ಮಿಲ್ಕಿ ಬ್ಯೂಟಿ ಎಂದೇ ಖ್ಯಾತಿ ಪಡೆದಿರುವ ತಮನ್ನಾ ಭಾಟಿಯಾ ದಕ್ಷಿಣ ಚಿತ್ರರಂಗದ ಬಹುಬೇಡಿಕೆಯ ನಟಿ.

 ಮಿಲ್ಕಿ ಬ್ಯೂಟಿ ಎಂದೇ ಖ್ಯಾತಿ ಪಡೆದಿರುವ ತಮನ್ನಾ ಭಾಟಿಯಾ ದಕ್ಷಿಣ ಚಿತ್ರರಂಗದ ಬಹುಬೇಡಿಕೆಯ ನಟಿ.

ಪ್ರಮುಖವಾಗಿ ತೆಲಗು ಮತ್ತು ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಇವರು ಕೆಲ ಹಿಂದಿ ಚಿತ್ರಗಳಲ್ಲಿ ಕೂಡ ನಟಿಸಿದ್ದಾರೆ. ಕನ್ನಡದಲ್ಲಿ `ಜಾಗ್ವಾರ್' ಮತ್ತು `ಕೆಜಿಎಫ್' ಚಿತ್ರಗಳ ಐಟೆಮ್ ಹಾಡುಗಳಿಗೆ ನೃತ್ಯ ಮಾಡಿದ್ದಾರೆ.



ತಮನ್ನಾ ಅವರು ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ. ನೋಡೋಕೆ ಸಖತ್ ಕ್ಯೂಟ್ ಆಗಿ ಕಾಣ್ತಾ ಇದ್ದಾರೆ. ಇವರ ಫೋಟೋ ನೋಡಿದ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

 ನೀವು ಯಾವಾಗಲೂ ಯಂಗ್ ಆಗಿ ಕಾಣ್ತೀರಿ ಎಂದಿದ್ದಾರೆ.
ನಟಿ ತಮನ್ನಾ ಅವರು ಶೇರ್ ಮಾಡಿರುವ ಫೋಟೋಗಳಿಗೆ 6 ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿವೆ. 6 ಪ್ಯಾಕ್ ನಟಿ, ಫೈರ್, ಸೂಪರ್, ನೈಸ್, ಲವ್ ಯು ಎಂದು ಅಭಿಮಾನಿಗಳು ಕಾಮೆಂಟ್ ಹಾಕಿದ್ದಾರೆ.


ತಮನ್ನಾ ತಮ್ಮ 13 ನೇ ವಯಸ್ಸಿನಲ್ಲಿಯೇ ನಟನೆಗೆ ಇಳಿದರು. 2005 ರಲ್ಲಿ ತಮ್ಮ ಹದಿನೈದನೇ ವಯಸ್ಸಿನಲ್ಲಿ `ಚಾಂದ್ ಸಾ ರೋಷನ್ ಚೆಹರಾ' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದರು. ಈ ಚಿತ್ರ ಯಶಸ್ವಿಯಾಗಲಿಲ್ಲ. ಅದೇ ವರ್ಷ ತೆಲುಗಿನ ಶ್ರೀ ಮತ್ತು ಮುಂದಿನ ವರ್ಷ ತಮಿಳಿನ ಕೇಡಿ ಚಿತ್ರಗಳಲ್ಲಿ ನಟಿಸಿದರು. ಈ ಚಿತ್ರಗಳ ನಟನೆಗೆ ಪ್ರಶಂಸೆ ಪಡೆದರು. ನಂತರ ತೆರೆಕಂಡ ಹ್ಯಾಪಿ ಡೇಸ್, ಕಲ್ಲೂರಿ ಚಿತ್ರಗಳು ತಮನ್ನಾಗೆ ಇನ್ನಷ್ಟು ಖ್ಯಾತಿ ನೀಡಿದವು.



