ಬೇಲೂರು: ಪಠ್ಯದ ವಿಚಾರದಲ್ಲಿ ನೈತಿಕ ಶಿಕ್ಷಣವನ್ನು ನೀಡುವಂತಹ ಕೆಲಸ ಆಗಬೇಕು. ಇದರಲ್ಲಿ ರಾಜಕೀಯ ಬೆರೆಸಿ ಮಕ್ಕಳ ಮನಸ್ಸನ್ನು ಬೇರೆಡೆ ಸೆಳೆಯುವಂತಹ ಕೆಲಸವನ್ನು ಸರ್ಕಾರಗಳು ಮಾಡಬಾರದು ಎಂದು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ಪಟ್ಟಣದ ಜ್ಯೂನಿಯರ್ ಕಾಲೇಜು ಆವರಣದಲ್ಲಿ ಏರ್ಪಡಿಸಿದ್ದ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಯವರ 115ನೇ ಹಾಗೂ ಬಸವೇಶ್ವರರ 885 ನೆಯ ಜನ್ಮದಿನದ ಅಂಗವಾಗಿ ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ಯುವ ಘಟಕ, ಮಹಿಳಾ ಘಟಕ,ಮತ್ತು ನೌಕರರ ಘಟಕ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು
ಬಸವಣ್ಣನವರ ವಿಚಾರ ಪ್ರತಿಯೊಬ್ಬರಿಗೂ ಅನ್ವಯಿಸುವಂತಹ ದಾರಿಯಾಗಿದೆ, ಸಮಾಜದಲ್ಲಿ ಮಹಿಳೆಯರಿಗೆ ಸಮಾನತೆ ಕೊಟ್ಟಂತಹ ಕಾಲವೆಂದರೆ ಅದು 12ನೇ ಶತಮಾನದಲ್ಲಿ ಮಾತ್ರ ಕಾಣಲು ಸಾಧ್ಯ, ಇವರು ಕೂಡ ಪುರುಷನಂತೆಯೇ ಸಮಾನ ಎಂದು ತಿಳಿಸಿಕೊಟ್ಟಂತಹ ಮಹಾನಾ ಪುರುಷ ಬಸವಣ್ಣನವರು, ಯಾವುದೇ ಕೆಲಸವನ್ನು ಕರ್ತವ್ಯನಿಷ್ಠೆಯಿಂದ ಮಾಡಬೇಕಿದೆ, ಯಾವ ಕೈ ದುಡಿಮೆ ಮಾಡ್ತಿದಿಯೋ ಅಂತ ಕೈ ಪವಿತ್ರವಾಗುತ್ತದೆ, ನಮ್ಮಲ್ಲಿರುವ ದೋಷವನ್ನು ಮೊದಲು ನಾವು ತಿದ್ದಬೇಕು ನಂತರದ ಜಯಂತಿ ಆಚರಣೆ ನಡೆಸಬೇಕಾಗಿದೆ, ಜಯಂತಿಗಳು ಕೇವಲ ಒಂದು ವರ್ಗಕ್ಕೆ ಸೀಮಿತವಾಗಿದೆ ಇಡೀ ಜಗತ್ತಿಗೆ ಆದರ್ಶವಾಗಿರುವ ಅಂತಹ ಕೆಲಸ ಕಾರ್ಯವನ್ನು ಮಾಡಬೇಕು, ದೇಶ ಅಸೂಯೆ ಯಾವುದು ಕೂಡ ಮನುಷ್ಯನ ಮನಸ್ಸಿನಲ್ಲಿ ಅಂಟಿಕೊಂಡಿರ ಬಾರದು ಸಮಾಜದಲ್ಲಿ ಯಾವ ರೀತಿ ಬದುಕಬೇಕು ಎಂಬುದನ್ನು ಮೊದಲು ಅರಿತವನೇ ಮಾನವ, ಅವರ ಆದರ್ಶ, ತತ್ವಗಳನ್ನು ಬಸವಣ್ಣನವರು ಜಗತ್ತಿಗೆ ಸಾರಿ ಆದರ್ಶ ವ್ಯಕ್ತಿಯಾಗಿದ್ದಾರೆ ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ಪಾಲಿನೆ ಮಾಡಿದಂತ ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮೀಜಿ ಅವರು ಇಂದು ಜಗತ್ತಿಗೆ ಪ್ರಸಿದ್ಧರಾಗಿದ್ದಾರೆ, ಅವರು ಶಿಕ್ಷಣ, ಅನ್ನದಾಸೋಹ ಇನ್ನು ಮುಂತಾದ ಕ್ಷೇತ್ರಗಳಲ್ಲಿ ತಮ್ಮ ಹೌದಾರ್ಯವನ್ನು ಮೆರೆದಿದ್ದಾರೆ ಎಂದರು.
