ಹಾಸನ ಟಿಕೆಟ್ ಗುದ್ದಾಟ ನಿಲ್ಲಿಸಲು ದೇವೇಗೌಡರಿಂದ ಪ್ಲಾನ್; ಸಕ್ಸಸ್ ಆಗುತ್ತಾ ರೇವಣ್ಣರ ಹೊಸ ಅಸ್ತ್ರ?

ರಾಜ್ಯ ಮತಯುದ್ಧಕ್ಕೆ ಸೇನಾನಿಗಳ ನೇಮಕ ಭರ್ಜರಿಯಾಗಿ ನಡೀತಿದೆ. ಕದನಕಲಿಗಳನ್ನ ಅಖಾಡಕ್ಕೆ ಇಳಿಸೋಕೆ ದಳಪತಿಗಳು ತಾಲೀಮು ನಡೆಸ್ತಿದ್ದಾರೆ. ಜೆಡಿಎಸ್​​ 2ನೇ ಪಟ್ಟಿ ಫೈನಲ್​ ಮಾಡಲು ಇಂದು ಹೈ ವೋಲ್ಟೇಜ್​​ ಸಭೆ ನಡೆಯಲಿದೆ. ಇಂದೇ ಸಿಂಹಾಸನ ಕದನಕ್ಕೂ ತೆರೆ ಬೀಳಲಿದೆ.


ದಳಪತಿಗಳು ಈಗಾಗಲೇ ಮೊದಲ ಪಟ್ಟಿ ರಿಲೀಸ್ ಮಾಡಿ ತಮ್ಮ ಸೇನಾನಿಗಳನ್ನ ಅಖಾಡಕ್ಕೆ ಇಳಿಸಿದ್ದಾರೆ. ಫಸ್ಟ್​​ ಲಿಸ್ಟ್​ನಲ್ಲಿ ಟಿಕೆಟ್​​ ಫೈನಲ್​ ಆದ ಅಭ್ಯರ್ಥಿಗಳು ಎಲೆಕ್ಷನ್ ಅಖಾಡದಲ್ಲಿ ಅಬ್ಬರಿಸ್ತಿದ್ದಾರೆ. ಆದ್ರೆ 2ನೇ ಪಟ್ಟಿ ಘೋಷಣೆಯೇ ಜೆಡಿಎಸ್​​ಗೆ ತಲೆನೋವಾಗಿ ಪರಿಣಮಿಸಿದೆ. ಹಾಸನ ಜೆಡಿಎಸ್​ ಟಿಕೆಟ್​​ ಹಂಚಿಕೆಯೇ ದೊಡ್ಡ ಸವಾಲಾಗಿಬಿಟ್ಟಿದೆ. ಈ ಎಲ್ಲಾ ಗೊಂದಲಕ್ಕೂ ಇಂದೇ ತೆರೆ ಬೀಳಲಿದೆ.

ನಾಳೆ ಜೆಡಿಎಸ್​ ಅಭ್ಯರ್ಥಿಗಳ ಎರಡನೇ ಪಟ್ಟಿ ರಿಲೀಸ್​
ಕೊನೆಗೂ ಜೆಡಿಎಸ್​ 2ನೇ ಪಟ್ಟಿ ರಿಲೀಸ್​​ಗೆ ಮುಹೂರ್ತ ಫಿಕ್ಸ್​ ಆಗಿದೆ. ಸೋಮವಾರ ಅಂದ್ರೆ ನಾಳೆ ಅಭ್ಯರ್ಥಿಗಳ ಸೆಕೆಂಡ್​ ಲಿಸ್ಟ್​ ರಿಲೀಸ್​​ ಆಗಲಿದೆ. ಪಟ್ಟಿ ಫೈನಲ್​ ಮಾಡಲು ಇವತ್ತು ದೊಡ್ಡಗೌಡರ ನಿವಾಸದಲ್ಲಿ ಹೈವೋಲ್ಟೇಜ್​​ ಸಭೆ ನಡೆಯಲಿದೆ. ಎಲ್ಲಾ ಗೊಂದಲಕ್ಕೂ ಖುದ್ದು ಮಾಜಿ ಪ್ರಧಾನಿ ದೇವೇಗೌಡರೇ ತೆರೆ ಎಳೆಯಲಿದ್ದಾರೆ.

