ಹಾನುಬಾಳು ಗ್ರಾಮದ ವಾಸಿಯಾದ ವಾಸೀಂಖಾನ್ ಕಾಣೆ

ಸಕಲೇಶಪುರ ತಾ. ಹಾನುಬಾಳು ಹೋ. ಹಾನುಬಾಳು ಗ್ರಾಮದ ವಾಸಿಯಾದ ತೌಫಿಯಾಬಾನು ರವರು ಈಗ್ಗೆ ಸುಮಾರು 11 ವರ್ಷಗಳ ಹಿಂದೆ ಹಾನುಬಾಳು ಗ್ರಾಮದ ಲೇ. ಬಾಷಾಖಾನ್ ರವರ ಮಗ ವಾಸಿಂಖಾನ್ ರವರನ್ನು ಮದುವೆಯಾಗಿ ಅನ್ಯೋನ್ಯವಾಗಿ ಸಂಸಾರ ಮಾಡಿಕೊಂಡಿದ್ದು, ನಂತರದ ದಿನಗಳಲ್ಲಿ ವಾಸೀಂಖಾನ್ ರವರು ಚಿಕ್ಕಪುಟ್ಟ ವಿಚಾರಕ್ಕೆ ಮನಸ್ತಾಪ ಮಾಡಿಕೊಂಡು ಮನೆಯಿಂದ ಹೋಗಿ ಒಂದು ವಾರ ಅಥವಾ 15 ದಿನಗಳ ನಂತರ ವಾಪಸ್ಸು ಮನೆಗೆ ಬರುತ್ತಿದ್ದು, ದಿ:16/04/2023 ರಂದು ವಾಸವಿರುವ ಕುಶಾಲನಗರ ಬಡಾವಣೆಯ ಮನೆಯಿಂದ ಗಲಾಟೆ ಮಾಡಿಕೊಂಡು ಮನೆಬಿಟ್ಟು ಹೋದವರು ಇದೂವರೆವಿಗೂ ಮನೆಗೆ ಬಾರದೇ ಇದ್ದು, ಪತ್ತೆಮಾಡಿಕೊಡಬೇಕೆಂದು ತೌಫಿಯಾಬಾನುರವರು ಸಕಲೇಶಪುರ ನಗರ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ, ತನಿಖೆಕೈಗೊಂಡಿರುತ್ತೆ. 

ಕಾಣೆಯಾದವರ ಚಹರ ಗುರುತು:ವಸೀಂಖಾನ್, 33ವರ್ಷ ವಯಸ್ಸು, 5’7 ಅಡಿ ಎತ್ತರ, ಕೋಲುಮುಖ, ಗೋಧಿಮೈಬಣ್ಣ, ಕನ್ನಡ, ಹಿಂದಿ, ತಮಿಳು, ಮಲಯಾಳಿ ಭಾಷೆ ಬಲ್ಲವರಾಗಿದ್ದು, ಇವರ ಸುಳಿವು ಸಿಕ್ಕಲ್ಲಿ ದೂರವಾಣಿ ಸಂಖ್ಯೆ 08173-244100 ಗೆ ಸಂಪರ್ಕಿಸುವುದು.





Post a Comment

Previous Post Next Post