ಪುಷ್ಪಗಿರಿ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ಸೋಮಶೇಖರ ಸ್ವಾಮೀಜಿ ಮಾತನಾಡಿ ಸರ್ಕಾರ ಯಾವ ಆದರ್ಶದ ಮೇಲೆ ಆಡಳಿತ ನಡೆಸುತ್ತಿದೆ ಎಂದು ತಿಳಿಸಿಕೊಡಬೇಕಾಗಿದೆ, ಪ್ರತಿಯೊಂದು ವಿಚಾರದಲ್ಲಿ ಶಾಂತಿ ಎಂದು ಹೇಳುತ್ತೇವೆ ಆದರೆ ಮನುಷ್ಯ ಅದರಲ್ಲಿ ಸಮಾಧಾನವನ್ನು ಹುಡುಕುವಂತಹ ಕೆಲಸವನ್ನು ಮಾಡುತ್ತಿಲ್ಲ, ಏಕೆಂದರೆ ಬಟ್ಟೆ, ಊಟ ,ಉಡುಗೆ-ತೊಡುಗೆಗಳು ಭಾಷೆ ಮೇಲೆ ದ್ವೇಷಾಸೂಯೆ ಎದ್ದುಕಾಣುತ್ತಿದೆ ,ಅದು ಇಂದು ಶಿಕ್ಷಣ ಕ್ಷೇತ್ರಕ್ಕೆ ಬಂದು ನಿಂತಿದೆ, ಇದರಿಂದ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತದೆ ಹೊರತು ರಾಜಕೀಯಕ್ಕೆ ಯಾವುದೇ ತರಹ ಪರಿಣಾಮ ಬೀರುವುದಿಲ್ಲ,
ಇಂದು ನಾವು ಬೇರೆಯವರ ಅಂಕುಡೊಂಕುಗಳನ್ನು ನೋಡುತ್ತಾ ಬರುತ್ತಿದೆವೆ ನಮ್ಮ ಅಂಕುಡೊಂಕುಗಳನ್ನು ತಿದ್ದಲು ಸಾಧ್ಯವಾಗುತ್ತಿಲ್ಲ, ನಮ್ಮಲ್ಲಿರುವ ದ್ವೇಷವನ್ನು ಮೊದಲು ತಿದ್ದುವ ಕಾರ್ಯ ಮಾಡಿಕೊಳ್ಳಬೇಕು, ಜಾತಿ, ಅಸೂಯೆ, ಶಿಕ್ಷಣ ಕ್ಷೇತ್ರದಲ್ಲಿ ಪ್ರವೇಶಕ್ಕೆ ಅವಕಾಶ ನೀಡಬಾರದು. ಬಸವಣ್ಣನವರ ವಚನದಲ್ಲಿ ಇದು ಉಲ್ಲೇಖ ವಾಗಿದ್ದರೂ ಜಾರಿಗೆ ತರುವಲ್ಲಿ ವಿಫಲವಾಗುತ್ತಿದ್ದಾರೆ. ಮೂಲ ಸಂದೇಶಗಳನ್ನು ತಿದ್ದುವಂತಹ ಕೆಲಸಗಳನ್ನು ಯಾರು ಕೂಡ ಮಾಡಬಾರದು.
ಜಾತಿಭೇದವಿಲ್ಲದೆ ಸಾವಿರಾರು ಮಕ್ಕಳಿಗೆ ಆಶ್ರಯವನ್ನು ನೀಡಿ ಪ್ರಸಿದ್ಧ ಪಡೆದಂತಾ ಮಠವೆಂದರೆ ಸಿದ್ದಗಂಗಾ ಮಠ. ಶಿಕ್ಷಣ ಕ್ಷೇತ್ರದಲ್ಲಿ ರಾಜಕೀಯ ಮಾಡಿದರೆ ಅದು ವಿದ್ಯಾರ್ಥಿಗಳ ಮೇಲೆ ದುಷ್ಪರಿಣಾಮ ಬೀರುತ್ತದೆ ವರತು ಬೇರೆಯವರಿಗೆ ಅಲ್ಲ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ, ಗೋಪಾಲಯ್ಯ ಮಾತನಾಡಿ ಬಸವಣ್ಣನವರು ಒಂದು ಜಾತಿಗೆ ಸೀಮಿತವಾಗದೆ ವಿಶಿಷ್ಟವಾದ ಗೌರವ ಸ್ಥಾನವನ್ನು ಹೊಂದಿದವರು ಪ್ರತಿಯೊಬ್ಬರು ಬೇಧಭಾವ ತೋರದೆ ಪರಮಪೂಜ್ಯರನ್ನು ಪೂಜಿಸುವಂತ ಕೆಲಸವನ್ನು ಪ್ರತಿಮನೆಯಲ್ಲೂ ಮಾಡಬೇಕಾಗಿದೆ. ಶಿವಕುಮಾರ ಸ್ವಾಮೀಜಿ ಅವರ ದಾರಿಯಲ್ಲಿ ಸಿದ್ಧಗಂಗಾ ಮಠವು ಇಂದಿಗೂ ಸಹ ಸಾವಿರಾರು ಜನರಿಗೆ ಅನ್ನದಾಸೋಹ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ. ಗ್ರಾಮಾಂತರ ಜನರಿಗೆ ಶಿಕ್ಷಣದ ವ್ಯವಸ್ಥೆಯನ್ನು ನೀಡುವುದೇ ಸಿದ್ದಗಂಗಾ ಮಠದ ಉದ್ದೇಶ ವಾಗಿದ್ದರಿಂದ ಶಿಕ್ಷಣ ಕ್ಷೇತ್ರದಲ್ಲಿ ಇಡೀ ದೇಶದ ಗಮನವನ್ನು ಸೆಳೆಯುತ್ತಿದೆ. ಶ್ರೀಗಳ ಮಠದಲ್ಲಿ ಸಾವಿರಾರು ಮಕ್ಕಳಿಗೆ ಆಶ್ರಯವನ್ನು ನೀಡಿ ಪುಣ್ಯದ ಕೆಲಸವನ್ನು ಮಾಡುತ್ತಾ ಬರುತ್ತಿದೆ ಎಂದರು.
