ಕೊಬ್ಬರಿ ಉತ್ಪನ್ನಗಳನ್ನು ಘಟಕಗಳನ್ನು ತೆರೆಯಲು ಶೇ 90ರಷ್ಟು ಸಹಾಯ ಧನ: ಎಚ್.ಡಿ. ಕುಮಾರಸ್ವಾಮಿ

ಚನ್ನರಾಯಪಟ್ಟಣ: ಜೆಡಿಎಸ್ ಪಕ್ಷ ಅಧಿಕಾರ ಬಂದ ತಕ್ಷಣ ಕೊಬ್ಬರಿ ಉತ್ಪನ್ನಗಳನ್ನು ತಯಾರು ಮಾಡುವ ಘಟಕಗಳನ್ನು ತೆರೆಯಲು ಶೇ 90ರಷ್ಟು ಸಹಾಯ ಧನವನ್ನು ನೀಡುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸೋಮವಾರ ಹಿರೀಸಾವೆಯಲ್ಲಿ ಹೇಳಿದರು.
 ಇಲ್ಲಿನ ಚೌಡೇಶ್ವರಿ ಮಹದ್ವಾರದ ಬಳಿ ನಡೆದ  ಪಂಚರತ್ನ ರಥಯಾತ್ರೆಯ ಸಭೆಯಲ್ಲಿ ಅವರು ಮಾತನಾಡಿದರು. ಕೊಬ್ಬರಿ ಬೆಲೆ ಇಳಿಕೆಯಿಂದ ರೈತರು ಸಂಕಷ್ಟದಲ್ಲಿ ಇದ್ದರೂ, ಸರ್ಕಾರಗಳು ಗಮನಹರಿಸುತ್ತಿಲ್ಲ. ನಮ್ಮ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣ ₨15 ಸಾವಿರ ಬೆಂಬಲ ಬೆಲೆಯೊಂದಿಗೆ ಖರೀದಿ ಕೇಂದ್ರಗಳನ್ನು ತೆರೆಯುತ್ತೆವೆ. ಉತ್ಪನ್ನಗಳನ್ನು ತಯಾರು ಮಾಡಲು ಅಗತ್ಯ ಇರುವ ತರಭೇತಿಯನ್ನು ಸಹ ಸರ್ಕಾರದವತಿಯಿಂದ ಉಚಿತವಾಗಿ ನೀಡುತ್ತೆವೆ. ರೈತ ಯುವಕರು ಕೈಗಾರಿಕೆಗಳನ್ನು ಸ್ಥಾಪಿಸಲು ಶೇ 10 ರಷ್ಟು ಹಣವನ್ನು ಹಾಕಬೇಕು. ರೈತರಿಗೆ ಪ್ರತಿ ಎಕರೆಗೆ ರಸಗೊಬ್ಬರ ಮತ್ತು ಬಿತ್ತನೆಗೆ ₨ 15 ಸಾವಿರ ಸಹಾಯಧನವನ್ನು ನೀಡುವುದಾಗಿ ಹೇಳಿದರು.

 ಸಮ್ಮಿಶ್ರ ಸರ್ಕಾರ ಮಾಡಿದರೆ, ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಾಧ್ಯ ಇಲ್ಲ ಮತ್ತು ಸಂಪನ್ಮೂಲಗಳ ಕ್ರೋಢಿಕರಣಕ್ಕೆ ಅವಕಾಶ ಇರುವುದಿಲ್ಲ. ಇದುವರೆಗೆ 80 ಕ್ಷೇತ್ರಗಳಲ್ಲಿ ಪ್ರಚಾರ ಮಾಡಿದ್ದೇನೆ, ಸುಮಾರು 65 ಕ್ಷೇತ್ರಗಳಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ಹೇಳಿದರು. ಶಾಸಕ ಬಾಲಕೃಷ್ಣ ಮಾತನಾಡಿದರು.
  ಹಿರೀಸಾವೆಯ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಿದರು. ಗಡಿಯಿಂದ ಚನ್ನರಾಯಪಟ್ಟಣದವರೆಗೆ  ರಾಷ್ಟ್ರೀಯ ಹೆದ್ದಾರಿಯಲ್ಲಿ ಇರುವ ಕಲ್ಲಹಳ್ಳಿ, ಹೊನ್ನೇನಹಳ್ಳಿ, ಹೆಗ್ಗಡಿಹಳ್ಳಿ ಮಟ್ಟನವಿಲೆ ಸೇರಿದಂತೆ ಎಲ್ಲ ಹಳ್ಳಿಗಳಲ್ಲಿ ಜನರು ಕುಮಾರಸ್ವಾಮಿಯವರನ್ನು ಸ್ವಾಗತಿಸಿ ಕೊಬ್ಬರಿ ಸೇರಿದಂತೆ ಇತರೆ ಹಾರಗಳನ್ನು ಹಾಕಿದರು.  ಕಾರ್ಯಕ್ರಮದಲ್ಲಿ ಮುಖಂಡರಾದ ರಾಮಕೃಷ್ಣ, ದಿಡಗ ವಾಸು, ಅನಿತಾ ಕುಮಾರಸ್ವಾಮಿ, ಕಿರೀಸಾವೆ ವಾಸು, ಹಡೆನಹಳ್ಳಿ ಲೊಕೇಶ್, ಮಹೇಶ್, ಹೊನ್ನೇನಹಳ್ಳಿ ಬಾಬು ಪಕ್ಷದ ಕಾರ್ಯಕರ್ತರು ಇದ್ದರು. ಗಡಿಯಲ್ಲಿ ಕ್ರೇನ್ ಮೂಲಕ  ಹೂವಿನ ಹಾರಹಾಕುವಾಗ ಕುಸಿಯಿತು. ನಂತರ ಕಾರ್ಯಕರ್ತರೆ ಎಳೆದು ಹಾರ ಹಾಕಿದರು. ಹಿರೀಸಾವೆಯಲ್ಲಿ ಸೇಬಿನ ಹಾರವನ್ನು ಹಾಕಲಾಯಿತು.

Post a Comment

Previous Post Next Post