ವ್ಯಾನಿಟಿ ಬ್ಯಾಗ್‌ನಲ್ಲಿಟ್ಟುಕೊಂಡಿದ್ದ ಚಿನ್ನದ ಮುತ್ತಿನ ಸರ ಕಳವು




ಬೇಲೂರು ತಾ. ಮಾದಿಹಳ್ಳಿ ಹೋ. ಸಂಪಿಗೆ ಮರದ ಕೊಪ್ಪಲು ಗ್ರಾಮದ ವಾಸಿಯಾದ ಸರಸ್ವತಿ ಕೋಂ ನಾಗರಾಜೇಗೌಡರವರು ದಿ:12/06/2023 ರಂದು ಮೊಮ್ಮಗಳೊಂದಿಗೆ ಶಿವಮೊಗ್ಗಕ್ಕೆ ಹೋಗಲು ಹಾಸನಿಂAದ ಬಾಣಾವಾರಕ್ಕೆ ಹೋಗುವ ಬಸ್ಸಿನಲ್ಲಿ ಬೆಳಿಗ್ಗೆ ಸುಮಾರು 07:45 ಗಂಟೆ ಸಮಯದಲ್ಲಿ ಗ್ರಾಮದಿಂದ ಹೊರಟು ಹಳೇಬೀಡಿನಿಂದ ಬಾಣಾವಾರಕ್ಕೆ ಬಂದು ವ್ಯಾನಿಟಿಬ್ಯಾಗ್‌ನ್ನು ನೋಡಿಕೊಂಡಾಗ ಅದರೊಳಗಿಟ್ಟುಕೊಂಡಿದ್ದ ಮುತ್ತಿನಸರವನ್ನು ನೋಡಿಕೊಂಡಾಗ ಇಲ್ಲದೇ ಇದ್ದು, ಯಾರೋಕಳ್ಳರು ಬಸ್ಸಿನಿಂದ ಇಳಿಯುವಾಗ ವ್ಯಾನಿಟಿ ಬ್ಯಾಗಿನ ಜಿಪ್‌ನ್ನು ತೆಗೆದು ಸರವನ್ನು ಕಳವು ಮಾಡಿದ್ದು, 21ಗ್ರಾಂ 260ಮಿಲಿ ತೂಕದ ಡಾಲರ್ ಇರುವ ಚಿನ್ನದ ಮುತ್ತಿನ ಸರದ ಅಂದಾಜು ಬೆಲೆ 1,57,031/- ಗಳಾಗಿದ್ದು, ಪತ್ತೆಮಾಡಿಕೊಡಬೇಕೆಂದು ದಿ:19/06/2023 ರಂದು ಬಾಣಾವಾರ ಪೊಲೀಸ್ ಠಾಣೆಗೆ ಸರಸ್ವತಿರವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ, ತನಿಖೆಕೈಗೊಂಡಿರುತ್ತೆ.

Post a Comment

Previous Post Next Post