ಪೊಲೀಸ್ ತನಿಖೆ ಚುರುಕು: ವಿಶೇಷ ತಂಡ ರಚನೆ : ಮಹಿಳೆ ಭೀಕರ ಕೊಲೆ ಪ್ರಕರಣ

ಬೇಲೂರು: ಎರಡು ಮಕ್ಕಳ ತಾಯಿಯನ್ನು ಬರ್ಬರವಾಗಿ ಕೊಂದ ಪ್ರಕರಣ ಸಂಬAಧ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. 
ಪಟ್ಟಣದ ಪಂಪ್‌ಹೌಸ್ ರಸ್ತೆಯ ಬಾಡಿಗೆ ಮನೆಯಲ್ಲಿ ಅಶ್ವಿನಿ (36) ಎಂಬ ಮಹಿಳೆಯನ್ನು ಚಾಕುವಿನಿಂದ ಮನ ಬಂದAತೆ ಇರಿದು ಕೊಲೆ ಮಾಡಲಾಗಿತ್ತು. ಘಟನೆ ನಂತರ ಪತಿ ಜಗದೀಶ್ ತಲೆ ಮರೆಸಿಕೊಂಡಿದ್ದು, ಆತನ ಸೆರೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಇದಕ್ಕಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ವಿಶೇಷ ತನಿಖಾ ತಂಡ ರಚನೆ ಮಾಡಿದ್ದಾರೆ.
ಈ ನಡುವೆ ಜಗದೀಶನ ಪೋಷಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತದೇಹವನ್ನು ಇಂದು ವಾರಸುದಾರರಿಗೆ ಒಪ್ಪಿಸಲಾಯಿತು. ಪತಿ ಜಗದೀಶನ ಜಮೀನಿನಲ್ಲೇ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಇದಕ್ಕಾಗಿ ಸ್ಥಳೀಯರು ಸಾರ್ವಜನಿಕರಿಂದ ಹಣ ಸಂಗ್ರಹಿಸಿ ನೀಡಿದರು. ಮೂಲತಃ ಅರಸೀಕೆರೆ ತಾಲೂಕು ಅರಸೀಕೆರೆ ಮೂಲದವರಾಗಿರುವ ಅಶ್ವಿನಿ ಮನೆಯವರು ಕಡು ಬಡವರು ಎನ್ನಲಾಗಿದೆ. 
ರಕ್ಕಸ ವರ್ತನೆ:
ಪತ್ನಿಯ ಜೀವ ತೆಗೆಯಲು ಜಗದೀಶ ರಕ್ಕಸ ವರ್ತನೆ ತೋರಿರುವುದು ಬಯಲಾಗಿದೆ. ಈಕೆ ಯಾವುದೇ ಕಾರಣಕ್ಕೂ ಬದುಕಬಾರದು ಎಂದು ಮೊದಲು ಹೊಟ್ಟೆ ಭಾಗ ಮತ್ತು ಬೆನ್ನಿಗೆ ಮನಬಂದAತೆ ಚಾಕುವಿನಿಂದ ಇರಿದಿರುವ ಪಾಪಿ, ನಂತರ ಕುತ್ತಿಗೆ ಸೀಳಿ ಕೊಲೆ ಮಾಡಿದ್ದಾನೆ ಎಂಬುದು ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಗಿದೆ.
 
