ಆಹ್ವಾನ

ಅಂದು 
ನಾ ಚಿಗುರಿದಾಗ 
ನನ್ನ ಹರೆಯಕ್ಕೆ ವಸಂತ ಸ್ಪಂದಿಸಿದಾಗ
ಕೊಂಬೆ ಕೊಂಬೆಗಳಲ್ಲಿ ಕುಳಿತ
ಹಕ್ಕಿ ಪಿಕ್ಕಿಗಳು ಕೂಗಿ ಕರೆದಾಗ 
ಹೃದಯ ಮಂದಿರದಲ್ಲಿ 
ದುಂಬಿಗೆಳು ಯೇಂಕರಿಸಿದಾಗ
ಜುಳು ಜುಳು ನಾದದೊಂದಿಗೆ ಸ್ಪಶಿ೯ಸುತ್ತಿದ್ದ
ನನ್ನ ಜೀವ ಸಂಜೀವಿನಿ ಹೇಮಾವತಿ ಹೊಳೆ 
ಮಾಗಿದ ಫಲಕ್ಕಾಗಿ ಹಾತೊರೆದು 
ಈಜಲು ಬರುತ್ತಿದ್ದ ಮೋಜಿನ ಹುಡುಗರು
ಇಂದು
ಇವರು ನನ್ನಿಂದ ದೂರ.. ಬಹುದೂರ
ವಸಂತನಿಲ್ಲದ ಬರಡು ಜೀವನ
ಹಸಿರು ಚಿಗುರದೆ ನೊಂದು
ನಾ ಆಹ್ವಾನಿಸುತ್ತಿದ್ದೇನೆ
ಬೀಸುವ ಬಿರುಗಾಳಿಯನ್ನು
ಇಲ್ಲಾ ಕಡಿದೊಯ್ಯುವ ಮರಕಟುಕರನ್ನು..
   
ಗೊರೂರು ಅನಂತರಾಜು
ಗೊರೂರು ಅನಂತರಾಜು 

Post a Comment

Previous Post Next Post