ಸಕಲೇಶಪುರದ ಬೆಳಗೋಡು ಹೋಬಳಿಯಲ್ಲಿ ಗಂಧದ ಮರಗಳ ಲೂಟಿ

ಸಕಲೇಶಪುರದ ಬೆಳಗೋಡು ಹೋಬಳಿಯಲ್ಲಿ ಗಂಧದ ಮರಗಳನ್ನು ರಾತೋ ರಾತ್ರಿ ಯಾರೋ ದುಷ್ಕರ್ಮಿಗಳು ಹೊತ್ತೊಯ್ಯುತ್ತಿದ್ದು ಅರಣ್ಯದ ಬೆಲೆ ಬಾಳುವ ಸಂಪತ್ತನ್ನು ನಾಶ ಪಡಿಸುತ್ತಿರುವುದಾಗಿ ವರದಿಯಾಗಿದೆ.

ಬೆಳಗೋಡು ಹೋಬಳಿಯಲ್ಲಿ ಕಳೆದ ಒಂದು ತಿಂಗಳಿನಿಂದ ಗಂಧದ ಮರಗಳು, ಗಿಡಗಳು ತುಂಡರಿಸಿ ಕೆಳಕ್ಕೆ ಬೀಳುತ್ತಲಿದೆ. ರಾತೋ ರಾತ್ರಿ ಮರಗಳನ್ನು ಕಡಿಯಲಾಗುತ್ತಿದೆ. ಗಂಧದ ಮರಗಳನ್ನು ತಮ್ಮ ಕೃಷಿ ಪ್ರದೇಶಗಳಲ್ಲಿ ರೈತರು ಬೆಳೆಸಿದ್ದಾರೆ. ಕೆಲವು ರೈತರ ತೋಟಗಳಲ್ಲಿ ಬಹಳಷ್ಟು ಗಿಡಗಳಿತ್ತು.
ಆದರೆ ರಾತ್ರಿಯಾಗುತ್ತಿದ್ದಂತೆ ಗಿಡಗಳನ್ನು ಕೆಲವೆಡೆ ನೆಲಕ್ಕೆ ಉರುಳಿಸಿದರೆ, ಇನ್ನು ಕೆಲವೆಡೆ ಬಲಿತ ಮರಗಳನ್ನು ಹೊತ್ತೊಯ್ಯಲಾಗುತ್ತಿದೆ.
ಬೆಳೆಗಾರರ ಆತಂಕ
ತಾವು ನೆಟ್ಟ ಗಿಡಗಳು ರಾತ್ರಿಯಾಗುತ್ತಿದ್ದಂತೆ ಮಾಯವಾಗುತ್ತಿರುವುದನ್ನು ಕಂಡ ಸ್ಥಳೀಯರು ಈ ಘಟನೆಯಿಂದ ಬಹಳ ಆತಂಕಕ್ಕೆ ಒಳಗಾಗಿದ್ದಾರೆ. ಕಳೆದ ಒಂದು ತಿಂಗಳಿಂದ ಸುಮಾರು 25 ಗಿಡ, ಮರಗಳನ್ನು ನೆಲಕ್ಕೆ ಉರುಳಿಸಲಾಗಿದೆ ಎಂದು ಸ್ಥಳಿಯರು ಹೇಳುತ್ತಾರೆ.
ಬೆಳೆದು ದಪ್ಪಗಾಗಿರುವ ಮರಗಳನ್ನು ಹೊತ್ತೊಯ್ದರೆ, ಸಣ್ಣ ಗಿಡಗಳನ್ನು ತುಂಡರಿಸಿ ವಿಕೃತ ಮನೋಭಾವ ತೋರಿಸಲಾಗುತ್ತಿದೆ ಎನ್ನು ತ್ತಾರೆ ಸ್ಥಳೀಯರು.

ಅರಣ್ಯ ಇಲಾಖೆ ಇತ್ತ ಗಮನ ಹರಿಸಲಿ

ದೇಶದ ಬೆಲೆ ಬಾಳುವ ಸಸ್ಯ ಸಂಪತ್ತು ಈ ರೀತಿಯಲ್ಲಿ ಹಾಳಾಗುತ್ತಿರುವುದು ಸರಿಯಲ್ಲ. ಇದೇ ರೀತಿ ಗಂಧದ ಗಿಡಗಳನ್ನು ಕಡಿಯುತ್ತಾ ಹೋದರೆ ಮುಂದಿನ ದಿನಗಳಲ್ಲಿ ಗಂಧದ ಮರಗಳೇ ಇಲ್ಲದಂತಾಗಬಹುದು ಎಂದು ಸ್ಥಳೀಯರು ಅಭಿಪ್ರಾಯ ಪಟ್ಟಿದ್ದಾರೆ. ಯಾವುದಕ್ಕೂ ಅರಣ್ಯ ಇಲಾಖೆ ತನ್ನ ತನಿಖೆಯನ್ನು ತೀವ್ರಗೊಳಿಸಿ ಆರೋಪಿಗಳ ವಿರುದ್ದ ಕೇಸು ದಾಖಲಿಸಲಿ.

Post a Comment

Previous Post Next Post