ಹಾಸನ ನಗರಸಭೆ ಉಪ ಚುನಾವಣೆ : ಬಿಜೆಪಿ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ,

ಹಾಸನ :-ಕಳೆದ ಕೆಲವು ತಿಂಗಳುಗಳ ಹಿಂದೆ ಕಿಡಿಗೇಡಿಗಳಿಂದ ಕೊಲೆಯಾಗಿ ಮೃತಪಟ್ಟ ಹಾಸನ ನಗರಸಭಾ ಸದಸ್ಯರಾಗಿದ್ದ ಪ್ರಶಾಂತ್ ನಾಗರಾಜ್ ಅವರ ಸದಸ್ಯತ್ವ ಸ್ಥಾನಕ್ಕೆ ಉಪ ಚುನಾವಣೆ ನಡೆಯಲಿದ್ದು ನಾವು ಬಿಜೆಪಿ ಪಕ್ಷದಿಂದ ಅವರ ಸ್ಥಾನಕ್ಕೆ ಪೈಪೋಟಿ ನೀಡಲು ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ ಎಂದು ಕ್ಷೇತ್ರದ ಶಾಸಕರಾದ ಪ್ರೀತಂ ಜೆ ಗೌಡ ಹೇಳಿದ್ದಾರೆ .
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಗರದ 16ನೇ ವಾರ್ಡ್ ನ ಜನತೆ ವ್ಯಕ್ತಿ ಮತ್ತು ಪಕ್ಷಕ್ಕಿಂತ ಆರ್ ನಾಗರಾಜ್ ಅವರ ಕುಟುಂಬಕ್ಕೆ ಮನ್ನಣೆ ನೀಡುತ್ತಾರೆ ಆದ್ದರಿಂದ ಅವರ ಕುಟುಂಬದ ಸದಸ್ಯರು ಚುನಾವಣೆಗೆ ನಿಂತರೆ ಅವರ ವಿರುದ್ಧ ಅಲ್ಲಿ ನಾವು ನಮ್ಮ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ ಆ ಕುಟುಂಬದಿಂದ ಜೆಡಿಎಸ್ ಪಕ್ಷಕ್ಕೆ ಸಾಕಷ್ಟು ಅನುಕೂಲವಾಗಿದೆ ಆದ್ದರಿಂದ ಜೆಡಿಎಸ್ ಪಕ್ಷದವರು ಆಸ್ಥಾನಕ್ಕೆ ಮತ್ತಾವುದೇ ಬೇರೊಂದು ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಅವರ ಕುಟುಂಬದಿಂದಲೇ ಒಬ್ಬ ಸದಸ್ಯರನ್ನು ಚುನಾವಣೆಯಲ್ಲಿ ನಿಲ್ಲಿಸಿದರೆ ಅದನ್ನು ನಾವು ಸ್ವಾಗತಿಸುವುದರೊಂದಿಗೆ ಆ ಅಭ್ಯರ್ಥಿಗೆ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದರು .

Post a Comment

Previous Post Next Post