ಹಾಸನ : ಪಠ್ಯಪುಸ್ತಕ ಪರಿಷ್ಕರಣೆಯ ಗೊಂದಲದ ವಿಷಯ ಇದೀಗ ಸಂಪೂರ್ಣ ಮುಗಿದ ಅಧ್ಯಾಯ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ಸ್ಪಷ್ಟಪಡಿಸಿದರು .
ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪಠ್ಯ ಪರಿಷ್ಕರಣೆ ವಿಷಯವಾಗಿ ಅಂತಿಮ ನಿರ್ಣಯ ತೆಗೆದುಕೊಂಡಾಗಿದ್ದು , ಸಣ್ಣಪುಟ್ಟ ಆಕ್ಷೇಪಗಳನ್ನು ಸರಿಪಡಿಸುವ ವಿಚಾರವಾಗಿ ಈಗಾಗಲೇ ತೀರ್ಮಾನ ಕೈಗೊಳ್ಳಲಾಗಿದೆ . ಅಲ್ಲದೆ ಈಗಾಗಲೇ ಹೊಸ ಪಠ್ಯಪುಸ್ತಕ ವಿತರಣೆಯಾಗಿದೆ ಎಂದರು.
ಇದಾಗಲೇ ಗೊಂದಲಕ್ಕೀಡಾಗಿರುವ ವಿಷಯಗಳನ್ನು ಮರುಸೇರ್ಪಡೆ ಮಾಡುವ ವಿಚಾರವಾಗಿ ತೀರ್ಮಾನ ಕೈಗೊಳ್ಳಲಾಗಿದೆ. ಕಾಂಗ್ರೆಸ್ನವರು ಪಠ್ಯಪುಸ್ತಕ ವಿಚಾರವಾಗಿ ಆಕ್ಷೇಪ ಮಾಡುತ್ತಿರುವುದರ ಮೂಲ ಉದ್ದೇಶ ಹಿಂದೂ ಸಮಾಜವನ್ನು ಒಡೆಯುವ ಪ್ರತಿಕ್ರಿಯೆ ಅಷ್ಟೇ ...!! ಇದುವರೆಗೆ ಹಿಂದೂ ಸಮಾಜವನ್ನು ಒಡೆದು ಒಂದು ಸಮುದಾಯದ ಓಲೈಕೆ ಮಾಡಿಕೊಂಡಿರುವ ಪಕ್ಷ ಕಾಂಗ್ರೆಸ್ ಎಂದು ಟೀಕಿಸಿದರು .
ಭಾರತೀಯ ಸಂಸ್ಕೃತಿಯ ಬಗ್ಗೆ ಬೇಕಾದ ಪುಸ್ತಕಗಳು ಬಂದರೆ ಅದನ್ನು ವಿರೋಧಿಸುತ್ತಾರೆ. ಇಂದಿರಾಗಾಂಧಿ ಅವರು ಇದ್ದಾಗಲೂ ಇದೆ ಮುಂದುವರೆದಿದೆ ಎಂದು ಅವರು ಟಿಪ್ಪುಸುಲ್ತಾನ್ ಬಗ್ಗೆ ಕಡಿಮೆಯಾಗಿ ಮೈಸೂರು ಮಹಾರಾಜರ ಬಗ್ಗೆ ಜಾಸ್ತಿ ಆಯ್ತು ಅಂತ ಕಾಂಗ್ರೆಸ್ನವರು ಬೇಸರ ಉಂಟಾಗಿರಬೇಕು ಎಂದು ಟೀಕಿಸಿದರು.
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸಿದ್ದರಾಮಯ್ಯ ಅವರು ಒತ್ತಾಯಿಸಿರುವ ಕುರಿತು ಪ್ರತಿಕ್ರಿಯೆ ನೀಡಿದ ನಾಗೇಶ್ ಅವರು ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ಉನ್ನಿಕೃಷ್ಣನ್ ಪಾಠ ತೆಗೆದರು ಕುವೆಂಪು ಅವರ ಪಾಠ ಕಡಿಮೆ ಮಾಡಿದರು ಹಾಗೂ ಸಾಹಿತಿಗಳ ವಿಷಯಗಳನ್ನು ಮೊಟಕು ಗಳಿಸಿದರು, ಅರಮನೆ ,ದೇವರು ,ಮಠಗಳ ಬಗ್ಗೆ ಯಾಕೆ ಹೇಳಿಕೊಟ್ಟರು ಅಂತ ಸಿದ್ದರಾಮಯ್ಯ ಉತ್ತರ ಹೇಳಲಿ ಎಂದು ತಿರುಗೇಟು ನೀಡಿದರು .
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನೈಜ ಸಾಹಿತ್ಯದಲ್ಲಿ ಬಸವಣ್ಣ ,ಬುದ್ಧ , ಕೃಷ್ಣನ ಬಗ್ಗೆ ತೆಗೆದುಹಾಕಿ ಅಲ್ಲಾ, ಜೀಸಸ್ ಹೇಳಿ ಕೊಟ್ಟರಲ್ಲ ಯಾಕೆ...!? ಅಂತ ಅವರು ಹೇಳಲಿ ಎಂದು ಪ್ರಶ್ನಿಸಿದರು..? ಹಲವು ಸಾಹಿತಿಗಳು ಪಠ್ಯದಲ್ಲಿ ತಮ್ಮ ವಿಷಯವನ್ನು ತೆಗೆಯುವಂತೆ ಪತ್ರ ಬರೆದಿದ್ದರು ಆದರೆ ಪುಸ್ತಕದಲ್ಲಿ ಕೇವಲ ಇಬ್ಬರು ಸಾಹಿತಿಗಳ ವಿಷಯ ಮುದ್ರಿತವಾಗಿದೆ.ಸಾಹಿತಿಗಳು ಯಾಕೆ ನಮ್ಮ ವಿಷಯ ತೆಗೆಯಿರಿ ಎಂದು ಪತ್ರ ಬರೆದರು ಎಂಬುದು ಅವರಿಗೆ ತಿಳಿದಿರುವ ವಿಷಯ ಎಂದು ಪ್ರತಿಕ್ರಿಯಿಸಿದರು.
ಈ ವೇಳೆ ಶಾಸಕ ಪ್ರೀತಂ ಗೌಡ, ಮಾಜಿ ಶಾಸಕ ಎಚ್.ಎಮ್ .ವಿಶ್ವನಾಥ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಹುಲ್ಲಹಳ್ಳಿ ಸುರೇಶ್, ನವಿಲೇ ಅಣ್ಣಪ್ಪ ಇದ್ದರು.