ಬಿಜೆಪಿಯಿಂದ ದೇಶದ ಗಡಿ-ಬೊಕ್ಕಸ ಸುರಕ್ಷಿತಮತ್ತೆ ಮೋದಿಗೇ ಅಧಿಕಾರ: ಕರ್ನಾಟಕದಲ್ಲೂ ನಮಗೇ ಆಡಳಿತ: ಗುರ್ಜರ್ ವಿಶ್ವಾಸ

ಹಾಸನ: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಚುಕ್ಕಾಣಿ ಹಿಡಿದ ಮೇಲೆ ಗಡಿ, ಬೊಕ್ಕಸ ಸುರಕ್ಷಿತವಾಗಿದೆ ಎಂದು ಕೇಂದ್ರ ವಿದ್ಯುತ್ ಮತ್ತು ಭಾರೀ ಕೈಗಾರಿಕೆಗಳ ರಾಜ್ಯ ಸಚಿವ ಕ್ರಿಷನ್ ಪಾಲ್ ಗುರ್ಜರ್ ಹೇಳಿದರು.
ಇಂದು ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಜನರಲ್ಲಿದ್ದ ಅವಿಶ್ವಾಸ, ನಿರಾಸೆಯನ್ನು ಮೋದಿ ಹೋಗಲಾಡಿಸಿ ಭರವಸೆ ತುಂಬಿದ್ದಾರೆ. ಮೋದಿ ಆಗಮನದಿಂದ ದೇಶದಲ್ಲಿ ಜಾತಿ, ಕುಟುಂಬದ ಆಧಾರದಲ್ಲಿ ಸರ್ಕಾರಗಳು ರಚನೆಯಾಗುವುದಿಲ್ಲ ಎನ್ನುವುದು ಎಲ್ಲಡೆ ವಿಧಿತವಾಗಿದೆ ಎಂದರು.
ಜನರಿಗೆ ಕೌಟುಂಬಿಕ ಸರ್ಕಾರಗಳ ಬಗ್ಗೆ ಅಸಡ್ಡೆ ಮೂಡಿದ್ದು, ಕೆಲಸ ಮಾಡುವ ಸರ್ಕಾರ ಬೇಕು ಎಂದು ಬಿಜೆಪಿಗೆ ಮತ ನೀಡುತ್ತಿದ್ದಾರೆ. ಇದಕ್ಕೆ ಮೋದಿ ಅವರ ದಕ್ಷ ಹಾಗೂ ಭ್ರಷ್ಟಾಚಾರಮುಕ್ತ ಆಡಳಿತ ಕಾರಣ ಎಂದು ಹೇಳಿದರು.
ಹೀಗಾಗಿ ಮತ್ತೊಮ್ಮೆ ಮೋದಿ ಪಿಎಂ ಆಗಲಿದ್ದಾರೆ. ಅವರಿಗೆ ಎದುರಾಳಿಯಾಗಿ ಯಾರೂ ಇಲ್ಲ ಎನ್ನುವ ವಾತಾವರಣ ಸೃಷ್ಟಿಯಾಗಿದ್ದು, ದೇಶದಲ್ಲಿ ಮೋದಿ ಯುಗ ನಡೆಯುತ್ತಿದೆ ಎಂದು ಕೊಂಡಾಡಿದರು.
ಈ ಮೊದಲು ಯುದ್ಧೋಪಕರಣಗಳು ಕೇವಲ ಒಂದು ವಾರಕ್ಕೆ ಸಾಕಾಗುತ್ತಿರಲಿಲ್ಲ. ಈಗ ತಿಂಗಳುಗಳವರೆಗೆ ಯುದ್ಧ ಮಾಡುವಷ್ಟು ಶಸ್ತಾçಸ್ತç ಹೊಂದಿದ್ದೇವೆ. ದೇಶ ದಕ್ಷ ಹಾಗೂ ಪ್ರಾಮಾಣಿಕ ವ್ಯಕ್ತಿಯ ಕೈಯ್ಯಲ್ಲಿದೆ ಜನರಿಗೂ ತಿಳಿದಿದೆ ಎಂದರು.
