ಹೆದ್ದಾರಿ ನಿರ್ಮಾಣ ಮಾಡಲು ಕಟ್ಟಡ ನಿಯಂತ್ರಣ ರೇಖೆಯನ್ನು ಗುರುತಿಸುವಂತೆ ಅಧಿಕಾರಿಗಳಿಗೆ ಸರ್ಕಾರದಿಂದ ಅಧಿಕೃತ ಆದೇಶ

ಕರ್ನಾಟಕ ರಾಜ್ಯದಲ್ಲಿ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯಲ್ಲಿ ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳ ಅಭಿವೃದ್ಧಿ ಸುಧಾರಣೆ ನಿರ್ವಹಣೆಯನ್ನು ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಕೈಗೊಳ್ಳಲಾಗುತ್ತಿದ್ದು ಹೆದ್ದಾರಿ ಅಕ್ಕಪಕ್ಕದಲ್ಲಿ ಅನಧಿಕೃತ ಕಟ್ಟಡಗಳ ನಿರ್ಮಾಣ ಮತ್ತು ಅದರ ತಡೆ ಹೆದ್ದಾರಿ ನಿರ್ಮಾಣ ಮಾಡಲು ಕಟ್ಟಡ ನಿಯಂತ್ರಣ ರೇಖೆಯನ್ನು ಗುರುತಿಸಿದಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸರ್ಕಾರ ಜೂನ್ 30 2022  ರಂದು ಅಧಿಕೃತ ಆದೇಶ ಹೊರಡಿಸಿ ಕೆಲವೊಂದು ಷರತ್ತುಗಳನ್ನು ವಿಧಿಸಿದೆ .
1 - ರಾಷ್ಟ್ರೀಯ ಹೆದ್ದಾರಿ ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳ ಅಕ್ಕ ಪಕ್ಕಗಳಲ್ಲಿ ರಸ್ತೆ ಮಧ್ಯಭಾಗದಿಂದ ಈ ಕೆಳಗೆ ಸೂಚಿಸಿರುವ ಅಗಲಕ್ಕೆ ಯಾವ ಕಟ್ಟಡಗಳನ್ನು ನಿಲ್ಲಿಸಕೂಡದು ಅಲ್ಲದೆ ಈ ಪರಿಮಿತಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಮತ್ತು ಅಂಗಡಿಗಳು ಉಪಾಹಾರ ಗೃಹಗಳು ಹೋಟೆಲ್ ಗಳು ಮುಂತಾದವುಗಳನ್ನು ನಡೆಸುವುದಕ್ಕೂ ಅನುಮತಿ ಕೊಡಬಾರದೆಂದು ಸೂಚಿಸಲಾಗಿರುತ್ತದೆ ..

🔴 - ರಾಷ್ಟ್ರೀಯ ಹೆದ್ದಾರಿ ರಸ್ತೆಯ ಮಧ್ಯಭಾಗದಿಂದ 40
ಮೀಟರ್ 
🔴 -ರಾಜ್ಯ ಹೆದ್ದಾರಿ ರಸ್ತೆಯ ಮಧ್ಯಭಾಗದಿಂದ 40 ಮೀಟರ್.
🔴 - ಮುಖ್ಯ ಜಿಲ್ಲಾರಸ್ತೆಗಳು 25 ಮೀಟರ್ .

ತದನಂತರ ರಾಜ್ಯ ಲೋಕೋಪಯೋಗಿ ಇಲಾಖೆಯ ಆದೇಶದಲ್ಲಿ ಪಟ್ಟಣ ಗ್ರಾಮಗಳ ಪರಿಮಿತಿ ಹಾಗೂ ಇತರೆ ಆಕ್ಷೇಪಿತ ಪ್ರದೇಶಗಳಲ್ಲಿ ರಾಜ್ಯ ಹೆದ್ದಾರಿಗಳಲ್ಲಿ ಗಡಿರೇಖೆ ಮತ್ತು ಕಟ್ಟಡದ ರೇಖೆಗಳನ್ನು ಈ ಕೆಳಕಂಡಂತೆ ಗುರುತಿಸಲಾಗಿದೆ .

ರಾಜ್ಯ ಹೆದ್ದಾರಿಯ ದಾಖಲಿತ ರಸ್ತೆ ಭೂಗಡಿಯ ಹಂಚಿನಿಂದ ಕಟ್ಟಡ ರೇಖೆಯ ಅಂತರ :-

1 - ಸಿಟಿ ಕಾರ್ಪೋರೇಷನ್ ಪರಿಮಿತಿ, ಸಿಟಿ ಮುನ್ಸಿಪಲ್ ಕೌನ್ಸಿಲ್ ಪರಿಮಿತಿ ,ಟೌನ್ ಮುನ್ಸಿಪಲ್ ಕೌನ್ಸಿಲ್ ಪರಿಮಿತಿ. ಟೌನ್ ಪಂಚಾಯತ್ ಪರಿಮಿತಿ, ಗ್ರಾಮಪಂಚಾಯಿತಿ ಪರಿಮಿತಿಯಲ್ಲಿ ,- 8 ಮೀಟರ್ 

2 - ಸಿಟಿ ಕಾರ್ಪೊರೇಷನ್ ಪರಿಮಿತಿ ಇಂದ 15 ಕಿಮೀ ದೂರದವರೆಗೆ - 12 ಮೀಟರ್ 

3 - ಸಿಟಿ ಮುನ್ಸಿಪಲ್ ಕೌನ್ಸಿಲ್ ಪರಿಮಿತಿಯಿಂದ 10  ಕಿಮೀ ದೂರದವರೆಗೆ - 12 ಮೀಟರ್ .

4 - ಟೌನ್ ಮುನ್ಸಿಪಲ್ ಕೌನ್ಸಿಲ್ ಪರಿಮಿತಿ ಟೌನ್ ಪಂಚಾಯತ್ ಪರಿಮಿತಿ ಗ್ರಾಮಪಂಚಾಯಿತಿ ಪರಿಮಿತಿಯಿಂದ 3 ಕಿಮೀ ದೂರದವರೆಗೆ  - 12 ಮೀಟರ್ .

ಸದರಿ ಆದೇಶದಲ್ಲಿ ನಿಗದಿಪಡಿಸಿದ ಪರಿಮಿತಿಯನ್ನು ಉಲ್ಲಂಘಿಸಿ  ಕಡಿಮೆ ಅಂತರದಲ್ಲಿ ಹಲವು ಪಟ್ಟಣ ಗ್ರಾಮದಲ್ಲಿ ಅತ್ಯಂತ ಕಡಿಮೆ ಅಂತರದಲ್ಲಿ ರಸ್ತೆಯ ಬದಿಯಲ್ಲಿ ಕಟ್ಟಡಗಳು ನಿರ್ಮಾಣವಾಗುತ್ತಿದ್ದು ಈ ಬಗ್ಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ತಕ್ಷಣವೇ ಕಾರ್ಯಪ್ರವೃತ್ತವಾಗಬೇಕು ಎಂದು ಜನ ರಾಜ್ಯ ಸರ್ಕಾರವು ಇಲಾಖಾ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದೆ .

Post a Comment

Previous Post Next Post