ಅರಸೀಕೆರೆ: ಹೆದ್ದಾರಿಯಲ್ಲಿ ಸಾಗುವ ಅಪರಿಚಿತ ವಾಹನ ಹಸು ಒಂದಕ್ಕೆ ಗುದ್ದಿಕೊಂಡು ಸಾಗಿದರೆ ಬೀದಿ ನಾಯಿಗಳು ಮೃತ ಹಸುವನ್ನ ಕಿತ್ತು ತಿಂದಿರುವ ದೃಶ್ಯ ನೋಡುಗರ ಮನ ಕರಗುವಂತೆ ಮಾಡಿದೆ.
ನಗರದ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 206 ಟಿ.ಎಚ್ ರಸ್ತೆಯಲ್ಲಿ ರಾತ್ರಿ ಘಟನೆ ಸಂಭವಿಸಿದ್ದು ಮುಂಜಾನೆ ಈ ಭೀಕರ ದೃಶ್ಯವನ್ನು ಕಂಡ ಜನತೆ ಕರು ಮೃತಪಟ್ಟಿರುವ ರೀತಿಯನ್ನು ಕಂಡು ಚಿರತೆ ದಾಳಿ ಮಾಡಿರಬಹುದೆಂದು ಆತಂಕಗೊಂಡಿದ್ದರು.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ವಲಯ ಅರಣ್ಯ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿ ಕಾಡು ಪ್ರಾಣಿಗಳಿಂದಾಗಿರುವ ದಾಳಿಯಲ್ಲ ಇದು ಬೀದಿ ನಾಯಿಗಳು ಮಾಡಿರುವ ದಾಳಿ ಎಂದು ವಲಯ ಅರಣ್ಯ ಅಧಿಕಾರಿ ಅಮಿತ್ ಗೌಡ ಹೇಳಿದರು.
ಯಾವ ಕಾಡುಪ್ರಾಣಿಗಳಿಗೂ ಕಡಿಮೆ ಇಲ್ಲದ ರೀತಿ ಬೀದಿ ನಾಯಿಗಳು ಏಕಾಏಕಿ ಜನ ಜಾನುವಾರುಗಳ ಮೇಲೆ ದಾಳಿ ಮಾಡಿ ಗಾಯಗೊಳಿಸುತ್ತಿರುವ ಪ್ರಕಟಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಈಗಾಗಲೇ ಈ ನಾಯಿಗಳ ಅಟ್ಟಹಾಸಕ್ಕೆ ನೂರಾರು ಸಾಕು ಪ್ರಾಣಿಗಳು ಬಲಿಯಾಗಿವೆ ಇದ್ದಾದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಬೀದಿ ನಾಯಿಗಳ ಹಟ್ಟಹಾಸಕ್ಕೆ ಕಡಿವಾಡ ಹಾಕುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಿ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ನಗರದ ವಾಸಿ ಮಂಜುನಾಥ್ ಕೈಕು.
Tags
ಅರಸೀಕೆರೆ