ಹಾಸನ: ಪರಿಶಿಷ್ಟ ಜಾತಿಗೆ ಸೇರಿದ ಜೀತವಿಮುಕ್ತರಿಗೆ ಸಕಲೇಶಪುರ ಉಪ ವಿಭಾಗ ವ್ಯಾಪ್ತಿಯ ಕಂದಾಯ ಜಮೀನಿನಲ್ಲಿ ಭೂಮಿ ನೀಡುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಜಿಲ್ಲಾಧಿಕಾರಿ ಆರ್. ಗಿರೀಶ್‌ಗೆ ಮನವಿ ಸಲ್ಲಿಸಲಾಯಿತು.
ಹಾಸನ ತಾಲೂಕಿನ ಕಡದರವಳ್ಳಿ, ದೊಡ್ಡಗದ್ದವಳ್ಳಿ, ಹರುವನಹಳ್ಳಿ, ಸಾತೇನಹಳ್ಳಿ ಇನ್ನಿತರೆ ಗ್ರಾಮಗಳ ಪ.ಜಾತಿ ಮತ್ತು ಇತರೆ ವರ್ಗಕ್ಕೆ ಸೇರಿದ ಸುಮಾರು 26 ಮಂದಿಯನ್ನು 1976 ರ ದಶಕದಲ್ಲಿ ಜೀತವಿಮುಕ್ತಗೊಳಿಸಲಾಗಿದೆ.
ಆನಂತರ ಸದರಿ ಕುಟುಂಬಗಳಿಗೆ ಜಮೀನು ನೀಡಿ ಪುನರ್ವಸತಿ ಕಲ್ಪಿಸುವ ಉದ್ದೇಶದಿಂದ ಹಾಸನ ತಾಲೂಕು ಸೀಗೆಗುಡ್ಡ ಸ.ನಂ. 94 ರಲ್ಲಿ ತಲಾ 3 ಎಕರೆಯಂತೆ ಜಮೀನು ಮಂಜೂರು ಮಾಡಲಾಗಿತ್ತು. ಆದರೆ ಸೀಗೆಗುಡ್ಡ ಸುತ್ತಮುತ್ತಲಿನ ಕೆಲ ಬಲಾಢ್ಯರು ಸೇರಿ ನಮ್ಮನ್ನು ಒಕ್ಕಲೆಬ್ಬಿಸಿದ್ದಾರೆ ಎಂದು ದೂರಿದರು.
ಅಂದಿನಿAದ ಈವರೆಗೆ ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ಹಲವಾರು ಬಾರಿ ಮನವಿ ನೀಡಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ. ಪರಿಣಾಮ ನಾವು ಯಾವುದೇ ಜಮೀನು ಇಲ್ಲದೆ ಇಂದಿಗೂ ನಿರಾಶ್ರಿತರಾಗಿದ್ದೇವೆ ಎಂದು ಧರಣಿ ನಿರತರು ದೂರಿದರು.
ಪುನರ್ವಸತಿಗೆ ಆಗ್ರಹಿಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಧರಣಿ ಸತ್ಯಾಗ್ರಹ ಕೂಡ ಮಾಡಲಾಗಿದೆ. ಆದರೂ ಪೂರಕ ಸ್ಪಂದನೆ ಸಿಕ್ಕಿಲ್ಲ.
ಜಮೀನು ನೀಡುವಂತೆ ಡಿಸಿ ಅಧ್ಯಕ್ಷತೆಯಲ್ಲಿ ನಡೆದ ದಲಿತ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಹಲವು ಸಭೆ ನಡೆದಿವೆ.
ಜೀತವಿಮುಕ್ತರಾದ ನಮಗೆ ಜಮೀನು ನೀಡುವಂತೆ ಹಲವಾರು ಸಭಾ ನಡಾವಳಿ ಆಗಿವೆ.ಆದರೂ ಜಮೀನು ಆಸೆ ಕೈಗೂಡಿಲ್ಲ. ಇನ್ನಾದರೂ ಡಿಸಿ ಅವರು ಇತ್ತ ಗಮನ ಹರಿಸಿ ನಮ್ಮ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಕೃಷ್ಣದಾಸ್, ದಲಿತ ಸಂಘಟನಾ ಸಂಚಾಲಕ ಆರ್. ಮರಿಜೋಸೆಪ್ ಮೊದಲಾದವರಿದ್ದರು.
Tags
ಹಾಸನ