ಬಹಳ ವಿಜೃಂಬಣೆಯಿಂದ ಲಕ್ಷಾಂತರ ಜನರ ಸಮ್ಮುಖದಲ್ಲಿ ಜರುಗಿದ ದೊಡ್ಡಮ್ಮ ತಾಯಿ ಜಾತ್ರಾ ಮಹೋತ್ಸವ

ಅರಕಲಗೂಡು :- ಪಟ್ಟಣದ ಗ್ರಾಮದೇವತೆ ಶ್ರೀ ದೊಡ್ಡಮ್ಮ ತಾಯಿ ಹಬ್ಬ ಮತ್ತು ಜಾತ್ರಾಮಹೋತ್ಸವ ಬಹಳ  ವಿಜ್ರಂಭಣೆಯಿಂದ ಲಕ್ಷಾಂತರ ಜನರ ಸಮ್ಮುಖದಲ್ಲಿ  ನೆರವೇರಿತು.ಮಂಗಳವಾರ ಮುಂಜಾನೆಯಿಂದ ದೇವಸ್ಥಾನದಲ್ಲಿ ಕಳಸ ಪೂಜೆಯೊಂದಿಗೆ ದೊಡ್ಡಮ್ಮ ನವರಿಗೆ ಪಂಚಾಮೃತ ಅಭಿಷೇಕ ಮತ್ತು ವಿಶೇಷ ಪೂಜೆ ವಿಧಿ-ವಿಧಾನಗಳನ್ನು ದೇವಿಗೆ ಸಲ್ಲಿಸಲಾಯಿತು.
ದೇವಿಗೆ 18 ಸಮುದಾಯದವರು ಮತ್ತು ಸುತ್ತಮುತ್ತಿನ ಗ್ರಾಮಗಳಾದ ದಡದಹಳ್ಳಿ ಹೊನ್ನವಳ್ಳಿ ಪೇಟೆ ಮಾಚ ಗೌಡನಹಳ್ಳಿ ಕೆಲ್ಲೂರು ಇನ್ನು ಹಲವು ಗ್ರಾಮಗಳಿಂದ
ಸಾವಿರಾರು ಮಹಿಳೆಯರು ಹಣ್ಣುಕಾಯಿ ಹೊತ್ತು ಬಂದು ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕಿ ಮಂಗಳವಾದ್ಯಗಳೊಂದಿಗೆ ಬಂದು ಕುಣಿದು ಸಂಭ್ರಮಿಸಿದರು. ದೇವಸ್ಥಾನಕ್ಕೆ ಹೋಗಿ ದೇವರಿಗೆ ಪೂಜೆ ಸಲ್ಲಿಸಿದರು ನಂತರ ದೇವಿಯ ಹಬ್ಬದ ದಿನ ಬೆಳಿಗ್ಗೆ ಕಾವೇರಿ ನದಿಯಿಂದ ದೊಡ್ಡಮ್ಮ-ಚಿಕ್ಕಮ್ಮ ನವರು ಉಸ್ತವ ಮೆರವಣಿಗೆಯೊಂದಿಗೆ ಆಗಮಿಸಿ ಸಂಜೆ 5:00 ತಂಡದಿಂದ ಸೋಬಾನೆ ಪದಗಳು ಮತ್ತು ಬಂಡಾರ ಕಟ್ಟಲಾಯಿತು ಮತ್ತು ವಿವಿಧ ಕಲಾ ತಂಡಗಳಿಂದ ನಾದಸ್ವರ ಜೊತೆಗೆ ಹೂವಿನ ಅಲಂಕಾರದಿಂದ ಕಂಗೊಳಿಸುತ್ತಿದ್ದ ದೊಡ್ಡಮ್ಮ ತಾಯಿಯನ್ನು ಸಾವಿರಾರು ಮಂದಿ ಭಕ್ತರು ಕಣ್ತುಂಬಿಕೊಂಡರು.
ಗ್ರಾಮದೇವತೆ ಹಬ್ಬಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು ದೇವಸ್ಥಾನದ ಆವರಣದಲ್ಲಿ ಮಂಗಳವಾರಕ್ಕೆ ಮನಸೋತು ಕುಣಿದು ಸಂಭ್ರಮಿಸಿದರು ದರ್ಶನ ಪಡೆಯಲು ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿದ್ದ ಹಿನ್ನೆಲೆಯಿಂದ ಪಟ್ಟಣದ ಬೈಪಾಸ್ ರಸ್ತೆಯಿಂದ ಹೊಳೆನರಸೀಪುರ ಡಿಪೋ ರಸ್ತೆ ಪೇಟೆ ಮುಖ್ಯ ರಸ್ತೆ ವಾಹನ ದಟ್ಟಣೆ ಹೆಚ್ಚಾಗಿ ಕಾರಣ ಪೊಲೀಸ್ ಇಲಾಖೆ ಅಧಿಕಾರಿಗಳು ವಾಹನಗಳ ಸುಗಮ ಸಂಚಾರಕ್ಕೆ ಹಾಗೂ ಮುಂಜಾನೆಯಿಂದ ರಾತ್ರಿಯವರೆಗೂ ಕಾರ್ಯ ನಿರಂತರವಾಗಿ ಜನರಿಗೆ ಮತ್ತು ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡುವುದಕ್ಕೆ ಪೊಲೀಸ್ ಇಲಾಖಾಧಿಕಾರಿಗಳು ಹರಸಾಹಸಪಟ್ಟರು ದೇವಿಯ ದರ್ಶನ ಮುಗಿಸಿ ಹಿಂತಿರುಗುತ್ತಿದ್ದ ಭಕ್ತಾದಿಗಳಿಗೆ ಹಾಗಾಗಿ ಜೇಬುಗಳ್ಳ ರಿದ್ದಾರೆ ಎಂದು ಪೊಲೀಸರು ಎಚ್ಚರ ವಹಿಸುತ್ತಿದ್ದರು.

Post a Comment

Previous Post Next Post