ಶಾಸಕ ಕೆ,ಎಸ್, ಲಿಂಗೇಶ್ ಮಾತನಾಡಿ ಎಲ್ಲರಿಗೂ ಸಮಾನತೆ ನೀಡುವ ಉದ್ದೇಶದಿಂದ ಹೋರಾಟ ಮಾಡಿದ ಮಹಾನ್ ಪುರುಷ ಬಸವಣ್ಣನವರು ಅನುಭವ ಮಂಟಪವನ್ನು ಸ್ಥಾಪನೆಮಾಡಿ ಕಾಯಕವೇ ಕೈಲಾಸ ಎಂದು ಎಲ್ಲರನ್ನೂ ಸಮಾನವಾಗಿ ಕಾಣುವಂತೆ ಜಗತ್ತಿಗೆ ಸಾರಿದರು. ಆದರೆ ಇಂದೂ ಸಮಾಜದಲ್ಲಿ ಲಿಂಗಾಯತ ಮತ್ತು ವೀರಶೈವ ಎಂದು ಸಮಾಜವನ್ನು ಹೊಡೆದು ಹೊಡೆದು ಹಾಕುವ ಉನ್ನಾರು ನಡೆಯುತ್ತಿದೆ. ಇಂದು ಶಿಕ್ಷಣ ಕ್ಷೇತ್ರಕ್ಕೆ ಸಹ ಅದು ಅಂಟಿಕೊಂಡಿರುವುದು ಬೇಸರದ ಸಂಗತಿ. ಶಿವಕುಮಾರ ಸ್ವಾಮಿಗಳಿಗೆ ಭಾರತ ರತ್ನ ವಿಚಾರದಲ್ಲಿ ಮೀನಮೇಷ ಎಣಿಸುತ್ತಿರುವುದು ಸರಿಯಲ್ಲ. ಪಟ್ಟಣದ ಪ್ರಮುಖ ರಸ್ತೆಯಲ್ಲಿ ಬಸವಣ್ಣನವರ ಪುತ್ಥಳಿಯನ್ನು ನಿರ್ಮಿಸಲಾಗುವುದು ಬಸವೇಶ್ವರರ ಆದರ್ಶ ತತ್ವಸಿದ್ಧಾಂತಗಳನ್ನು ಇಂದಿನ ಯುವಕರು ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ಉನ್ನತ ಮಟ್ಟಕ್ಕೆ ಸಾಧ್ಯವೆಂದು ಹೇಳಿದರು,
ಈ ಸಂದರ್ಭದಲ್ಲಿ ಸಕಲೇಶಪುರದ ಮಾಜಿ ಶಾಸಕ ಬಿ,ಆರ್, ಗುರುದೇವ್, ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷ ಎಚ್, ಕೆ, ಸುರೇಶ್, ಶಿವಗಂಗಾ ಗ್ರಾನೈಟ್ ಮಾಲಿಕ ಹೆಚ್,ಎಸ್, ರಾಜಶೇಖರ್, ನಾಗೇಂದ್ರ ಪ್ರತಿಷ್ಠಾನ ಟ್ರಸ್ಟ್ ಮಾಲಿಕ ಸಿದ್ದೇಶ್ ನಾಗೇಂದ್ರ, ಕೊರಟಗೆರೆ ಪ್ರಕಾಶ್, ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಬಲ್ಲೆನಹಳ್ಳಿ ರವಿಕುಮಾರ್, ವೀರಶೈವ ಯುವ ಘಟಕದ ಅಧ್ಯಕ್ಷ ಚೇತನ್ ಕುಮಾರ್ ವೀರಶೈವ ಮುಖಂಡರಾದ ಚಂದ್ರಕಲಾ, ಮಹದೇವ್,ವಸಂತ್ ಪಟೇಲ್, ಆನಂದ್, ಇನ್ನೂ ಮುಂತಾದವರಿದ್ದರು