ಇಡಿ ಮೂಲಕ ಸೋನಿಯಾಗಾಂಧಿ ವಿಚಾರಣೆ ಖಂಡಿಸಿ ರಸ್ತೆಲೆ ಕಾಂಗ್ರೆಸ್ ಪ್ರತಿಭಟನೆ


ಮುಖ್ಯ ಅಂಚೆ ಕಛೇರಿಗೆ ಮುತ್ತಿಗೆ ಹಾಕಲು ಹೋಗಿ ಪೊಲೀಸರಿಂದ ಬಂಧನದ ಬಿಸಿ
ಹಾಸನ: ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ಅವರನ್ನು ಇಡಿ ಮೂಲಕ ವಿಚಾರಣೆಗೆ ಒಳಪಡಿಸಿರುವುದನ್ನು ಖಂಡಿಸಿ ಹಾಸನದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ರಸ್ತೆ ಮಧ್ಯೆಯೇ ಪ್ರತಿಭಟಿಸಿ ಮುಖ್ಯ ಅಂಚೆ ಕಛೇರಿಗೆ ಮುತ್ತಿಗೆ ಹಾಕುವಾಗ ಪಕ್ಷದ ಎಲ್ಲಾ ಮುಖಂಡರು ಹಾಗೂ ಕಾರ್ಯಕರ್ತರನ್ನು ಬಂಧಿಸಿಸ ಪೊಲೀಸರು ಪೊಲೀಸ್ ಇಲಾಖೆಯ ಒಂದು ಬಸ್ ಮತ್ತು ಎರಡು ಟೆಂಪೊ ಮೂಲಕ ಮೂರು ವಾಹನದಲ್ಲಿ ನೂರಾರು ಜನರನ್ನು ಕರೆದೊಯ್ಯಲಾಯಿತು.
 ನಗರದ ಬಿ.ಎಂ. ರಸ್ತೆಯಲ್ಲಿರುವ ಕಾಂಗ್ರೆಸ್ ಜಿಲ್ಲಾ ಕಛೇರಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಎನ್.ಆರ್. ವೃತ್ತದ ಮೂಲಕ ನಗರ ಬಸ್ ನಿಲ್ದಾಣ ಬಳಿ ಇರುವ ಪ್ರಧಾನ ಅಂಚೆ ಕಛೇರಿ ಮುಂದೆ ರಸ್ತೆ ಮಧ್ಯೆ ಜಮಾಯಿಸಿ ಬಹಿರಂಗ ಪ್ರತಿಭಟನಾ ಭಾಷಣ ಮೂಲಕ ಬಿಜೆಪಿ ನಡೆಯನ್ನು ಇದೆ ವೇಳೆ ಖಂಡಿಸಿದರು. ಕಾಂಗ್ರೆಸ್ ಪಕ್ಷದ ಮಾಜಿ ಸಚಿವ ಶಿವಶಂಕರ್ ರೆಡ್ಡಿ ಉದ್ದೇಶಿಸಿ ಮಾತನಾಡುತ್ತಾ, ಸ್ವಾತಂತ್ರ ಸಿಕ್ಕಿ ಈಗ ಅಮೃತ ಮಹೋತ್ಸವ ಮಾಡಲಾಗುತ್ತಿದ್ದು, ಈ ದೇಶಕ್ಕೆ ಸ್ವಾತಂತ್ರ ತಂದುಕೊಟ್ಟವರು ಯಾರು ಎಂದು ಅವಲೋಕನ ಮಾಡಿದಾಗ ಕಾಂಗ್ರೆಸ್ ನ ಹೋರಾಟ ಕೂಡ ಸೇರಿದೆ. ನೆಹರು ಅವರು ಮೊದಲ ಪ್ರಧಾನಿ ಆದ ಮೇಲೆ ಅನೇಕ ಸುಧಾರಣೆ ಕೆಲಸ ಮಾಡಿದ್ದಾರೆ. ಪ್ರಸ್ತುತದಲ್ಲಿ ಕಾಂಗ್ರೆಸ್ ಪಕ್ಷವನ್ನು ಹತ್ತಿಕ್ಕುವ ಕೆಲಸವನ್ನು ದೇಶದ ಪ್ರಧಾನಿ ಮಾಡುತ್ತಿದ್ದಾರೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಸೋನಿಯಾ ಗಾಂಧಿ ವಿಚಾರಣೆ ನಡೆಸುತ್ತಿದ್ದು, ಗುರುವಾರ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿಚಾರಣೆಯನ್ನು ಆರಂಭಿಸಲಾಗಿದೆ ಎಂದರು. ಬಿಜೆಪಿ ದುರುದ್ದೇಶದ ರಾಜಕಾರಣ ಮಾಡುತ್ತಿದೆ. ಅಧಿಕಾರ ಹಾಗೂ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡುತ್ತಿದೆ ಎಂದು ಆರೋಪಿಸಿ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದರು. ದೇಶದ ಎಲ್ಲೆಡೆ ಸೋನಿಯಾ ಬೆಂಬಲಿಸಿ ಕಾಂಗ್ರೆಸ್ ಕಾರ್ಯಕರ್ತರು, ಬೆಂಬಲಿಗರು ನಾಮಫಲಕ ಹಿಡಿದು ಬೀದಿಗಿಳಿದಿದ್ದಾರೆ. ಇಡಿ ವಿಚಾರಣೆ, ಹಗರಣದಲ್ಲಿ ಕೇಂದ್ರ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿದರು. ಕೂಡಲೇ ಸೋನಿಯಾಗಾಂಧಿ ವಿಚಾರಣೆ ನಿಲ್ಲಿಸದಿದ್ದರೇ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಇದೆ ವೇಳೆ ಎಚ್ಚರಿಸಿದರು.
 ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಪಕ್ಷದ ಮುಖಂಡರಾದ ಹೆಚ್.ಕೆ. ಜವರೇಗೌಡ, ಹೆಚ್.ಪಿ. ಮೋಹನ್, ಹೆಚ್.ಕೆ. ಮಹೇಶ್, ದೇವರಾಜೇಗೌಡ, ಬನವಾಸೆ ರಂಗಸ್ವಾಮಿ, ಬಾಗೂರು ಮಂಜೇಗೌಡ, ರಂಗಸ್ವಾಮಿ, ತಾರಾಚಂದನ್, ಶಿವಪ್ಪ, ಲಕ್ಷö್ಮಣ್, ಗೊರೂರು ರಂಜಿತ್, ವಿನಯ್ ಗಾಂಧಿ, ಶೇಷೇಗೌಡ, ರಾಘವೇಂದ್ರ, ಕೆಲವತ್ತಿ ಸೋಮಶೇಖರ್ ಇತರರು ಸೇರಿದಂತೆ ನೂರಾರು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಕರೆದೊಯ್ಯಲಾಯಿತು.

Post a Comment

Previous Post Next Post