕಾರಿಗಳು, ನಿಮ್ಮ ಮನೆ ಮೇಲೆ ದಾಳಿ ಮಾಡುತ್ತೇವೆಂದು ಹೆದರಿಸಿದ್ದಾರೆ. ಬ್ಭೆಡ ಎಂದರೆ ನಾವು ನೀಡುವ ಅಕೌಂಟ್‌ಗೆ 1.15 ಲಕ್ಷ ಹಣ ಹಾಕುವಂತೆ ಹೇಳಿ ಫೋನ್ ಪೇ ಮತ್ತು ಗೂಗಲ್ ಪೇ ಮೂಲಕ ತಮ್ಮ ಖಾತೆಗೆ ಜಮಾಮಾಡಿಸಿಕೊಂಡಿದ್ದಾರೆ. ವಂಚನೆ ಗೊತ್ತಾದ ನಂತರ ಪುನೀತ್, ನಗರದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.