ಜಾವಗಲ್, ಜೂ.12: ಜಾವಗಲ್ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಚಿರತೆ ಪ್ರತ್ಯಕ್ಷವಾಗಿರುವುದರಿಂದ ಕೃಷಿಕರು ಹಾಗೂ ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಜಾವಗಲ್ ದ್ಯಾಮೇನಹಳ್ಳಿ, ರಾಮಕೃಷ್ಣಪುರ, ಹಿರೆಕಟ್ಟೆ ಒಡ್ಡು, ತಿಮ್ಮನಹಳ್ಳಿ ಹೊಂದಿಕೊಂಡಂತೆ ಜಾವಗಲ್ ಪಟ್ಟಣದ ಮಾರುಕಟ್ಟೆ ರಸ್ತೆಯ ಸದಾಶಿವ ನಗರ ಬಡಾವಣೆಯ ಸುತ್ತ-ಮುತ್ತಲಿನ ಜಮೀನು ಹಾಗೂ ಮೊದೆಗಳಲ್ಲಿ ಚಿರತೆ ಒಂದು ಪ್ರತ್ಯಕ್ಷವಾಗಿದ್ದು, ಬೈಕ್‌ನಲ್ಲಿ ಬರುತ್ತಿ ದ್ದರಿಂದ ಚಿರತೆಗೆ ಸಿಕ್ಕಿಕೊಳ್ಳುವ ಪರಿಸ್ಥಿತಿ ಸ್ವಲ್ಪದರಲ್ಲಿ ತಪ್ಪಿದೆಯೆಂದು ಬಡಾವಣೆಯ ನಿವಾಸಿ ಗ್ರಾಮಪಂಚಾಯಿತಿ ಸದಸ್ಯ ಜೆ.ಹೆಚ್.ಶಿವಣ್ಣ ಗಾಬರಿಯಿಂದ ತಿಳಿಸಿದರು.
ಈ ಬಡಾವಣೆಗೆ ಹೊಂದಿಕೊಂಡಂತೆ ವಿರಳವಾದ ಮನೆಗಳು, ತೋಟಗಳು, ಮೊದೆಗಳು ಕಂಡುಬಂದಿದ್ದು ಚಿರತೆಯು ಹಾಗಾಗಿ ಪ್ರತ್ಯಕ್ಷವಾಗುತ್ತಿರುವುದರಿಂದ ಕೃಷಿಕರು ರಾತ್ರಿ ವೇಳೆ ಹಾಗೂ ಬೆಳಗಿನ ಜಾವ ತೋಟಕ್ಕೆ, ಜಮೀನುಗಳಿಗೆ ಹೋಗಿಬರುವುದಕ್ಕೆ ತುಂಬಾ ಭಯವಾಗುತ್ತಿದೆ ಎಂದು ಕೃಷಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಈ ಬಗ್ಗೆ ಕೂಡಲೇ ಅರಣ್ಯ ಇಲಾಖೆಯವರು ಗಮನಹರಿಸಿ ಚಿರತೆ ಹಾವಳಿಯನ್ನು ತಪ್ಪಿಸಲು ಬೋನ್ ವ್ಯವಸ್ಥೆ ಮಾಡಿ ರೈತಾಪಿ ವರ್ಗದ ವರಿಗೆ ಕೂಡಲೇ ಕ್ರಮ ಕೈಗೊಂಡು ಅನುಕೂಲ ಮಾಡಿಕೊಡುವಂತೆ ಒತ್ತಾಯಿಸಿದರು.
Tags
ಅರಸೀಕೆರೆ