ಹಾಸನ: ತಮ್ಮ ಪಠ್ಯ ಹಿಂಪಡೆಯಲು ಪತ್ರ ಬರೆಯುತ್ತಿರುವ ಸಾಹಿತಿಗಳ ನಡೆಯನ್ನು ಟೀಕಿಸಿದ ಬಿಜೆಪಿ ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಹಿಂದೆ ಇದೇ ಮಾಹಾನುಭಾವರು ಪ್ರಶಸ್ತಿ ವಾಪಸ್ ತಗೊಳ್ಳಿ ಅಂದ್ರು, ಆದರೆ ಕೊಡಲಿಲ್ಲ ಎಂದು ಲೇವಡಿ ಮಾಡಿದರು.
ನಗರದಲ್ಲಿಂದು ಮಾತನಾಡಿದ ಅವರು, ಪ್ರಶಸ್ತಿ ಜೊತೆ ಕೊಟ್ಟ ಹಣದ ಬಗ್ಗೆ ಚಕಾರ ಎತ್ತಲಿಲ್ಲ. ಬಹಳ ಜನ ಹೀಗೆ ಮಾಡಿದ್ದಾರೆ, ಇದೇನು ಹೊಸದಲ್ಲ. ಕೆಲವರು ತಪ್ಪು ಕಲ್ಪನೆಯಿಂದ ಕೆಲವರು ದುರುದ್ದೇಶದಿಂದ ಹೀಗೆ ಮಾಡಿದ್ದಾರೆ ಎಂದರು.
ತಪ್ಪು ಕಲ್ಪನೆಯಿಂದ ಮಾತಾಡಿರುವವರಿಗೆ ಮನವರಿಕೆ ಮಾಡುತ್ತೇವೆ. ದುರುದ್ದೇಶದಿಂದ ಮಾತಾಡುವವರನ್ನು ಎದುರಿಸುತ್ತೇವೆ ಎಂದು ಟಾಂಗ್ ನೀಡಿದರು. ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯಲ್ಲಿ ಮಹಿಳೆಯರಿಲ್ಲ, 10ನೇ ತÀರಗತಿ ಕನ್ನಡ ಪಠ್ಯದಲ್ಲಿ ಲೇಖಕಿಯರ ಪಾಠ ಇಲ್ಲ ಎಂಬ ವಿಚಾರಕ್ಕೆ, ಹಿಂದಿನ ನಿಯಮಾವಳಿ ಮುಂದುವರಿಸಲಾಗಿದೆ ಎಂದರು.
ಆರ್‌ಎಸ್‌ಎಸ್‌ವಿರುದ್ಧ ಸಿದ್ದರಾಮಯ್ಯ ಸರಣಿ ಟ್ವಿಟ್‌ಗೆ ಸ್ವಯಂ ಸೇವಕನಾಗಿ ಉತ್ತರ ಕೊಟ್ಟಿದ್ದೇನೆ. ದೇಶಕ್ಕೆ ಆರ್‌ಎಸ್‌ಎಸ್ ಏನು ಕೊಡುಗೆ, ಸೇವೆ ಮಾಡಿದೆ ಎಂಬುದನ್ನು ಮನವರಿಕೆ ಮಾಡಿದ್ದೇನೆ. ಸಿದ್ದರಾಮಯ್ಯ ಅವರ ಸರ್ಟಿಫಿಕೇಟ್ ಆರ್‌ಎಸ್‌ಎಸ್‌ಗೆ ಅವಶ್ಯಕತೆಯಿಲ್ಲ. ಆರ್‌ಎಸ್‌ಎಸ್ ಮುಗಿಸುತ್ತೇವೆ ಅಂದವರ ಕತೆ ಮುಗಿದು ಹೋಗಿದೆ ಎಂದು ತಿರುಗೇಟು ನೀಡಿದರು.
