ಮಲ್ಲಿಪಟ್ಟಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಂಬುಲೆನ್ಸ್ ಕೊಡುಗೆಯಾಗಿ ನೀಡುವ ಭರವಸೆ .

ಅರಕಲಗೂಡು :- ಮುಂದಿನ ದಿನಗಳಲ್ಲಿ ತಾಲ್ಲೂಕಿನ ಮಲ್ಲಿಪಟ್ಟಣ ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೊಡುಗೆಯಾಗಿ ಆಂಬ್ಯುಲೆನ್ಸ್ ನೀಡಲು ನಾನು ತೀರ್ಮಾನಿಸಿದ್ದೇನೆ ಎಂದು  ಸಮಾಜ ಸೇವಕರು ಹಾಗೂ ಅಧಿತಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರು ಆದಂತಹ ಸಿಂಗನಕುಪ್ಪೆ ಸುರೇಶ್ ಭರವಸೆ ನೀಡಿದ್ದಾರೆ .
 ಸಿಂಗನಕುಪ್ಪೆ ಸುರೇಶ್ ಅವರ ಹುಟ್ಟುಹಬ್ಬದ ತಾಲ್ಲೂಕಿನ ಮಲ್ಲಿಪಟ್ಟಣ ಗ್ರಾಮದಲ್ಲಿ ಸುರೇಶ್ ಅಭಿಮಾನಿ ಬಳಗದಿಂದ ಆಚರಿಸಲಾಗಿದ್ದ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಈ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಂಬುಲೆನ್ಸ್ ತುಂಬ ಅವಶ್ಯಕವಿದ್ದು ಅದನ್ನು ಕೊಡುಗೆಯಾಗಿ ನೀಡಲು ಆದಷ್ಟು ಬೇಗ ಪ್ರಯತ್ನಿಸುತ್ತೇನೆ ಎಂದರು .

ಇದೇ ಸಂದರ್ಭದಲ್ಲಿ ಮಾತನಾಡಿದ ತಾಲ್ಲೂಕಿನ ಕೆಸವತ್ತೂರು ಮಠದ ಬಸವರಾಜೇಂದ್ರ ಸ್ವಾಮೀಜಿ ,ಸಿಂಗನಕುಪ್ಪೆ ಸುರೇಶ್ ಅವರು ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು ಅವರ ದುಡಿಮೆಯ ಶೇಕಡಾ 50% ರಷ್ಟು ಹಣವನ್ನು ಸಮಾಜಸೇವೆಗೆ ತೊಡಗಿಸಿಕೊಳ್ಳುತ್ತಿದ್ದಾರೆ ಆದ್ದರಿಂದ ಆ ಭಗವಂತನು ಮುಂದಿನ ದಿನಗಳಲ್ಲಿ ಅವರಿಗೆ ಇನ್ನಷ್ಟು ಆಯುರಾರೋಗ್ಯ ಐಶ್ವರ್ಯವನ್ನು ಕರುಣಿಸಲಿ ಎಂದು ಅವರ ಹುಟ್ಟುಹಬ್ಬದಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು .

ಸಿಂಗನಕುಪ್ಪೆ ಸುರೇಶ್ ಅವರ ಹುಟ್ಟುಹಬ್ಬದ ಅಂಗವಾಗಿ ಸುರೇಶ್ ಅವರ ನಿವಾಸಕ್ಕೆ ತೆರಳಿದ ಮಾಜಿ ಸಚಿವರಾದ ಎ ಮಂಜು ಸುರೇಶ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿ ಕುಶಲೋಪರಿ ವಿಚಾರಿಸಿದರು .

Post a Comment

Previous Post Next Post