ಸಕಲೇಶಪುರ:ಪಟ್ಟಣದ ಕುಡಗರಹಳ್ಳಿ ಬಡಾವಣೆಯಲ್ಲಿನ ಮಿಲಿಟರಿ ವಾಹನ ತರಭೇತಿ ಕೇಂದ್ರದಲ್ಲಿನ ಸೈನಿಕರು ವಿಷ ಮಿಶ್ರಿತ ಆಹಾರ ಸೇವಿಸಿ ಅಸ್ಪಸ್ಥರಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಬಿಡುಗಡೆಯಾಗಿದ್ದಾರೆ.
ತರಭೇತಿ ಕೇಂದ್ರದಲ್ಲಿ ಒಟ್ಟು 105 ಸೈನಿಕರಿದ್ದು ಇದರಲ್ಲಿ 35 ಸೈನಿಕರು ಬೇದಿ ಕಾಣಿಸಿಕೊಂಡ ಕಾರಣ ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಗೆ ಬುದುವಾರ ಮದ್ಯಾಹ್ನ ದಾಖಲಾಗಿದ್ದು ಚಿಕಿತ್ಸೆ ಪಡೆದ ನಂತರ ಸಂಜೆ 4 ಗಂಟೆ ವೇಳಗೆ ಎಲ್ಲ ಸೈನಿಕರನ್ನು ಕ್ಯಾಂಪಿಗೆ ವಾಪಸ್ಸ್ ಕಳುಹಿಸಿಕೊಡಲಾಗಿದೆ. ಎಲ್ಲರ ಆರೋಗ್ಯ ಸ್ಥಿತಿ ಸುದಾರಿಸಿದೆ ಎಂದು ಕ್ರಾಫqð ಆಸ್ಪತ್ರೆ ವೈದ್ಯರು ತಿಳಿಸಿದರು.
ಘಟನೆ ವಿವರ: ಮಂಗಳವಾರ ರಾತ್ರಿ ಊಟದ ನಂತರ ಕೆಲವು ಸೈನಿಕರ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು ಗುರುವಾರ ಬೆಳಿಗ್ಗೆ ಮತ್ತಷ್ಟು ಸೈನಿಕರು ಅಸ್ಪಸ್ಥರಾಗಿದ್ದರು ಮದ್ಯಾಹ್ನದ ವೇಳೆಗೆ ಈ ಸಂಖ್ಯೆ ಹೆಚ್ಚಿದ ಕಾರಣ ಆಸ್ಪತ್ರೆಗೆ ದಾಖಲಿಸಿದ ಮಿಲಿಟರಿ ಕಮಾಂಡರ್ ಸೂಕ್ತ ಚಿಕಿತ್ಸೆ ಕೊಡಿಸಲು ಯಶಸ್ವಿಯಾಗಿದ್ದಾರೆ. ಆಸ್ಪತ್ರೆಗೆ ಶಾಸಕ ಸೀಮೆಂಟ್ ಮಂಜು ಭೇಟಿ ನೀಡಿ ಸೈನಿಕರ ಆರೋಗ್ಯ ವಿಚಾರಿಸಿದರು. ಡಿವೈಎಸ್‌ಪಿ ಮಿಥುನ್ ಸ್ಥಳದಲ್ಲಿ ಮೊಕ್ಕಂಹೊಡಿ ಪರಿಸ್ಥಿತಿ ಅವಲೋಕಿಸಿದರು.