ಕೊಬ್ಬರಿ ಬೆಲೆ ಕೋಸಿದ ಪರಿಣಾಮ ನಫೆಡ್ ಮುಖಾಂತರ ಬೆಂಬಲ ಬೆಲೆಗೆ ರೈತರಿಂದ ಕೊಬ್ಬರಿ ಖರೀದಿಸಲು ಮುಂದಾಯಿತು ಅದರಲ್ಲಿ ಹಲವಾರು ನ್ಯೂನ್ಯತೆಗಳಿಂದ ರೈತರು ಪುನ ದಲ್ಲಾಳಿಗಳಿಗೆ ಮತ್ತು ವರ್ತಕರಿಗೆ ಕೊಬ್ಬರಿ ಮಾರುವ ಪರಿಸ್ಥಿತಿ ಬಂದು ಒದಗಿತ್ತು, ಉತ್ತರ ಭಾರತದಲ್ಲಿ ಕೊಬ್ಬರಿಗೆ ಬೇಡಿಕೆ ಇಲ್ಲದ ಕಾರಣ ಸಾಮಾನ್ಯವಾಗಿ 160₹ - 180₹ ಇರಬೇಕಾದ ದರ 77 ರೂಪಾಯಿಗೆ ಕುಸಿದಿದೆ ಕೆಜಿ ಟೊಮ್ಯಾಟೋ ನೂರು ರೂಪಾಯಿ ಕೆಜಿ ಕೊಬ್ಬರಿಗೆ 77₹ ಆಗಿರುವುದು ದುರ್ದೈವ ಎಂದು ರೈತ ಕಣ್ಣೀರು ಹಾಕುತ್ತಿದ್ದಾನೆ, ಇದಕ್ಕೆಲ್ಲಾ ಕಾರಣ ಸರ್ಕಾರ ರೈತ ತಂದ ಕೊಬ್ಬರಿಯನ್ನು ಎರಡು ಮೂರು ದಿನಗಳಾದರೂ ತೂಕ ಮಾಡದೆ ಇರುವುದು, ತದನಂತರ ಅಸಮರ್ಪಕ ಸರಕು ಸಾಗಾಣಿ ಮಾಡಲು ಗುತ್ತಿಗೆ ಕೊಟ್ಟಿರುವುದು ಆ ವ್ಯಕ್ತಿ ದಿನಕ್ಕೆ ಹತ್ತು ಲಾರಿ ಬೇಕಾದರೆ ಒಂದು ಎರಡು ಲಾರಿಗಳನ್ನು ಪೂರೈಸುವುದು, ಸರ್ಕಾರಕ್ಕೆ ಮಾರಿದ ಕೊಬ್ಬರಿ ಮೊತ್ತವನ್ನು ಪಡೆಯಲು ತಿಂಗಳುಗಟ್ಟಲೆ ರೈತ ಕಾಯುವ ಪರಿಸ್ಥಿತಿ ಇದೆಲ್ಲಾ ಅದರ ಪರಿಣಾಮ ನಫೆಡ್ ಬಂದರು ರೈತನಿಗೆ ಉಪಯೋಗವಾಗುತ್ತಿಲ್ಲ, ಇದನ್ನೆಲ್ಲಾ ವಿರೋಧಿಸಿ ಕೆಲವು ರೈತ ಮುಖಂಡರು ದಿನಾಂಕ 07.07.2023.ಶುಕ್ರವಾರ.ಬೆಳಗ್ಗೆ 11.00 ಗಂಟೆಗೆ.ಅರಸೀಕೆರೆ ಎಪಿಎಂಸಿ ಗೇಟ್ ಬೀಗ ಹಾಕಿ.ಕೊಬ್ಬರಿಗೆ 20000 ಬೆಂಬಲ ಬೆಲೆ ಘೋಷಣೆ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಂಡಿದ್ದಾನೆ. ಮತ್ತು ಎಪಿಎಂಸಿ ಇಂದ ಕೊಬ್ಬರಿ ಹೊರಗೆ ಹೋಗದ ಹಾಗೆ. ಸಂಪೂರ್ಣ ಬಂದ್ ಮಾಡಲು ಸಿದ್ದರಾಗಿದ್ದಾರೆ.
ಸರ್ಕಾರಕ್ಕೆ ಬುದ್ಧಿ ಬರುವುದ ಕಾದು ನೋಡಬೇಕು
Tags
ಅರಸೀಕೆರೆ