ನಮಗೂ, ಆರ್‌ಎಸ್‌ಎಸ್‌ಗೂ ತಾಯಿ ಸಂಬAಧ ಇದೆ. ಆದರೆ ಟಿಪ್ಪು ಕನ್ನಡ ದ್ರೋಹಿ, ನಾಡು ನುಡಿಗೆ ಅಪಚಾರ ಮಾಡಿದ್ದಾನೆ ಅಂದ್ರೆ ನೀವ್ಯಾಕೆ ಉರ್ಕೊಳ್ತೀರಿ, ಟಿಪ್ಪುಗೂ ನಿಮಗೂ ಏನ್ರಿ ಸಂಬAಧ ಎಂದು ಪ್ರಶ್ನಿಸಿದರು.
ಮೈವಿಆರ್ ಪರ ಮತಯಾಚನೆ:
ಇದೇ ವೇಳೆ ದಕ್ಷಿಣ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮೈ.ವಿ.ರವಿಶಂಕರ್ ಪರ ನಗರದ ವಿವಿಧ ಕಾಲೇಜು ಹಾಗೂ ಜಿಲ್ಲಾ ವಕೀಲರ ಸಂಘಕ್ಕೆ ಭೇಟಿ ನೀಡಿ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಶಾಸಕ ಪ್ರೀತಮ್ ಜೆ. ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಹೆಚ್.ಕೆ.ಸುರೇಶ್, ನಗರ ಮಂಡಲ ಅಧ್ಯಕ್ಷ ವೇಣುಗೋಪಾಲ್, ಮುಖಂಡರಾದ ಶೋಬನ್ ಬಾಬು, ಪ್ರಸನ್ನಕುಮಾರ್ ಉಪಸ್ಥಿತರಿದ್ದರು.
ಜೂ.10 ರವರೆಗೆ ಕಾದು ನೋಡಿ:
ರಾಜ್ಯಸಭೆ ಚುನಾವಣೆಗೆ ಬಿಜೆಪಿಯಿಂದ ಮೂರನೇ ಅಭ್ಯರ್ಥಿ ಕಣಕ್ಕಿಳಿಸುವ ಬಗ್ಗೆ ಪ್ರತಿಕ್ರಿಯಿಸಿ ನಮ್ಮ ಇಬ್ಬರು ಅಧಿಕೃತ ಅಭ್ಯರ್ಥಿ ಗೆದ್ದ ನಂತರವೂ ನಮ್ಮ ಬಳಿ 32 ಓಟ್ ಉಳಿಯಲಿವೆ.
ಕಾಂಗ್ರೆಸ್ ಬಳಿ 19-20, ಜನತಾದಳದಿಂದ ಎಲ್ಲರೂ ಓಟ್ ಹಾಕಿದ್ರೆ 32 ಓಟ್ ಉಳೀತಾವೆ. ಕೆಲವೊಮ್ಮೆ ಅಧಿಕೃತ ಅಭ್ಯರ್ಥಿಗಳು ಸೋತು, ಬಂಡಾಯ ಅಭ್ಯರ್ಥಿಗಳು ಗೆದ್ದಿರುವುದನ್ನು ನೋಡಿದ್ದೇವೆ. ನಮ್ಮ ಮೂರನೇ ಅಭ್ಯರ್ಥಿಯೂ ಗೆಲ್ಲುವ ವಿಶ್ವಾಸವಿದೆ ಜೂ.10 ರಂದು ಎಲ್ಲವೂ ತಿಳಿಯಲಿದೆ ಎಂದರು.
ಜೆಡಿಎಸ್ ನವರು ಬೆಂಬಲ ಕೇಳಿದ್ದಾರಾ ಎಂಬ ಪ್ರಶ್ನೆಗೆ, ಆ ಸಂದರ್ಭ ಬಂದಾಗ ವಿಚಾರ ಮಾಡ್ತೇವೆ. ಇದುವರೆವಿಗೂ ಬೆಂಬಲ ಕೇಳಿಲ್ಲ. ಅಷ್ಟಕ್ಕೂ ಅವರಿಗೆ ನಾವು ಕೋಮುವಾದಿಗಳು,ಸೆಕ್ಯೂಲರ್ ಅಲ್ವಲ್ಲ ಎಂದು ಲೇವಡಿ ಮಾಡಿದರು.
Tags
ಹಾಸನ