ಅರಕಲಗೂಡು : ರುದ್ರಪಟ್ಟಣ ಸಂಗೀತೋತ್ಸವ ಸಮಿತಿ ಟ್ರಸ್ಟ್ ವತಿಯಿಂದ 20ನೇ ವಾರ್ಷಿಕ ಸಂಗೀತೋತ್ಸವ-2023 ಮೇ.17ರಿಂದ 21ರ ತನಕ ತಾಲೂಕಿನ ರುದ್ರಪಟ್ಟಣ ಗ್ರಾಮದ ಶ್ರೀರಾಮ ಮಂದಿರದಲ್ಲಿ ಜರುಗಲಿದೆ ಎಂದು ಸಂಗೀತ ವಿದ್ವಾನ್ ಆರ್.ಕೆ.ಪದ್ಮನಾಭ ಅವರು ತಿಳಿಸಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,ಕಳೆದ 20ವರ್ಷಗಳಿಂದಲೂ ಕೂಡ ಸಂಗಿತೋತ್ಸವ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಸಂಗೀತ ಸಾಧಕರೊಂದಿಗೆ ನಡೆಸಿಕೊಂಡು ಬರುತಿದ್ದು,ಈ ಬಾರಿಯು ಸಹ ಮತ್ತೊಷ್ಟು ವಿಶೇಷತೆಯೊಂದಿಗೆ ನಡೆಸಲು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ.ಈ ಸಾಲಿನ ‘ನಾಚಾರಮ್ಮ ಪ್ರಶಸ್ತಿ-2023’ ಹಾಗೂ ‘ಗಾನಕಲಾ ಸ್ಪರ್ಷಮಣಿ’ ಬಿರುದನ್ನು ಕರ್ನಾಟಕ ಬ್ಯಾಂಕ್ ಛೇರಮನ್ ಪಿ.ಪ್ರದೀಪ್‌ಕುಮಾರ್ ಅವರಿಗೆ ನೀಡಿ ಗೌರವಿಸಲಾಗುತ್ತಿದೆ ಎಂದು ಹೇಳಿದರು.
ಮೇ.17ರಂದು ಬೆಳಗ್ಗೆ 10ಗಂಟೆಗೆ ಸಂಗೀತೋತ್ಸವ ಸಮಾರಂಭದ ಉದ್ಘಾಟನೆ ನಡೆಯಲಿದೆ.ಇದಾದ ಬಳಿಕ ಸಂಗೀತ ಗೋಷ್ಠಿಗಳು ಜರುಗಲಿವೆ.ಒಟ್ಟು 10 ಸಂಗೀತ ಗೋಷ್ಠಿಗಳು ನಡೆಯಲಿದ್ದು,ರಾಷ್ಟ್ರೀಯ,ರಾಜ್ಯ,ಜಿಲ್ಲಾ ಮಟ್ಟದ ಸಂಗೀತ ಸಾಧಕ ಕಲಾವಿದರು ಭಾಗವಹಿಸಿ ತಮ್ಮ ಸಂಗೀತ ಸುಧೆಯನ್ನು ಹರಿಸಲಿದ್ದಾರೆ ಎಂದು ತಿಳಿಸಿದರು.
Tags
ಅರಕಲಗೂಡು