'ಕೊಂಚಂ ಇಷ್ಟಂ ಕೊಂಚಂ ಕಷ್ಟಂ', ಪೈಯ್ಯ, 100 % ಲವ್, ಬದ್ರಿನಾಥ್ ಮುಂತಾದ ಚಿತ್ರಗಳು ತಮಿಳು ಮತ್ತು ತೆಲಗು ಚಿತ್ರರಂಗದಲ್ಲಿ ತಮನ್ನಾಗೆ ಭದ್ರವಾದ ತಳಪಾಯ ಹಾಕಿದವು. ಹಿಂದಿಯಲ್ಲಿ ಹಿಮ್ಮತ್ತವಾಲಾ ಮುಂತಾದ ಚಿತ್ರಗಳಲ್ಲಿ ನಟಿಸಿದರು. ಎರಡು ಭಾಗಗಳಲ್ಲಿ ತೆರೆಕಂಡ ಬಾಹುಬಲಿ ಚಿತ್ರ ತಮನ್ನಾಗೆ ಭಾರತದಾದ್ಯಂತ ಜನಪ್ರಿಯತೆ ತಂದು ಕೊಟ್ಟಿತು.

ತಮನ್ನಾ ಇಂಡಸ್ಟ್ರಿಗೆ ಎಂಟ್ರಿಯಾಗಿ 18 ವರ್ಷವಾದರೂ ಇನ್ನೂ ಮಗುವಿನಂತೆ ಕಾಣುತ್ತಿದ್ದಾರೆ. ಕೆರಿಯರ್ ನಲ್ಲಿ ನಾಯಕಿಯಾಗಿ ನಟಿಸುತ್ತಲೇ ಹಲವು ಸಿನಿಮಾಗಳಲ್ಲಿ ಐಟಂ ಸಾಂಗ್ ಗಳಲ್ಲಿ ನಟಿಸಿದ್ದ

ರು.

ಮಿಲ್ಕಿ ಬ್ಯೂಟಿ ತಮನ್ನಾ ಕಳೆದ ಕೆಲವು ವರ್ಷಗಳಿಂದ ನಟ ವಿಜಯ್ ವರ್ಮಾ ಅವರೊಂದಿಗೆ ಸುತ್ತಾಡುತ್ತಿದ್ದಾರೆ. ಇತ್ತೀಚೆಗೆ ಇವರಿಬ್ಬರು ಮುಂಬೈನಲ್ಲಿ ಜೋಡಿಯಾಗಿ ಕಾಣಿಸಿಕೊಂಡಿದ್ದರು.


ಕಳೆದ ವರ್ಷ ಸಿಟಿಮಾರ್, ಬಬ್ಲಿ ಬೌನ್ಸರ್ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ತಮನ್ನಾ ನಟಿಸಿದ್ದರು. ಸದ್ಯ ಚಿರಂಜೀವಿ ನಾಯಕನಾಗಿ ಮೆಹರ್ ರಮೇಶ್ ನಿರ್ದೇಶನದಲ್ಲಿ ಭೋಲಾ ಶಂಕರ್ ಎಂಬ ಸಿನಿಮಾ ಮಾಡುತ್ತಿದ್ದಾರೆ. ಈ ಭೋಲಾ ಶಂಕರ್ ತಮಿಳಿನ ವೇದಾಳಂ ರಿಮೇಕ್ ಆಗಿ ಬರುತ್ತಿದ್ದಾರೆ. ಈ ಚಿತ್ರದಲ್ಲಿ ತಮನ್ನಾ ನಾಯಕಿಯಾಗಿ ನಟಿಸುತ್ತಿದ್ದಾರೆ. ರಜನಿಕಾಂತ್ ಜೊತೆಗಿನ 'ಜೈಲರ್' ಚಿತ್ರದಲ್ಲಿ ತಮನ್ನಾ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.ಈ ಚಿತ್ರ ಆಗಸ್ಟ್ 10 ರಂದು ಬಿಡುಗಡೆಯಾಗಲಿದೆ.

Post a Comment

Previous Post Next Post