ಜೀವನಾಂಶ ಹಣವೇ ಮುಳುವಾಯ್ತಾ?
ಅನ್ಯ ಕೋಮಿನ ಅಶ್ವಿನಿ ಮತ್ತು ಜಗದೀಶ್ 17 ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. 15 ವರ್ಷದ ಮಗಳು, 12 ವರ್ಷದ ಮಗ ಇದ್ದರೂ, ಕ್ರಮೇಣದಲ್ಲಿ ಸಂಸಾರದಲ್ಲಿ ಹೊಂದಾಣಿಕೆ ಇರಲಿಲ್ಲ. ಮೆಡಿಕಲ್ ಶಾಪ್ ಇಟ್ಟುಕೊಂಡಿದ್ದ ಜಗದೀಶ, ಅದು ಲಾಸ್ ಆದ ನಂತರ ಟೀ ಅಂಗಡಿ ಇಟ್ಟುಕೊಂಡಿದ್ದ. ಈತನೊಂದಿಗೆ ಬಾಳುವುದು ಕಷ್ಟ ಎಂದು ತಿಳಿದು ಅಶ್ವಿನಿ ಬದಲಿ ಮನೆಯನ್ನು ಬಾಡಿಗೆ ಪಡೆದು ವಾಸವಾಗಿದ್ದಳು. ಈ ನಡುವೆ ಗಂಡನ ವಿರುದ್ಧ ಸ್ಥಳೀಯ ನ್ಯಾಯಾಲಯದ ಮೆಟ್ಟಿಲೇರಿ, ನನ್ನ ಮತ್ತು ಮಕ್ಕಳ ಜೀವನ ನಿರ್ವಹಣೆಗೆ ಜೀವನಾಂಶ ಕೊಡಿಸುವಂತೆ ಮನವಿ ಮಾಡಿದ್ದಳು. ಇದನ್ನು ಪುರಸ್ಕರಿಸಿದ್ದ ಕೋರ್ಟ್ ತಿಂಗಳಿಗೆ 15 ಸಾವಿರ ಜೀವನಾಂಶ ನೀಡುವಂತೆ ಆದೇಶಿಸಿತ್ತು. ಆದರೆ ಮೊದಲೇ ಪಾಪರ್ ಆಗಿದ್ದ ಜಗದೀಶನಿಗೆ ಪತ್ನಿಗೆ ಜೀವನಾಂಶ ಕೊಡುವುದು ಕಷ್ಟವಾಗಿತ್ತು. 
ಹೀಗಾಗಿ ನಿನ್ನೊಂದಿಗೇ ಇರುತ್ತೇನೆ. ಹಿಂದಿನದೆಲ್ಲವನ್ನು ಮರೆತು ಒಟ್ಟಾಗಿ ಬಾಳೋಣ ಎಂದು ನಾಟಕ ಆಡಿದ್ದ. ಗಂಡ ಬದಲಾಗಿರಬಹುದು ಎಂದು ಅಶ್ವಿನಿ ನಂಬಿದ್ದಳು. ಈ ನಡುವೆ ಜು.15 ರಂದು ಕೋರ್ಟ್ಗೆ ಹಾಜರಾಗಿ ನಾವಿಬ್ಬರೂ ಒಟ್ಟಿಗೇ ಇರುತ್ತೇವೆ. ಇದಕ್ಕಾಗಿ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದ್ದ.ಆದರೆ ಪತ್ನಿಯನ್ನೂ ಕರೆತರಬೇಕು ಎಂದು ನ್ಯಾಯಾಧೀಶರು ಸೂಚಿಸಿದ್ದರು. 
ಆದರೆ ಆಕೆಗೆ ರಜೆ ಇಲ್ಲ ಎಂದು ಸಬೂಬು ಹೇಳಿ ಬಂದಿದ್ದ ದುರುಳ, ಕೇಸ್ ವಾಪಸ್ ಪಡೆದು ನನ್ನೊಂದಿಗೆ ಇರಲಿ ಅಶ್ವಿನಿ ತಕರಾರು ತೆಗೆಯುತ್ತಾಳೆ ಎಂದು ಭ್ರಮಿಸಿ, ಆಕೆಯನ್ನೇ ಕೊಂದು ಮುಗಿಸಿದ್ದಾನೆ. ಇದೀಗ ಆತನ ಬಂಧನಕ್ಕೆ ಬಲೆ ಬೀಸಿರುವ ಪೊಲೀಸರು, ಶೋಧಕಾರ್ಯ ಮುಂದುವರಿಸಿದ್ದಾರೆ. ಆತ ಸಿಕ್ಕ ನಂತರ ಕೊಲೆಗೆ ನಿಜ ಕಾರಣ ಏನು ಎಂಬುದು ತಿಳಿಯಲಿದೆ.

Post a Comment

Previous Post Next Post