ದೇಶದ ಸಂಪತ್ತಿನ ಮೇಲಿನ ಹಕ್ಕು ಕಟ್ಟಕಡೆಯ ವ್ಯಕ್ತಿಗೂ ಸೇರಬೇಕು ಎಂದು ಜನಧನ್ ಯೋಜನೆ ಆರಂಭಿಸಲಾಯಿತು. ಇದರಿಂದ ಬಡ ಜನರಿಗೆ ಅನುಕೂಲವಾಗಿದೆ. ಉತ್ತಮ ಸರ್ಕಾರ ಅಧಿಕಾರಕ್ಕೆ ಬಂದರೆ ಇದೆಲ್ಲ ಸಾಧ್ಯ ಎಂದು ನುಡಿದರು.
ಹಾಸನ ಜಿಲ್ಲೆಯಲ್ಲೂ 6 ಲಕ್ಷ ಕಿಸಾನ್ ಕಾರ್ಡ್ ಸಿದ್ಧಗೊಂಡಿವೆ. ಒಂದೂವರೆ ಲಕ್ಷ ಜನರು ಕಿಸಾನ್ ಸಮ್ಮಾನ್ ಲಾಭ ಪಡೆಯುತ್ತಿದ್ದಾರೆ. ಮೂರು ದಿನದ ಪ್ರವಾಸ ಉತ್ತಮವಾಗಿ ನಡೆದಿದೆ ಎಂದ ಅವರು, ಕೇಂದ್ರದ ಯೋಜನೆಗಳ ವೇಗ ಹೆಚ್ಚಿಸಲು ಸೂಚಿಸಲಾಗಿದೆ ಎಂದರು.
ಜಿಲ್ಲೆಯ ಪ್ರಮುಖ ಸಮಸ್ಯೆಗಳನ್ನು ಪರಿಶೀಲಿಸಿದ್ದೇನೆ. ಅಹಾರ ಸಂಸ್ಕರಣ ಘಟಕ ತೆರೆದರೆ ಉದ್ಯೋಗ ದೊರೆಯುತ್ತದೆ. ರೈತರಿಗೂ ಅನುಕೂಲವಾಗುತ್ತದೆ. ಏರ್ ಪೋರ್ಟ್ ನಿರ್ಮಾಣ ಆಗುತ್ತಿರುವುದರಿಂದ ಬಂಡವಾಳ ಬರಲಿದೆ. ಹಾಸನ ಉತ್ತಮ ಸಂಪರ್ಕ ಹೊಂದಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಪ್ಪಿತಸ್ಥರನ್ನು ರಕ್ಷಿಸುವುದಿಲ್ಲ:
ದೇಶ ಭ್ರಷ್ಟಾಚಾರ ಮುಕ್ತವಾಗಿ ಎಂದು ನಾವು ಹೇಳಿಲ್ಲ. ಹಿಂದೆ ಭ್ರಷ್ಟಾಚಾರ ಮುಚ್ಚಿ ಹಾಕಲಾಗುತ್ತಿತ್ತು. ಈಗ ಯಾವುದೇ ಕಾರಣಕ್ಕೂ ತಪ್ಪಿತಸ್ಥರನ್ನು ರಕ್ಷಿಸುವುದಿಲ್ಲ ಬಿಜೆಪಿ. ದೇಶ ಸಂವಿಧಾನ, ಕಾನೂನಿನ ಮೂಲಕ ನಡೆಯುತ್ತದೆ. ಯಾರೇ ತಪ್ಪು ಮಾಡಿದರೂ ನಾವು ಕ್ರಮಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು.
ವಿಶ್ವಾದ್ಯಂತ ಹಣದುಬ್ಬರ ಹೆಚ್ಚಿದೆ. ಹೀಗಾಗಿ ಬೆಲೆ ಏರಿಕೆಯಾಗುತ್ತಿದೆ. ನಮ್ಮ ಸರ್ಕಾರ ಸುಂಕ ಇಳಿಕೆ ಮೂಲಕ ತೈಲ ಬೆಲೆ ನಿಯಂತ್ರಿಸಿದೆ ಎಂದರು.
