ಹಜ್ ಯಾತ್ರೆ ಕೈಗೊಳ್ಳವರಿಗೆ ವಿಶೇಷ ತರಬೇತಿ ಶಿಬಿರ

ಅರಸೀಕೆರೆ : ನಗರದ ಎಂಎಂ ರಸ್ತೆಯಲ್ಲಿರುವ ಮದರಸೆ ಅಬು ಹೂರೆರದ ಹತ್ತಿರ ಸುನ್ನಿ ದಾವತೇ ಇಸ್ಲಾಮಿ ವತಿಯಿಂದ 2023ರ ಪವಿತ್ರ ಹಜ್ ಯಾತ್ರೆ ಕೈಗೊಳ್ಳುತ್ತಿರುವಂತವರಿಗಾಗಿ ಒಂದು ದಿನದ ಹಜ್ ತರಬೇತಿ ಶಿಬಿರವನ್ನು ಆಯೋಜಿಸಲಾಯಿತು.
ಈ ಶಿಬಿರವನ್ನು ಸುನ್ನಿ ಜಾಮಿಯಾ ಮಸೀದಿಯ ಧರ್ಮ ಗುರುಗಳಾದ ಮುಫ್ತಿ ಫಹಿಮುದ್ದೀನ್ ಖಾದ್ರಿ ರವರು ಫಾತೆಹ ಮಾಡುವುದರ ಮೂಲಕ ಉದ್ಘಾಟಿಸಿದರು.



ಈ ಶಿಬಿರದಲ್ಲಿ ಬೆಂಗಳೂರಿನಿಂದ ಆಗಮಿಸಿದಂತಹ ಖಾರಿ ಆಜ್ಮತುಲ್ಲ ರಜ್ವಿ ರವರು ಹಜ್ ಸಂದರ್ಭದಲ್ಲಿ ಕೈಗೊಳ್ಳಬೇಕಾಗಿರುವ ಅಂತಹ ಈಬಾದತ್ ಹಾಗೂ ಇನ್ನಿತರ ಹಲವು ಒಳ್ಳೆಯ ಕಾರ್ಯಗಳ ಬಗ್ಗೆ ವಿಸ್ತಾರವಾಗಿ ಹೇಳಿಕೊಟ್ಟರು.
ಹಜರತ್ ಮೌಲಾನಾ ಮುರಾದ್ ಅಲಿ ಸಾಬ್ ರವರು ಈ ಸಂದರ್ಭದಲ್ಲಿ ವಿಶೇಶ ಧುವ ಹಾಗೂ ಪ್ರವಚನ ನೀಡಿದರು.
ಸುನ್ನಿ ದಾವತೇ ಇಸ್ಲಾಮಿ ವತಿಯಿಂದ ನಗರದಿಂದ ಈ ವರ್ಷ ಪವಿತ್ರ ಹಜ್ ಯಾತ್ರೆ ಕೈಗೊಳ್ಳುತ್ತಿರುವಂತವರಿಗೆ ವಿಶೇಷವಾಗಿ ಸನ್ಮಾನಿಸಿ ಹಜ್ ಯಾತ್ರೆಯಲ್ಲಿ ಕೈಗೊಳ್ಳಬೇಕಾಗಿರುವ ಪವಿತ್ರ ಕಾರ್ಯಗಳ ಬಗ್ಗೆ ತಿಳಿಸಿರುವಂತ ಪುಸ್ತಕವನ್ನು ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸುನ್ನಿ ಮುಸ್ಲಿಂ ಜಮಾತ್ ಕಮೇಟಿಯ ಕಾರ್ಯದರ್ಶಿಗಳಾದ ರಿಯಾಜ್ ಅಹಮದ್ ಸುನ್ನಿ ದಾವತೆ ಇಸ್ಲಾಮಿ ಅರಸೀಕೆರೆ ಮುಖ್ಯಸ್ಥರಾದ ಸೈಯದ್ ಅಲಿಜಾನ್, ಸರ್ವರ್ ಅಹಮದ್, ಫರಹತ ಅಲಿ, ಮೊಹಮ್ಮದ್ ಶಾಪಿಖ್, ಮುಬಾರಕ್ ರಜ್ವಿ, ಫಯಾಜ್, ಪರ್ವಾಜ್, ಸಲ್ಮಾನ್, ರಿಯಾಜ್, ಮೊಹಮ್ಮದ್ ಮುಬಾರಕ್, ಹಾಗೂ ಇನ್ನಿತರರು ಉಪಸ್ಥಿತರಿದ್ದರು

Post a Comment

Previous Post Next Post