ಬಸ್ ನಲ್ಲೇ ಹೆರಿಗೆ ಮಾಡಿಸಿ ಗರ್ಭಿಣಿ ಪಾಲಿಗೆ ದೇವರಾದ 'ಲೇಡಿ ಕಂಡಕ್ಟರ್'

ಹಾಸನ : ಬಸ್ ನಲ್ಲೇ ಮಹಿಳೆಯೊಬ್ಬರು ಹೆಣ್ಣುಮಗುವಿಗೆ ಜನ್ಮ ನೀಡಿದ ಘಟನೆ ಚನ್ನರಾಯಪಟ್ಟಣ ಹಾಸನ ಮಾರ್ಗಮಧ್ಯೆ ನಡೆದಿದೆ.


ಮಹಿಳೆಯೊಬ್ಬರು ಮೂಡುಗೆರೆಗೆ ಕೆಎಸ್ ಆರ್ ಸಿಟಿ ಬಸ್ ನಲ್ಲಿ ತೆರಳುತ್ತಿದ್ದರು. ಈ ವೇಳೆ ಬಸ್ ನಲ್ಲೇ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ.

ತಕ್ಷಣ ಚಾಲಕ ಬಸ್ ಅನ್ನು ನಿಲ್ಲಿದ್ದು, ಬಳಿಕ ಬಸ್ನ ನಿರ್ವಾಹಕಿ ಗರ್ಭಿಣಿಗೆ ಹೆರಿಗೆ ಮಾಡಿಸಲು ಸಹಾಯ ಮಾಡಿದ್ದಾರೆ. ನಂತರ ಅಂಬುಲೆನ್ಸ್ಗೆ ಕರೆ ಮಾಡಿ ತಾಯಿ ಹಾಗೂ ಮಗುವನ್ನು ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಅಲ್ಲದೇ ಬಸ್ ಸಿಬ್ಬಂದಿ ಹಾಗೂ ಪ್ರಯಾಣಿಕರು ಆಸ್ಪತ್ರೆಗೆ ತೆರಳಿ ಮಹಿಳೆಗೆ ಹಣ ಸಹಾಯ ಮಾಡಿದ್ದಾರೆ. ಲೇಡಿ ಕಂಡಕ್ಟರ್ ಮಾಡಿದ ಕೆಲಸ ಜನ ಮೆಚ್ಚುಗೆಗೆ ಪಾತ್ರವಾಗಿದೆ.

Post a Comment

Previous Post Next Post