ನವವಿವಾಹಿತನ ಮತಾಭಿಮಾನ: ಧರ್ಮಸ್ಥಳದಲ್ಲಿ ಮದುವೆಯಾಗಿ ಹಾಸನಕ್ಕೆ ಬಂದು ಮತದಾನ

ಹಾಸನ: ರಾಜ್ಯದಲ್ಲಿ ಮತದಾನ ಪ್ರಮಾಣ ನಿರೀಕ್ಷಿತ ಮಟ್ಟದಲ್ಲಿ ಇಲ್ಲದಿರುವುದು ಕಂಡುಬಂದಿದ್ದು, ಮತದಾನ ಹೆಚ್ಚಿಸುವ ನಿಟ್ಟಿನಲ್ಲಿ ಹಲವರು ನಾನಾ ರೀತಿಯಲ್ಲಿ ಹುರಿದುಂಬಿಸಲು ಪ್ರಯತ್ನ ನಡೆಸುತ್ತಿದ್ದಾರೆ.

ಮತ ಚಲಾಯಿಸಲು ಹಲವರು ನಿರಾಸಕ್ತಿ ತೋರುತ್ತಿರುವ ನಡುವೆಯೇ ಶತಾಯುಷಿಗಳು, ರೋಗಿಗಳು, ವಯೋವೃದ್ಧರು, ವಿಕಲಾಂಗರು, ಅದರಲ್ಲೂ ಎರಡೂ ಕೈಗಳು ಇರದವರು ಕೂಡ ಅಪಾರ ಆಸಕ್ತಿಯಿಂದ ಬಂದು ಮತ ಚಲಾಯಿಸಿದ್ದಾರೆ.


ಇವರೊಂದಿಗೆ ಕೆಲವರು ಚುನಾವಣೆ ದಿನವೇ ಮದುವೆ ಇದ್ದರೂ ಮದುವೆ ಮುಗಿಸಿಕೊಂಡು ಮತ ಚಲಾಯಿಸುತ್ತಿದ್ದಾರೆ.

ರಾಜ್ಯದಲ್ಲಿ ಮದುವೆ ಮುಗಿದ ತಕ್ಷಣ ಮತಗಟ್ಟೆಗೆ ಬಂದು ಮತವನ್ನು ಚಲಾಯಿಸಿದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಹಾಸನ ಜಿಲ್ಲೆ ಸಕಲೇಶಪುರದ ಮಹೇಶ್ವರಿನಗರ ನಿವಾಸಿ ರೋಹಿತ್ ಇಂದು ತಮ್ಮ ಮದುವೆ ಇದ್ದರೂ ಮತ ಚಲಾಯಿಸುವುದನ್ನು ತಪ್ಪಿಸಲಿಲ್ಲ.

ಧರ್ಮಸ್ಥಳದಲ್ಲಿ ಇಂದು ಮದುವೆಯಾದ ಇವರು, ಮದುವೆ ಮುಗಿಯುತ್ತಿದ್ದಂತೆ ಸಕಲೇಶಪುರ ಪಟ್ಟಣದ ಮತಗಟ್ಟೆ 85ಕ್ಕೆ ಪತ್ನಿ ನಂದಿನಿ ಜತೆ ಆಗಮಿಸಿ ಮತ ಚಲಾಯಿಸಿದ್ದಾರೆ. ಇವರ ಮತಾಭಿಮಾನಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Post a Comment

Previous Post Next Post