ಹೇಮಾವತಿ ಬಲದಂಡೆ ನಾಲೆ ಕಳಪೆ ಕಾಮಗಾರಿಗೆ ಶಾಸಕ ಎ.ಟಿ.ರಾಮಸ್ವಾಮಿಯವರೇ ಕಾರಣ : ನರಸೇಗೌಡ

  ಅರಕಲಗೂಡು:- ತಾಲ್ಲೂಕಿನಲ್ಲಿ ನಡೆಯುತ್ತಿರುವ ಹೇಮಾವತಿ ಬಲ‌ದಂಡೆ ನಾಲೆ  ಕಳಪೆ ಕಾಮಗಾರಿಯಾಗಲು ಕ್ಷೇತ್ರದ ಶಾಸಕರಾದ  ಎ.ಟಿ.ರಾಮಸ್ವಾಮಿಯವರ ನಿರ್ಲಕ್ಷ್ಯವೇ ಕಾರಣ. ಎಂದು ಮಾಜಿ.ತಾ.ಪಂ.ಅಧ್ಯಕ್ಷ ನರಸೇಗೌಡ ಗಂಭೀರ ಆರೋಪ ಮಾಡಿದ್ದಾರೆ 
ಅರಕಲಗೂಡು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ನರಸೇಗೌಡ ,ಇಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು ಲಕ್ಷಾಂತರ ಹಣ ಖರ್ಚು ಮಾಡಿ ಹೇಮಾವತಿ ಬಲದಂಡೆ ನಾಲೆ ಅಭಿವೃದ್ಧಿ ಮಾಡಲಾಗಿದೆ. ಆದರೆ ಅವೈಜ್ಞಾನಿಕವಾಗಿ ಕಳಪೆ ಕಾಮಗಾರಿ ಮಾಡುವ ಮೂಲಕ  ಸಾರ್ವಜನಿಕರ ತೆರಿಗೆ ಹಣ ವ್ಯರ್ಥವಾಗಿದೆ. ಕಾಮಗಾರಿ ನಡೆಯುವ ಸಂದರ್ಭದಲ್ಲಿ ಕ್ಷೇತ್ರದ ಶಾಸಕರಾದ ಎ ಟಿ ರಾಮಸ್ವಾಮಿಯವರು ಕೇವಲ  ನೆಪ ಮಾತ್ರಕ್ಕೆ  ಕಾಮಗಾರಿ ವೀಕ್ಷಣೆ ಮಾಡಿದರು. ಆದರೆ ಕಾಮಗಾರಿ  ನಡೆಯುವ ವೇಳೆಯಲ್ಲಿ ಶಾಸಕರಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಲಿಲ್ಲ ಎಂದು ಆರೋಪ ಮಾಡಿದರು.
 ತಾಲ್ಲೂಕಿನ ಕಸಬಾ ಹೋಬಳಿಯ ವಡ್ಡರಹಳ್ಳಿಯಿಂದ ಭೈರಾಪುರ, ನೇರಲಹಳ್ಳಿ ಮತ್ತು ಇತರೆ ಗ್ರಾಮಗಳು ಹಾಗೂ ವಡ್ಡರಹಳ್ಳಿ ಗ್ರಾಮದವರ ತೋಟ ಮತ್ತು ಹೊಲ ಗದ್ದೆಗಳಿಗೆ  ಸಂಪರ್ಕ ಕಲ್ಪಿಸುವ ಗೊರೂರು ಬಲದಂಡೆ ನಾಲೆ ಏರಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ತಡೆಗೋಡೆಯೂ ಇಲ್ಲದೇ ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಹಾಗೂ ಬಲದಂಡೆ ನಾಲೆಯಲ್ಲಿ ಉತ್ತಮವಾಗಿದ್ದ ಸೋಪಾನ ಕಟ್ಟೆ ಕಲ್ಲುಗಳನ್ನು ಕಿತ್ತು ಕಳಪೆ ರೀತಿಯಲ್ಲಿ ಅವೈಜ್ಞಾನಿಕವಾಗಿ ಸೋಪಾನ ಕಟ್ಟೆ ನಿರ್ಮಾಣ ಮಾಡಿದ್ದಾರೆ. ಗ್ರಾಮಸ್ಥರು ಬಟ್ಟೆ ಒಗೆಯಲು ತುಂಬಾ ತೋದರೆ ಆಗುತ್ತಿದೆ. ಅಲ್ಲದೇ ರಸ್ತೆಯಲ್ಲಿ ಓಡಾಡಲು ತೊಂದರೆ ಆಗುತ್ತಿದೆ ಇದರ ಬಗ್ಗೆ ಹಲವು ಬಾರಿ ಶಾಸಕರಿಗೆ ಮನವಿ ಮಾಡಿದರೂ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಶಾಸಕ ಎ.ಟಿ.ರಾಮಸ್ವಾಮಿ ಅವರು ಗಮನ ಹರಿಸಿ ಸಮಸ್ಯೆ ಬಗೆಹಿಸಬೇಕು 
ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಗ್ರಾಮಸ್ಥರೊಂದಿಗೆ ಜೊತೆಗೂಡಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.ಈ ಸಂದರ್ಭದಲ್ಲಿ ಮಾಜಿ. ತಾ.ಪಂ ಅಧ್ಯಕ್ಷೆ , ಮತ್ತು ಗ್ರಾಮಸ್ಥರು ಹಾಜರಿದ್ದರು.

Post a Comment

Previous Post Next Post