ಹೊಳೆನರಸೀಪುರ :- ತಂದೆಯ ಸಾವಿನ ದುಃಖ ಅರಗಿಸಿಕೊಳ್ಳುವ ಮುನ್ನವೇ ಮಗಳು ಸಹ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ತಾಲ್ಲೂಕಿನ ಹಿರೇಬೆಳಗುಲಿ ಗ್ರಾಮದಲ್ಲಿ ನಡೆದಿದೆ .
ಮೈಸೂರು ಜಿಲ್ಲೆಯ ಕೆ ಆರ್ ನಗರದಲ್ಲಿ ವಾಸವಿದ್ದ ತಾಲ್ಲೂಕಿನ ಹಿರೇಬೆಳಗುಲಿ ಗ್ರಾಮದ ವ್ಯಕ್ತಿ ಕಳೆದ 11 ದಿನಗಳ ಹಿಂದೆ ಅನಾರೋಗ್ಯ ಕಾರಣದಿಂದ ಮೃತಪಟ್ಟಿದ್ದರು ಬುಧವಾರವಷ್ಟೇ (ಜೂನ್ 16 2022) ಕುಟುಂಬದವರು ಮೃತ ವ್ಯಕ್ತಿಯ ಸ್ವಗ್ರಾಮ ಹಿರೇಬೆಳಗುಲಿ ಗ್ರಾಮದಲ್ಲಿ ಆರಾಧನೆ ಕಾರ್ಯವನ್ನು ನಡೆಸಿ ಕೆ ಆರ್ ನಗರಕ್ಕೆ ವಾಪಸಾಗಿದ್ದರು.
ತನ್ನ ಪ್ರೀತಿಯ ತಂದೆಯನ್ನು ಕಳೆದುಕೊಂಡ ಮಗಳು ತುಂಬಾ ಚಿಂತಾಕ್ರಾಂತರಾಗಿದ್ದರು ಆದರೂ ಮನೆಯವರ ಸಾಂತ್ವನದಿಂದ ಮೇಲ್ನೋಟಕ್ಕೆ ಸಂತೋಷದಿಂದ ಇದ್ದರೂ ಸಹ ತನ್ನ ತಂದೆಯ ಕಾರ್ಯ ಮುಗಿಸಿ ಬುಧವಾರ ಸಂಜೆ ಮನೆಗೆ ವಾಪಸಾದ ತಕ್ಷಣವೇ ಅನಾರೋಗ್ಯಕ್ಕೀಡಾಗಿದ್ದಾರೆ (ಹೃದಯಾಘಾತ ) ಅನಾರೋಗ್ಯಕ್ಕೀಡಾದ ಅವರನ್ನು ಕುಟುಂಬದವರು ತಕ್ಷಣವೇ ಕೆ ಆರ್ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ದಾಖಲಿಸಿದಾದರೂ ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಮೃತಪಟ್ಟಿದ್ದಾರೆ.
ಕೆಲವೇ ದಿನಗಳ ಅಂತರದಲ್ಲಿ ತಂದೆ ಹಾಗೂ ಮಗಳನ್ನು ಕಳೆದುಕೊಂಡ ತಾಯಿ ಹಾಗೂ ಮೃತ ಯುವತಿಯ ಅಣ್ಣ ಹಾಗೂ ಕುಟುಂಬ ವರ್ಗದವರ ರೋಧನ ಮುಗಿಲು ಮುಟ್ಟಿದ್ದು .ತಾಲ್ಲೂಕಿನ ಹಿರೇಬೆಳಗುಲಿ ಗ್ರಾಮದ ಅವರ ತಂದೆಯ ಜಮೀನಿನಲ್ಲಿ ಮೃತ ಯುವತಿಯ ಅಂತ್ಯಸಂಸ್ಕಾರವನ್ನು ನೆರವೇರಿಸಲಾಗಿದ್ದು .
ಮೃತ ಯುವತಿಯನ್ನು ನೋಡಲು ಬಂದರು ನೂರಾರು ಜನರು ಕೆಲವೇ ದಿನಗಳ ಅಂತರದಲ್ಲಿ ತಂದೆ ತಾಯಿಯನ್ನು ಬಲಿ ಪಡೆದ ವಿಧಿಯಾಟಕ್ಕೆ ಹಿಡಿಶಾಪ ಹಾಕುತ್ತಿದ್ದರು .