ಬಿಜೆಪಿಗೆ ಉತ್ತಮ ವಾತಾವರಣ:
ಕರ್ನಾಟಕದಲ್ಲಿ ಬಿಜೆಪಿ ಬಗ್ಗೆ ಉತ್ತಮ ಭಾವನೆ ಇದೆ. ಕಾಂಗ್ರೆಸ್-ಜೆಡಿಎಸ್‌ನಲ್ಲಿ ಮೋದಿಯಂತಹ ನಾಯಕತ್ವ ಇಲ್ಲ. ಹೀಗಾಗಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ. ಜನರೂ ಬಿಜೆಪಿ ಅಗತ್ಯತೆ ಮನಗಂಡಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 
ದೇವೇಗೌಡರ ಸಕ್ರಿಯ ರಾಜಕೀಯಕ್ಕೆ ಅವರ ಆರೋಗ್ಯ ಸ್ಪಂದಿಸುತ್ತಿಲ್ಲ. ಹರಿಯಾಣದಲ್ಲಿ ದೇವಿಲಾಲ್ ಕುಟುಂಬದ ರೀತಿಯಲ್ಲೇ ಇಲ್ಲಿ ದೇವೇಗೌಡರ ಕುಟುಂಬದ ಕಾರ್ಯವೈಖರಿಯಿಂದ ಜನರು ಬೇಸತ್ತಿದ್ದಾರೆ. ಜೆಡಿಎಸ್ ರಾಜಕೀಯ ಬಲ ಕುಸಿದಿದೆ. ಕಾಂಗ್ರೆಸ್ ದೇಶದ 2 ರಾಜ್ಯಗಳಲ್ಲಿ ಮಾತ್ರ ಅಧಿಕಾರಲ್ಲಿದೆ. ಮುಂದೆ ಅವೂ ಕೈತಪ್ಪಲಿವೆ ಎಂದು ಭವಿಷ್ಯ ನುಡಿದರು. ಸುದ್ದಿಗೋಷ್ಟಿಯಲ್ಲಿ ಮಾಜಿ ಸಚಿವ ವಿಜಯ್‌ಶಂಕರ್, ಶಾಸಕ ಪ್ರೀತಂಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಹೆಚ್.ಕೆ.ಸುರೇಶ್, ರಾಜ್ಯ ಬ್ರಾಹ್ಮಣ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ, ನಗರಸಭೆ ಅಧ್ಯಕ್ಷ ಆರ್.ಮೋಹನ್ ಇದ್ದರು.
ಹೇಳಿಕೆ:
ಹಾಸನದಲ್ಲೂ ಬಿಜೆಪಿಗೆ ಉತ್ತಮ ವಾತಾವರಣ ಇದೆ.ಮೋದಿ ಅವರಿಂದಾಗಿ ಹಾಸನಕ್ಕೆ ಹೈವೆ, ಏರ್ ಪೋರ್ಟ್ ಬಂದಿವೆ.ರಾಷ್ಟಿçÃಯ ಹೆದ್ದಾರಿ 75ರ ಕಾಮಗಾರಿ ಡಿಸೆಂಬರ್ ಒಳಗೆ ಮುಗಿಯಲಿದೆ. ಕಾಡಾನೆ ಸಮಸ್ಯೆ ಹಲವು ವರ್ಷಗಳಿಂದ ಇದೆ. ಜನರ ಸಾವು-ನೋವು ಮುಂದುವರಿದಿದೆ. ಸಣ್ಣ ಕಾಫಿ ಬೆಳೆಗಾರರು ಸಮಸ್ಯೆ ಅನುಭವಿಸುತ್ತಿದ್ದಾರೆ. ಆನೆಗಳನ್ನು ಸ್ಥಳಾಂತರಿಸಿ ರೈಲ್ವೆ ತಡೆಗೋಡೆ ನಿರ್ಮಿಸಬೇಕಿದೆ. ಈ ಸಂಬAಧ ರೈಲ್ವೆ ಇಲಾಖೆ ಜತೆ ಚರ್ಚಿಸುವೆ. 
-ಕ್ರಿಷನ್ ಪಾಲ್ ಗುರ್ಜರ್, ಕೇಂದ್ರ ಸಚಿವ

Post a Comment

Previous Post Next Post