ಇಂದು ಜೆಡಿಎಸ್ ಹೈ-ವೋಲ್ಟೇಜ್​ ಸಭೆ​

  • ​​ಇಂದಿನ ಹೈವೋಲ್ಟೇಜ್​ ಸಭೆಯಲ್ಲಿ ಹೆಚ್​ಡಿಕೆ, ರೇವಣ್ಣ ಭಾಗಿ
  • ಖುದ್ದು ದೇವೇಗೌಡರಿಂದಲೇ ಹಾಸನ ಟಿಕೆಟ್​​ ಗೊಂದಲಕ್ಕೆ ತೆರೆ
  • ಭವಾನಿಗೆ ಟಿಕೆಟ್ ನೀಡಲು ಸಾಧ್ಯವಾಗದಿದ್ರೆ, ನನಗೆ ಟಿಕೆಟ್ ನೀಡಿ
  • ಹಾಸನ, ಹೊಳೆನರಸೀಪುರ ಕ್ಷೇತ್ರಗಳಲ್ಲಿ ಸ್ಪರ್ಧೆಗೆ ರೇವಣ್ಣ ಸಿದ್ಧ?
  • ರೇವಣ್ಣರ ಈ ನಿರ್ಧಾರಕ್ಕೆ ಕುಟುಂಬದ ಸದಸ್ಯರ ಬೆಂಬಲ‌
  • ಕುಮಾರಸ್ವಾಮಿಯ ಮನವೊಲಿಸೋದಕ್ಕೆ ರೇವಣ್ಣ ಸಿದ್ಧತೆ
  • ಅಂತಿಮವಾಗಿ ರೇವಣ್ಣ ಅಥವಾ ಭವಾನಿಗೆ ಹಾಸನ ಟಿಕೆಟ್?
  • ಭವಾನಿ ರೇವಣ್ಣಗೆ ಟಿಕೆಟ್​​ ನೀಡುವಂತೆ ಬೆಂಬಲಿಗರ ಪಟ್ಟು
  • ಭವಾನಿ ರೇವಣ್ಣಗೆ ಟಿಕೆಟ್ ನೀಡ್ಬೇಕು ಅಂತಾ ಅವರ ಬೆಂಬಲಿಗರು ಪಟ್ಟುಹಿಡಿದಿದ್ದಾರೆ. ನಿನ್ನೆ ಹೆಚ್‌.ಡಿ. ದೇವೇಗೌಡರ ನಿವಾಸಕ್ಕೆ ಹಾಸನ ಕ್ಷೇತ್ರದ ಪ್ರಮುಖರು ಭೇಟಿ ನೀಡಿ, ಭವಾನಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದಾರೆ. ಕೊನೆಗೂ ಸಿಂಹಾಸನ ಸಮರದ ಗೊಂದಲ ಇವತ್ತೇ ಬಗೆಹರಿಯಲಿದೆ. ಆದ್ರೆ ಕಾರ್ಯಕರ್ತರ ಮನವಿಗೆ ದೇವೇಗೌಡರು ಬಹುಪರಾಕ್​​ ಅಂತಾರಾ? ಅಥವಾ ಕುಮಾರಸ್ವಾಮಿ ನಿರ್ಧಾರಕ್ಕೆ ಜೈ ಅಂತಾರಾ ಅಂತಾ ಅನ್ನೋದೆ ಸದ್ಯದ ಕುತೂಹಲ.

Post a Comment

Previous Post Next Post