ದಿ:17/06/2023 ರಂದು ಅರಸೀಕೆರೆ ತಾ. ಗಂಡಸಿ ಹೋ. ಲಿಂಗಾಪುರ ಗ್ರಾಮದ ವಾಸಿಯಾದ 43ವರ್ಷ ವಯಸ್ಸಿನ ಶ್ಯಾಮ್‌ಸುಂದರ್‌ರವರು ಎಂ.ಕೆ.ರೋಡ್ ಲೈನ್ಸ್ನ ಲಾರಿಯನ್ನು ಅರಕಲಗೂಡುನಿಂದ ಲೋಡ್ ಮಾಡಿಕೊಂಡು ಹಾಸನದ ಚನ್ನಪಟ್ಟಣದಲ್ಲಿ ಅನ್‌ಲೋಡ್ ಮಾಡಿ, ಲಾರಿಯನ್ನು ಅಲ್ಲಿಯೇ ಬಿಟ್ಟು, ಕೆಎ51-ಕೆ1391 ರ ಬೈಕಿನಲ್ಲಿ ಹಾಲುವಾಗಿಲಿನ ಸಂಬAಧಿಕರ ಮನೆಗೆ ಹೋಗಿ ವಾಪಸ್ಸು ಅದೇ ದಿನ ರಾತ್ರಿ ಸುಮಾರು 08:40 ಗಂಟೆ ಸಮಯದಲ್ಲಿ ಹಾಲುವಾಗಿಲು ಕಡೆಯಿಂದ ಬಿಟ್ಟಗೌಡನಹಳ್ಳಿ ಸರ್ಕಲ್ ಕಡೆಗೆ ರಸ್ತೆಯ ಎಡಬದಿಯಲ್ಲಿ ಬರುತ್ತಿರುವಾಗ ಅದೇ ಸಮಯಕ್ಕೆ ಬಿಟ್ಟಗೌಡನಹಳ್ಳಿ ಸರ್ಕಲ್ ಕಡೆಯಿಂದ ಬಂದ ಕೆಎ41-ಪಿ1082 ಸಂಖ್ಯೆಯ ಕಾರನ್ನು ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಶ್ಯಾಮ್‌ಸುಂದರ್‌ರವರು ಹೋಗುತ್ತಿದ್ದ ಬೈಕ್‌ಗೆ ಮುಖಾಮುಖಿ ಡಿಕ್ಕಿಮಾಡಿದ ರಭಸಕ್ಕೆ ಬೈಕ್ ಸಮೇತ ಕಾರು ರಸ್ತೆಯ ಬದಿಗೆ ಪುಟ್‌ಪಾತ್‌ನಿಂದ ಆಚೆಗೆ ಸುಮಾರು 70ಅಡಿ ದೂರಕ್ಕೆ ಹೋಗಿ ಬಿದ್ದಿದ್ದು, ಶ್ಯಾಮ್ ಸುಂದರ್‌ರವರ ಬಲಗಾಲು ತುಂಡಾಗಿ ದೇಹದ ಭಾಗಗಳಿಗೆ ತೀವ್ರಸ್ವರೂಪದ ರಕ್ತಗಾಯಗಳಾಗಿದ್ದವರನ್ನು
ಹಾಸನ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು, ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದು, ಅಪಘಾತ ಮಾಡಿರುವ ಕಾರಿನ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಮೃತ ಶ್ಯಾಮ್ ಸುಂದರ್‌ರವರ ತಮ್ಮ ಸೋಮಶೇಖರರವರು ಹಾಸನ ಸಂಚಾರಿ ಪೊಲೀಸ್‌ಠಾಣೆಗೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ, ತನಿಖೆಕೈಗೊಂಡಿರುತ್ತೆ.