ಶಿವಮೊಗ್ಗ: ಕೊರೊನಾ ಎರಡನೇ ಅಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾದ ಹಿನ್ನೆಲೆ ಮೈಸೂರು-ತಾಳಗುಪ್ಪ ಪ್ಯಾಸೆಂಜರ್ ರೈಲು ಸಂಚಾರ ಸ್ಥಗಿತಗೊಂಡಿತ್ತು. ಇದೀಗ ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದ ಹಿನ್ನೆಲೆ ರೈಲು ಸಂಚಾರ ಮತ್ತೆ ಆರಂಭವಾಗಲಿದೆ. ಜು.25ರಿಂದ 16222 ಸಂಖ್ಯೆಯ ಪ್ಯಾಸೆಂಜರ್ ರೈಲು ಸಂಚಾರ ಆರಂಭವಾಗಲಿದ್ದು, ಮಧ್ಯಾಹ್ನ 2 ಗಂಟೆಗೆ ಮೈಸೂರಿನಿಂದ ಹೊರಟು, ರಾತ್ರಿ 11.30ಕ್ಕೆ ತಾಳಗುಪ್ಪ ತಲುಪುತ್ತದೆ. ಮಾರನೇ ದಿನ ಬೆಳಗ್ಗೆ 6.10ಕ್ಕೆ ತಾಳಗುಪ್ಪದಿಂದ ಹೊರಡುವ ರೈಲು, ಮಧ್ಯಾಹ್ನ 3.35 ಕ್ಕೆ ಮೈಸೂರು ತಲುಪುತ್ತದೆ. ರೈಲಿನಲ್ಲಿ 12 ಬೋಗಿಗಳು ಇರಲಿವೆ. ಇದರಲ್ಲಿ 10 ಸೆಕೆಂಡ್ ಕ್ಲಾಸ್ ಬೋಗಿಗಳು ಹಾಗೂ 2 ಲಗೇಜ್ ಕಮ್ ಬ್ರೇಕ್ ವ್ಯಾನ್ ಬೋಗಿಗಳು ಇರಲಿವೆ.
ಮುಂದಿನ ಆದೇಶದವರೆಗೆ ಇದೇ ವೇಳಾಪಟ್ಟಿಯಲ್ಲಿ ರೈಲುಗಳು ಸಂಚರಿಸಲಿವೆ. ಈ ಮೂಲಕ ರೈಲ್ವೆ ಇಲಾಖೆ ಶಿವಮೊಗ್ಗಕ್ಕೆ ಮತ್ತೊಂದು ರೈಲಿನ ಕೊಡುಗೆ ನೀಡಿದೆ.
ರೈಲು ಸಂಚರಿಸುವ ಸ್ಥಳ ಮತ್ತು ಸಮಯ:
ಮೈಸೂರು: ಮಧ್ಯಾಹ್ನ 2 ಗಂಟೆಗೆ ನಿರ್ಗಮನ. ಹಾಸನ ಸಂಜೆ 4.28, ಅರಸೀಕೆರೆ ಸಂಜೆ 6 ಗಂಟೆ, ಬೀರೂರು 7 ಗಂಟೆ, ತರೀಕೆರೆ 7.39, ಭದ್ರಾವತಿ 8.03, ಶಿವಮೊಗ್ಗ 8.45, ಆನಂದಪುರ 10.14, ಸಾಗರ- 10.44, ತಾಳಗುಪ್ಪ- 11.30.
16221 ಸಂಖ್ಯೆಯ ರೈಲು: ತಾಳಗುಪ್ಪ ಬೆಳಿಗ್ಗೆ 6.10, ಸಾಗರ 6.34, ಆನಂದಪುರ- 7.06, ಶಿವಮೊಗ್ಗ 8.15, ಭದ್ರಾವತಿ 8.43, ತರೀಕೆರೆ 9.13, ಬೀರೂರು 10.03, ಕಡೂರು 10.15, ಅರಸೀಕೆರೆ- 11.15, ಹಾಸನ 12.28, ಮೈಸೂರು 3.35 ಕ್ಕೆ ತಲುಪಲಿದೆ.
Tags
ರಾಜ್ಯ